ಲೇಖಕ, ನಟ, ನಿರ್ದೇಶಕರಾದ ಪ್ರಕಾಶ ರೈ ಅವರ ‘ಇರುವುದೆಲ್ಲವ ಬಿಟ್ಟು’ ಪುಸ್ತಕದ ಕುರಿತು ಯುವ ಪತ್ರಕರ್ತ ಸೋಮಶೇಖರ ತಾಳಿಕೋಟೆ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಓದಿ…
ಪುಸ್ತಕ: ಇರುವುದೆಲ್ಲವ ಬಿಟ್ಟು
ಲೇಖಕರು : ಪ್ರಕಾಶ ರೈ
ಪ್ರಕಾಶನ : ಸಾವಣ್ಣ ಪ್ರಕಾಶನ
ಪುಟ : ೧೫೦/
ಲೇಖಕ, ನಟ, ನಿರ್ದೇಶಕರು ಆಗಿರುವ ಪ್ರಕಾಶ್ ರೈ ಅವರು ಬರೆದಿರುವ ‘ಇರುವುದೆಲ್ಲವ ಬಿಟ್ಟು’ ಪುಸ್ತಕವು ಹೆಸರೇ ಸೂಚಿಸುವಂತೆ ಜೀವನ ಹೇಗೆ ಬರುತ್ತೋ ಹಾಗೆ ಹೋಗ್ಬೇಕು ಅನ್ನೋದನ್ನ ಪುಸ್ತಕದುದ್ದಕ್ಕೂ ತಮ್ಮ ನೈಜ ಜೀವನದ ಅನುಭವಗಳೊಂದಿಗೆ ಬದುಕು ಏನೆಂಬುದನ್ನು ಓದುಗರಿಗೆ ಅರ್ಥೈಸಲು ಪ್ರಯತ್ನಿಸಿದ್ದಾರೆ..
ಬದುಕಿನಲ್ಲಿ ದಿನವೂ ವಿಭಿನ್ನ ಅನುಭವ, ಇನ್ನೂ ಕೆಲವೊಮ್ಮೆ ವಿಚಿತ್ರವೂ ಅನಿಸುತ್ತೆ.. ಹಾಗೆ ಪುಸ್ತಕ ಓದುತ್ತಾ ಹೋದಂತೆ ನಮ್ಮ ಜೀವನದಲ್ಲೂ ನಡೆದಿರುವಂತಹ ಅಥವಾ ನಡೆಯಬಹುದಾದ ಯಾರೋ ಹೇಳಿದ ವಿಚಾರಕ್ಕೆ ತೀರಾ ಯೋಚಿಸುವುದನ್ನು ಬಿಟ್ಟುಬಿಡಬೇಕು ಎಂಬುದರ ಬಗ್ಗೆ ನಿರ್ದೇಶಕರು ತಿಳಿಸಿದ್ದಾರೆ..
ಯಾವುದೋ ವಿಚಾರದಲ್ಲಿ ಯಾರೋ ಹೇಳಿದ್ದನ್ನ ಕೇಳಿ ಅವರು ಹೇಳಿದ್ದೇ ಸರಿ ಎನ್ನೋ ಹಾಗೆ ಸುಮ್ನೆ ಕುತ್ಕೊಬಾರ್ದು.. ನಮಗೇನು ಮಾಡ್ಬೇಕು ಅನ್ಸುತ್ತೊ ಅದನ್ನೇ ಮಾಡ್ಬೇಕು.. ನಮ್ಮ ಮನಸ್ಸು ಏನನ್ನ ಹೇಳುತ್ತೋ ಅದನ್ನ ಕೇಳಬೇಕು ಹೊರತು ಮೆದುಳಿನ ಮಾತನ್ನಲ್ಲ ಎಂದು ಎಲ್ಲರಿಗೂ ತಿಳಿಯುವಂತೆ ಅದ್ಬುತವಾಗಿ ವಿವರಿಸಿ ಹೇಳಿದ್ದಾರೆ.

ಇನ್ನೂ ಎಲ್ಲರೂ ಕೇಳಿರುವಂತಹ ಅಥವಾ ಅನುಭವಿಸಿರುವ ವಿಚಾರವೇ ಆಗಿರುವ ಪುರುಷ ಪ್ರಾಧಾನ್ಯತೆಯ ಬಗ್ಗೆಯೂ ಅರ್ಥವಾಗುವಂತೆ ತಮ್ಮ ಜೀವನದ ಅನುಭವಗಳೊಂದಿಗೆ, ಈಗಿನ ದಿನಗಳಲ್ಲಿ ಪುರುಷ & ಮಹಿಳೆ ಇಬ್ಬರಲ್ಲಿ ಯಾರೇ ತಪ್ಪು ಮಾಡಿದರೂ ಸಹಿತ ದೋಷಿಸೋದು ಮಾತ್ರ ಮಹಿಳೆಯರನ್ನೇ ಏಕೆ..? ಒಬ್ಬ ಪುರುಷ ತಪ್ಪು ಮಾಡಿದರೆ ಅವ್ನು ಪುರುಷ ಏನು ಮಾಡಿದ್ರು ನಡೆಯುತ್ತೆ ಎಂಬ ಭಾವನೆ ಏಕೆ..? ಎಂದು ಮನುವಾದದ ಪುರುಷ ಪ್ರಾಧಾನ್ಯತೆ ಬಗ್ಗೆ ಎಲ್ಲರಿಗೂ ಅರ್ಥವಾಗುವಂತೆ ಬಿಚ್ಚಿಟ್ಟಿದ್ದಾರೆ.. ಲೇಖಕರು ಹೇಳಿದಂತೆಯೇ ಈಗಿನ ಸಮಾಜದಲ್ಲಿ ಒಬ್ಬ ಪುರುಷ ಏನೇ ಮಾಡಿದ್ರು ಆತನಿಗೆ ಪ್ರಶ್ನಿಸಲ್ಲ.. ಅದೇ ಒಂದು ಹೆಣ್ಣು ಚಿಕ್ಕ ತಪ್ಪನ್ನ ಮಾಡಿದ್ರೆ ಅಥವಾ ಪುರುಷನಾದವನಿಗೆ ಪ್ರಶ್ನಿಸಿದರೆ ಅವಳನ್ನ ಸಮಾಜ ನೋಡುವ ದೃಷ್ಟಿಕೋನವೇ ಬದಲಾಗುತ್ತೆ ಇದೆಲ್ಲದರ ಬಗ್ಗೆ ಜನರಿಗೆ ಅರ್ಥವಾಗುವಂತೆ ಮಹಿಳೆಯೂ ಪುರುಷನಷ್ಟೇ ಸಮಾನಳು ಎಂಬ ಅಂಶವನ್ನೂ ವಿವರಿಸಿದ್ದಾರೆ.

‘ಇರುವುದೆಲ್ಲವ ಬಿಟ್ಟು’ ಪುಸ್ತಕ ಬಿಡುಗಡೆ ಸಮಾರಂಭ
ಅಷ್ಟೇ ಅಲ್ಲದೇ ಎಲ್ಲರಿಗೂ ಅವರವರದೇ ತೆವಲುಗಳ ಮಧ್ಯೆ ಯಾರೊಂದಿಗೂ ಚೆನ್ನಾಗಿರದೆ ಮನಸ್ತಾಪಗಳು ಉಂಟಾಗುವ ಬಗ್ಗೆಯೂ, ಮಾತನಾಡದೇ ಸುಮ್ಮನೇ ಇಬ್ಬರೂ ಇಗೋ ತೋರಿಸುವ ಬಗ್ಗೆಯೂ ತಿಳಿಸಿದ್ದಾರೆ.. ಇನ್ನೂ ಗೊತ್ತಿಲ್ಲದಿರುವ ಪ್ರದೇಶಕ್ಕೆ ಹೋದಾಗ ಅಲ್ಲಿ ನಾವು ಹೇಗಿರುತ್ತವೆ..? ಏನು..? ನಮ್ಮನ್ನ ಎಷ್ಟು ಜನ ಹುಡುಕುತ್ತಾರೇ.. ಅದು ನಮಗೋಸ್ಕರದ ಹುಡುಕಲ್ಲದೆ ಮತ್ತೋಬ್ಬರಿಗೋಸ್ಕರ ನಮ್ಮನ್ನ ಹುಡುಕುವುದು.. ನಮಗೋಸ್ಕರ ಒಬ್ಬರನ್ನ ಮತ್ತೊಬ್ಬರು ಬೈದುಕೊಳ್ಳುವುದು ಹೀಗೆ ಏನೆಲ್ಲಾ ಆಗುವ ಸಂಭವಗಳು ಇರುತ್ತವೆ ಎನ್ನುವ ಬಗ್ಗೆಯೂ ತಮಗನ್ನಿಸಿದ & ತಮಗಾದ ಅನುಭವವನ್ನು ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ..
ಹೀಗೆ ಪುಸ್ತಕವನ್ನ ಓದಿದ ಪ್ರತಿಯೊಬ್ಬರಿಗೂ ತಾವೂ ಈ ಹಿಂದೆ ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳ ಅರಿವಾಗಿ ಸಂವೇದನಾಶೀಲತೆಯಿಂದ ಇನ್ಮುಂದೆ ಜೀವಿಸುವ ಬಗ್ಗೆ ಚಿಂತಿಸುವಂತೆ ಪುಸ್ತಕವು ಪ್ರೇರೇಪಿಸುತ್ತದೆ..
- ಸೋಮಶೇಖರ ತಾಳಿಕೋಟೆ – ಪತ್ರಕರ್ತರು, ಯುವ ಬರಹಗಾರರು, ಬೆಂಗಳೂರು.
