ರಾಜಸ್ತಾನದ ಪುಷ್ಕರ್ – ಬ್ರಹ್ಮನಿಗಾಗಿ ಇರುವ ಏಕೈಕ ದೇವಾಲಯ

ರಾಜಸ್ತಾನ ಎಂದರೆ ಸುತ್ತಲೂ ಕಣ್ಣಿಗೆ ಕಟ್ಟುವುದು ಮರಳುಗಾಡಿನ ಮರುಭೂಮಿ ಪ್ರದೇಶ. ಅಲ್ಲಿ ಒಂಟೆಗಳ ಸಾಲುಗಳು, ಅಲ್ಲೊಮ್ಮೆ- ಇಲ್ಲೊಮ್ಮೆ ಕಾಣುವ ಮುಖವನ್ನು ಸೆರಗಿನಲ್ಲಿ ಮುಚ್ಚಿಕೊಂಡು ಓಡಾಡುವ ಹೆಂಗಸರು ಮತ್ತು ತಲೆಗೆ ಬಣ್ಣ ಬಣ್ಣದ ರಂಗಿನ ಪೇಟದ ಉದ್ದ ಮೀಸೆಯ ಗಂಡಸರು. ಇವುಗಳ ಮಧ್ಯೆದಲ್ಲಿ ರಾಜ ಮಹಾರಾಜರ ಸುಂದರವಾದ ಅರಮನೆಗಳು. ಇಷ್ಟನ್ನು ಶಾಲಾ ಕಾಲೇಜುಗಳು ತಮ್ಮ ಪಠ್ಯ-ಪುಸ್ತಕಗಳಲ್ಲಿ ರಾಜಸ್ತಾನದ ಕಿರುಪರಿಚಯವನ್ನು ಮಾಡಿವೆ.

amma
(ಪುಷ್ಕರ್ ನಲ್ಲಿರುವ ಬ್ರಹ್ಮ ದೇವಾಲಯ)
amma
(ಬ್ರಹ್ಮ ಸರೋವರ )

ಇಷ್ಟನ್ನು ಹೊರತು ಪಡಿಸಿ ರಾಜಸ್ತಾನದಲ್ಲಿ ಮತ್ತೇನಿದೆ ಎಂದು ಹುಡುಕುತ್ತ ಹೊರಟರೆ ಪುಷ್ಕರ್ ಎನ್ನುವ ಪುಣ್ಯಕ್ಷೇತ್ರ ಕಾಣಸಿಗುತ್ತದೆ. ರಾಜಸ್ತಾನದ ಅಜ್ಮಿರ ನಗರದಿಂದ ಹದಿನೈದು ಕಿಲೋಮೀಟರ್ ದೂರದಲ್ಲಿದೆ ಈ ಪುಷ್ಕರ್ ಪುಣ್ಯಕ್ಷೇತ್ರವಿದೆ. ಪುಷ್ಕರವನ್ನು ಪುಣ್ಯತೀರ್ಥಗಳ ರಾಜವೆಂದು ಕೂಡ ಕರೆಯುತ್ತಾರೆ. ಪುಷ್ಕರನಲ್ಲಿ ೪೦೦ ದೇವಾಲಯಗಳಿದ್ದು ಅಲ್ಲಿ ಬ್ರಹ್ಮ ದೇವನ ದೇವಾಲವಿರುವುದು ವಿಶೇಷ. ಜಗತ್ತಿನಲ್ಲಿ ಬ್ರಹ್ಮನಿಗಾಗಿ ಇರುವ ಏಕೈಕ ದೇವಾಲಯ ಇದಾಗಿದೆ.

ಅಲ್ಲಿಯೇ ಬ್ರಹ್ಮ ಸರೋವರವಿದ್ದು, ಅದಕ್ಕೆ ಐತಿಹಾಸಿಕ ಕತೆಗಳಿವೆ. ಬ್ರಹ್ಮದೇವನು ೧೦,೧೦೧ ತಪಸ್ಸನ್ನು ಮುಗಿಸಿದ ಮೇಲೆ ಅವನ ಕೈಯಿಂದ ಕಮಲವು ಜಾರಿ ತಿರುಗುತ್ತ ಬ್ರಹ್ಮಾಂಡದ ಮೇಲೆ ಬಿದ್ದಿತಂತೆ, ಆಗ ಉತ್ಪತ್ತಿಯಾಗಿದ್ದೆ ಈ ಬ್ರಹ್ಮ ಸರೋವರ ಎಂದು ಅಲ್ಲಿನ ಅರ್ಚಕರಾದ ಪಂಡಿತ ಹರಿ ಗೋಪಾಲ್ ಅವರು ಅಲ್ಲಿನ ಪುಣ್ಯ ಕ್ಷೇತ್ರದ ಮಹಿಮೆ ಬಗ್ಗೆ ಹೇಳುತ್ತಾರೆ.

ಅವರ ಪ್ರಕಾರ ಕಮಲದಿಂದ ಎರಡು ದಳಗಳು ಇನ್ನೆರಡು ಸ್ಥಳಗಳಲ್ಲಿ ಬಿದ್ದ ಪರಿಣಾಮ ಮೂರೂ ಪುಷ್ಕರಗಳು ಹುಟ್ಟಿವೆ. ಅದರಲ್ಲಿ ಮೊದಲನೇಯದನ್ನು ಜೇಷ್ಠ, ಎರಡನೇಯದನ್ನು ಮಧ್ಯಮ ಹಾಗು ಮೂರನೇಯದನ್ನು ತನಿಷ್ಠ ಎಂದು ಕರೆಯುತ್ತಾರೆ.  ಪುಷ್ಕರವನ್ನು ಬ್ರಹ್ಮ ದೇವನ ನಗರಿಯೆಂದೇ ಕರೆಯುತ್ತಾರೆ. ಏಕೆಂದರೆ ಸತ್ಯುಕ್ತದಲ್ಲಿ ಪುಷ್ಕರ್, ದ್ವಾಪರ ಯುಗದಲ್ಲಿ ನೇಮಿಸಾರನ, ತ್ರೇತಾಯುಗದಲ್ಲಿ ಕುರುಕ್ಷೇತ್ರ, ಕಲಿಯುಗದಲ್ಲಿ ಗಂಗಾ ಈ ಪುಷ್ಕರ ಪುಣ್ಯಕ್ಷೇತ್ರವಾಗಿತ್ತು ಎನ್ನುವುದು ಅವರ ನಂಬಿಕೆ.

ಪುಷ್ಕರದಲ್ಲಿ ಭಜನೆ, ಜಪ ಮಾಡುವುದು ಮತ್ತು ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆಯಂತೆ. ರಾಮ ತನ್ನ ಅಪ್ಪ-ಅಮ್ಮನ ಶ್ರಾದ್ಧವನ್ನು ಈ  ಪುಷ್ಕರನಲ್ಲೇ ಮಾಡಿದ್ದು , ಮತ್ತು ಅಕಾಲದಲ್ಲಿ ಮರಣ ಹೊಂದಿದವರ ಶ್ರಾದ್ಧವನ್ನು ಇಲ್ಲೇ ಮಾಡುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎನ್ನುವ ಪ್ರತೀತಿಗಳಿವೆ.

amma
(ಪಶು ಮೇಳದಲ್ಲಿ ಬಿಡಾರ ಹೂಡಿರುವ ಒಂಟೆಗಳು)

ಕಾರ್ತೀಕ ಮಾಸದ ಏಕಾದಶಿ ಪೂರ್ಣಿಮೆಯಂದು ಈ ಪುಷ್ಕರ ಪುಣ್ಯ ಕ್ಷೇತ್ರದಲ್ಲಿ ಬ್ರಹ್ಮನಿಗೆ ಹಾಗು ಬ್ರಹ್ಮ ಸರೋವರದಲ್ಲಿ ಪೂಜೆ, ಪುನಸ್ಕಾರಗಳು ಗಂಗಾ ದೇವಿಯ ಪೂಜೆಯಂತೆ ಅದ್ದೂರಿಯಾಗಿ ನಡೆಯುತ್ತವೆ. 

ಅಷ್ಟೇ ಅಲ್ಲದೆ ಕಾರ್ತೀಕ ಮಾಸದ ಆರಂಭದಿಂದ ಕೊನೆಯವರೆಗೂ ನಡೆಯುವ ಪುಷ್ಕರ ಜಾತ್ರೆಯು ಜಗತ್ತವಿಖ್ಯಾತಿಯಾಗಿದೆ. ಈ ಜಾತ್ರೆಯನ್ನು ಒಂಟೆಗಳ ಹಬ್ಬವೆಂದೇ ಕರೆಯುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ಒಂಟೆಗಳು, ಕುದುರೆಗಳು ಸೇರಿದಂತೆ ಹಲವಾರು ಪಶು ಪ್ರಾಣಿಗಳು ಈ ಜಾತ್ರೆಯಲ್ಲಿ ಭಾಗವಹಿಸುತ್ತವೆ. ಒಂಟೆಯನ್ನು ಅಲಂಕಾರದ ವಸ್ತುಗಳಿಂದ ಅಲಂಕಾರವನ್ನು ಮಾಡಿರಲಾಗುತ್ತದೆ. ಅಲ್ಲಿ ಅವುಗಳನ್ನು ಕೊಳ್ಳುವ ಮತ್ತು ಮಾರಾಟವನ್ನು ಮಾಡಲಾಗುತ್ತದೆ. ವಿಶ್ವದಲ್ಲೇ ಇದು ಬಹುದೊಡ್ಡ ಪಶುಮೇಳವೆಂದೇ ಖ್ಯಾತಿ ಪಡೆದಿದೆ. 

amma
(ಮೀಸೆಯ ಆಟದಲ್ಲಿ ವಿಜೇತರಾದ ಸ್ಪರ್ಧಿ )

ಈ ಜಾತ್ರೆಯ ಮತ್ತೊಂದು ವಿಶೇಷತೆಂದರೆ ಹಲವಾರು ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಅದರಲ್ಲಿ ಮಡಿಕೆಯ ಹೊತ್ತು ಓಡುವ ಸ್ಪರ್ಧೆ, ಒಂಟೆಗಳ ಓಟದ ಸ್ಪರ್ಧೆ , ಬಣ್ಣದ ಪೇಟ ಧರಿಸುವ ಸ್ಪರ್ಧೆಗಳು, ಉದ್ದದ ಮೀಸೆ ಆಟದ ಸ್ಪರ್ಧೆ ಸೇರಿದಂತೆ  ಹತ್ತು ಹಲವಾರು ಸ್ಪರ್ಧೆಗಳು ನೋಡುಗರಿಗೆ ಮತ್ತು ಭಾಗವಹಿಸುವವರಿಗೆ ಉತ್ಸಹವನ್ನು ತುಂಬುತ್ತದೆ. ಮೀಸೆ ಆಟದಲ್ಲಿ ಭಾಗವಹಿಸುವ ಸ್ಪರ್ಧಿಗಳು ಈ ಸ್ಪರ್ಧೆಗಾಗಿ ವರ್ಷಾನುಗಂಟಲೇ ಮೀಸೆಯನ್ನು ಬೆಳೆಸಿರುತ್ತಾರೆ. ಮೀಸೆಯ ಉದ್ದ, ಗುಣಮಟ್ಟವನ್ನು ನೋಡಿ ಬಹುಮಾನವನ್ನು ನೀಡಲಾಗುತ್ತದೆ. ಅದು ಪುರುಷರಿಗೆ ಹೆಮ್ಮೆಯ ಆಟವಾದರೆ, ರಾಜಸ್ತಾನದ ಭೂಮರ್ ನೃತ್ಯ ಹೆಣ್ಣುಮಕ್ಕಳ ಹೆಮ್ಮೆಯಾಗಿದೆ.

ಸಾವಿರಾರು ಹೆಣ್ಣುಮಕ್ಕಳು ಈ ಭೂಮಾರ್ ನೃತ್ಯದಲ್ಲಿ ಪಾಲ್ಗೊಂಡು ಸಂತೋಷ ಪಡುತ್ತಾರೆ. ಇದರಲ್ಲಿ ಯಾವುದೇ ವಯಸ್ಸಿನ ಅಂತರವಾಗಲಿ, ಜಾತಿ ಭೇದವಿಲ್ಲದೆ ನೃತ್ಯ ಮಾಡುತ್ತಾರೆ.  ಈ ನೃತ್ಯದಲ್ಲಿ ವಿದೇಶಿ ಹೆಣ್ಣುಮಕ್ಕಳು ಪಾಲ್ಗೊಂಡು ಅದರ ಆನಂದ ಪಡೆಯುತ್ತಾರೆ. ಕಳೆದ ವರ್ಷ ೨೧೫೦ ಹೆಣ್ಣುಮಕ್ಕಳು ಭೂಮಾರ್ ನೃತ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಲಿಮ್ಕಾ ದಾಖಲೆಯನ್ನು ಬರೆದಿದ್ದಾರೆ. ಏಳು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಪಾಲ್ಗೊಳ್ಳಲು ದೇಶ ವಿದೇಶದಿಂದ ಲಕ್ಷಾಂತರ ಜನರು ಗುಂಪು ಗುಂಪಾಗಿ ಇಲ್ಲಿಗೆ ಬರುತ್ತಾರೆ.

amma
(ಅಜ್ಮಿರ್ ಷರೀಫ್ ದರ್ಗಾ )

ಪುಷ್ಕರ್ ತಲುಪುವ ಮಾರ್ಗ :

ರಾಜಧಾನಿ ದೆಹಲಿಯಿಂದ ಅಜ್ಮಿರಗೆ ರೈಲುಗಳಿವೆ ಅಥವಾ ವಿಮಾನದಲ್ಲಿ ತೆರಳುವುದಾದರೆ ಕಿಷಣಗಾರ್ಹ್ ವಿಮಾನ ನಿಲ್ದಾಣವು ಅಜ್ಮಿರ ಗೆ ಹತ್ತಿರವಾಗಿದೆ. ಅಜ್ಮಿರಲ್ಲೂ ನೋಡುವಂತಹ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ.

ಅದರಲ್ಲಿ ಅಜ್ಮಿರ್ ಷರೀಫ್ ದರ್ಗಾ ಕೂಡ ಒಂದಾಗಿದೆ. ಈ ದರ್ಗಾದಲ್ಲಿ ಸಾಕಷ್ಟು ಜನರು ತಮ್ಮ ಹರಿಕೆಯನ್ನು ಕಟ್ಟಿಕೊಳ್ಳುತ್ತಾರೆ. ಹಿಂದೂ-ಮುಸ್ಲಿಮ ಎನ್ನದೆ ಭಕ್ತಾದಿಗಳು ಪ್ರತಿನಿತ್ಯ ಸಾಲು ಸಾಲಾಗಿ ಬರುತ್ತಲೇ ಇರುತ್ತಾರೆ. ಒಂದು ದಿನ ಅಜ್ಮಿರ್ ನಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಮಾರನೆಯ ದಿನ ಪುಷ್ಕರ್ ಗೆ ತೆರಳಬಹುದು. 

ಅಜ್ಮಿರ್ ದಿಂದ ಪುಷ್ಕರ್ ತಲುಪಲು ರಾಜಸ್ತಾನದ ಸರ್ಕಾರಿ ಬಸ್ ಗಳಲ್ಲಿ ಹೋಗುವುದು ಉತ್ತಮ. ಟಿಕೆಟ್ ದರವು ಟ್ಯಾಕ್ಸಿಗಳಿಗಿಂತ ಕಮ್ಮಿಯಾಗಿರುತ್ತದೆ. ಪುಷ್ಕರ್ ಪುಣ್ಯಕ್ಷೇತ್ರದಲ್ಲಿ ನಡೆಯುವ ಪೂಜೆ ಮತ್ತು ಜಾತ್ರೆ ವಿಶಿಷ್ಠ ಹಾಗು ವಿಭಿನ್ನ ಅನುಭವವನ್ನು ಕೊಡುತ್ತದೆ.  ಜೀವನದಲ್ಲಿ ಒಮ್ಮೆಯಾದರೂ ಈ ಜಾತ್ರೆಗೆ ಖಂಡಿತ  ಭೇಟಿ ಕೊಡಿ.

ಲೇಖನ : ಶಾಲಿನಿ ಹೂಲಿ ಪ್ರದೀಪ್

bf2fb3_c5eaf523bb1e481493169ef2aac381a9~mv2.jpg

( ಸೂಚನೆ :  ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)

ಇತರೆ ಲೇಖನಗಳು : 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW