ಯುವ ಕವಿ ಜಬಿ ಎಂ ವಿಜಯಪುರ ಅವರ ಲೇಖನಿಯಲ್ಲಿ ಮೂಡಿದ ಹನಿಗವನಗಳು, ತಪ್ಪದೆ ಓದಿ …
ಬಾಳ ಪಯಣ :
ಕಿರುಬೆರಳ ಹಿಡಿದು
ಬಾಳ ಪಯಣ ಸಾಗಿಸಿಬಿಡುವೆ
ನಿನ್ನೊಂದಿಗೆ ಹಿಡಿದ ಬೆರಳುಗಳ
ಹಿಡಿತ ಸಡಿಲವಾಗದಿರಲಿ..
ಒಂದನ್ನು ಬಯಸುವೆ
ಜೊತೆಗಿರುವೆಯಾ ನನ್ನೊಂದಿಗೆ
ನಾ ಗೋರಿ ಸೇರುವ ಹಾದಿಯಲ್ಲಿ
ನಿನ್ನವೂ ನಾಲ್ಕು ಹೆಜ್ಜೆಗಳಿರಲಿ..
***
ನೀನಲ್ಲವೇ :
ಕಪ್ಪು ಬಿಳುಪು ಕಂಗಳಲ್ಲಿ
ಕನಸುಗಳ ಗೋಪುರ ಕಟ್ಟಿದವಳು
ನೀನಲ್ಲವೇ…
ಕತ್ತಲ ಮನವ ಬೆಳಗುವ ಹಕ್ಕು
ನಿನ್ನದಲ್ಲವೆ…
****
ಹೆಮ್ಮೆ :
ನಿನ್ನ ನೂರು ಹುಚ್ಚುಗಳಲ್ಲಿ
ನಾನೂ ಒಂದೆಂಬ ಹೆಮ್ಮೆ
ನನಗಿದೆ……
****
ತಿರಸ್ಕಾರ :
ಒಮ್ಮೆ ಬೇಡವಾದ ಮೇಲೆ
ತಗ್ಗಿದರೇನು ಬಗ್ಗಿದರೇನು
ತಗ್ಗಿದರೆ ತಲೆ ಮೇಲೆ…
ಬಗ್ಗಿದರೆ ಬೆನ್ನಮೇಲೆ….
- ಜಬಿ ಎಂ ವಿಜಯಪುರ, ಬಿಜಾಪುರ.
