ಇಳೆ-ಆಕಾಶದ ಒಲವೀ ಮಳೆಯು

ಇಳೆ-ಆಕಾಶದ ಒಲವೀ ಮಳೆಯು,
ಹಳೆ ಅನುರಾಗದ ಹೊಸ ನವಿರಲೆಯು..

ವಿರಹದಿ ಬೆಂದಾ ಬ್ರಹ್ಮನ ಬಾಲೆ,
ಬರೆದಳು ಗಗನಕೆ ಒಲವಿನ ಓಲೆ..
ಹೊತ್ತವು ಮೇಘಗಳಾ ಪ್ರೇಮದ ಹಾಳೆ,
ಕಟ್ಟಲು ಪ್ರಣಯದ ಸವಿ ಸಂಕೋಲೆ..

ಆ ದೇವನು ಇಟ್ಟ ಶುಭ ಘಳಿಗೆಯಲಿ,
ಭೂಮಿಯ ಕೊರಳಿಗೆ ಹನಿಮಣಿಗಳ ತಾಳಿ..
ಗುಡುಗು ಸಿಡಿಲಿನ ವಾದ್ಯವ ಕೇಳಿ,
ಹರಸಿತು ಬೀಸುತಾ ಆ ತಂಗಾಳಿ..

ಮೈಮರೆಯಲು ಮಳೆಯಲಿ ಆಗಸ-ಭುವನ,
ರಸಗತ್ತಲೆ ಸುರಿದರು ಆ ರತಿ-ಮದನ..
ಮುತ್ತಿನ ಮಣಿಗಳ ಮತ್ತೇರಿಸೊ ಚುಂಬನ,
ಕರಿಮೋಡದ ಹೊದಿಕೆಯೇ ಆ ರಸ ಸದನ..

ಪ್ರೇಮದ ವರ್ಷದ ಋತುವಾಗಮನ,
ಭುವನದ ಬಹುದಿನ ವಿರಹದ ಹನನ..
ಒಂದಾಗಿಹವಿಲ್ಲಿ ಇಳೆಯಾಗಸ ಚೇತನ,
ಇದು, ಸೃಷ್ಟಿಯ ಕಾರ್ಯದ ಮೊದಲನೆ ಮಿಲನ..

ಇಳೆ ಆಕಾಶದ ಒಲವೀ ಮಳೆಯು,
ಹಳೆ ಅನುರಾಗದ ಹೊಸ ನವಿರಲೆಯು..

-ಹಶಿ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW