ಸೂರ್ಯವಂಶದ ಕರುಳಿನ ಕುಡಿಯಲ್ಲಿ, ಕನ್ನಡ ನುಡಿಯ ಗುಡಿಯಲ್ಲಿ ಕುಮಾರನಾಗಿ ಜನಿಸಿದನು
ತಾಯಿಗೆ ಚಿನ್ನದಂಥ ಮಗನಾಗಿ, ತಾಯ್ನಾಡಿಗೆ ಬಂಗಾರದ ಕಳಶವಾಗಿ ಮೈಸೂರು ರತ್ನನೆನಿಸಿದನು
ಅಭಿಮಾನಿಗಳ ಅಭಿಮಾನಕ್ಕಾಗಿ ಜೀವನ ಇಟ್ಟ
ರಾಜಾಧಿರಾಜ, ವೀರಾಧಿವೀರ ರಾಜನ ಹೆಸರಲಿ
ಅಭಿಮಾನದಿಂದ ಆಳಿದ
ಮರೆಯದ ಮಾಣಿಕ್ಯನಾಗಿ ಜನಮನದಲ್ಲಿ ಅಳಿಯದೇ ಉಳಿದ
ಗಂಧದ ನಾಡಿನ ಚೆಂದದ ಚೆಲುವ
ಅಭಿಮಾನಿಗಳ ನಮ್ಮ ಅಭಿನವ ಭಾರ್ಗವ||
ಅಕ್ಷಯ ಪ್ರೇಮದ ರುಕ್ಮಿಣಿಗೆ ಕೃಷ್ಣನಾದ
ಮಿಥಿಲೆಯ ಸೀತೆಗೆ ರಾಮನಾದ ಕನ್ನಡ ನಾಡಿಗೆ ಜನನಾಯಕನಾದ
ವೀರಪ್ಪನಾಯ್ಕನಾಗಿ ದೇಶ ಭಕ್ತಿ ತೋರಿದ
ತನುಮನದಿಂದ ನಮ್ಮೂರ ರಾಜನಾಗಿ ಜನಮನ ಗೆದ್ದ.
ಕರುನಾಡಿನ ಈ ಕರುಣಾಮಯಿ
ಮುತ್ತಿನ ಹಾರದ ನಮ್ಮ ಸಿಪಾಯಿ||
ಒಲುಮೆ ಸಿರಿಯ ಕಂಡು, ಬಂಗಾರದ ಜಿಂಕೆಯ ತಂದು ಒಲವ ಗಳಿಸಿ ಶ್ರೀರಾಮನಂತೆ ಜೀವಿಸಿ ಮಹಾಪುರುಷನಾದನು
ಕೋಟಿಗೊಬ್ಬ ಹೃದಯವಂತ, ಗುಣದಲ್ಲಿ ಒಬ್ಬ ಸಿರಿವಂತ
ಕನ್ನಡಕುಲಕ್ಕೆ ಇವನೆಂದೂ ಸ್ವಂತ
ಜಗದೇಕ ವೀರ, ಗಂಡುಗಲಿ ರಾಮ ಮತ್ತೊಮ್ಮೆ ನಮ್ಮ ನಾಡಲ್ಲೆ ಜನಿಸಲಿ
ಸಿಂಹಾದ್ರಿಯ ಸಿಂಹನಂತೆ ಸಾಮ್ರಾಟನಾಗಿ ನಮ್ಮ
ಕರುನಾಡಲ್ಲೆ ಜೀವಿಸಲಿ
ಬಂಗಾರದ ನಾಡಿನ ಈ ಜಯಸಿಂಹ
ನಮ್ಮ ಯಜಮಾನ||
ಕವನ : ನಾಗರಾಜ್ ಲೇಖನ್
ನಾಗರಾಜ್ ಲೇಖನ್ ಅವರ ಹಿಂದಿನ ಬರಹ :