'ಜಗತ್ತಿನಲ್ಲಿ ಯಾವ ಮಗುವು ದಡ್ಡನಲ್ಲ'

-ಶಾಲಿನಿ ಪ್ರದೀಪ್


ಮನುಷ್ಯನ ಯಾವ ಬೆರಳುಗಳು ಒಂದೇ ಸಮವಿಲ್ಲ ಎನ್ನುವುದು ಎಷ್ಟು ಸತ್ಯವೋ ಹಾಗೆಯೇ ಜಗತ್ತಿನಲ್ಲಿ ಯಾವ ಮಕ್ಕಳು ದಡ್ಡರಲ್ಲ ಎನ್ನುವುದು ಅಷ್ಟೇ ಸತ್ಯ.

ಒಂದೊಂದು ಮಗು ಒಂದೊಂದು ವಿಷ್ಯದಲ್ಲಿ ಪರಿಣಿತರಾಗಿರುತ್ತಾರೆ. ಕಲೆ, ಕ್ರೀಡೆ, ಇತ್ಯಾದಿ ವಿಷ್ಯದಲ್ಲಿ ಮಗು ಮುಂದಿದ್ದರೂ, ಓದಿನಲ್ಲಿ ಹಿಂದಿದ್ದರೆ ಆ ಮಗು ದಡ್ಡ ಎನ್ನುವ ಹಣೆಪಟ್ಟಿ ಕೊಟ್ಟು ಬಿಡುತ್ತೇವೆ. ಅದೇ ಓದಿನಲ್ಲಿ ಮುಂದೆ ಇದ್ದರೆ ಅತಿಯಾದ ಬುದ್ದಿವಂತ ಮಗು ಎನ್ನುವ ಸಮಾಜ ನಮ್ಮದು.

ಗ್ಲೋಬಲ್ ವಿನ್ನರ್ಸ್ ಅಕಾಡೆಮಿಯ ಪ್ರಕಾರ ಬಿ.ಇ, ಎ೦.ಬಿ.ಎ, ಎಂ.ಬಿ.ಬಿ.ಎಸ, ಎ೦.ಸಿ.ಎ ಎನ್ನುವ ಸ್ನಾತ್ತಕೋತ್ತರ ಪದವಿ ಪಡೆದಾಕ್ಷಣ ಅವರೆಲ್ಲ ಬುದ್ದಿವಂತರಲ್ಲ. ತಮ್ಮ ಆಸಕ್ತಿಯ ವಿಷ್ಯದಲ್ಲಿ ಪಾಂಡಿತ್ಯ ಪಡೆದು ಯಾವ ಮಗು ಜೀವನದಲ್ಲಿ ಮುನ್ನುಗುತ್ತಾನೋ ಅವನೇ ನಿಜವಾದ ಬುದ್ದಿವಂತ ಎನ್ನುವುದು ಇವರ ವಾದ.

ಗ್ಲೋಬಲ್ ವಿನ್ನರ್ಸ್ ಅಕಾಡೆಮಿ : ಮಕ್ಕಳ ಬೌಧಿಕ ವಿಕಾಸಕ್ಕಾಗಿ ಎಂಟು ವರ್ಷಗಳಿಂದ ಈ ಅಕಾಡೆಮಿ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳಲ್ಲಿ ಪುನಶ್ಚೇತನ ತುಂಬಿ ಅವರ ಬಾಳು ಬೆಳಗುತ್ತಾ ಬಂದಿದೆ. ಎಸ್.ಶಿವಕುಮಾರ ಇದರ ಸಂಸ್ಥಾಪಕರು. ಇವರು ಮೆಮೊರಿ ಗುರು ಮತ್ತು ಖ್ಯಾತ ಮಕ್ಕಳಮನೋ ವಿಕಾಸ ತರಬೇತಿದಾರರಾಗಿದ್ದಾರೆ.

ಇವರು ಎ೦.ಬಿ.ಎ ಯಲ್ಲಿ ಸ್ನಾತಕೋತ್ತರ ಪಡೆದಿದ್ದು, ಶಿಕ್ಷಣದ ಹೆಸರಿನಲ್ಲಿ ಮಕ್ಕಳು ಮತ್ತು ಪಾಲಕರ ಮೇಲೆ ಬೀಳುತ್ತಿರುವ ಒತ್ತಡವನ್ನು ಬಗೆಹರಿಸಲು ನಿಟ್ಟಿನಲ್ಲಿ ಮೂರು ವರ್ಷಗಳ ಕಾಲ ನಡೆಸಿದ ಸಂಶೋಧನೆಯಿಂದ ಈ ಅಕಾಡೆಮಿ ಹುಟ್ಟು ಹಾಕಿದ್ದಾರೆ.

ಅಷ್ಟೇ ಅಲ್ಲದೆ ಸ್ವತಃ ಇವರು ಸ್ಮರಣಶಕ್ತಿ ರೆಕಾರ್ಡ್ ನಲ್ಲಿ ೧,೫೮೦ ಶಬ್ದಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಎರಡು ಬಾರಿ ಚಿನ್ನದ ಪದಕಗಳನ್ನು ಗೆದಿದ್ದಾರೆ.

ಶಿವಕುಮಾರ ಅವರು ಈ ಅಕಾಡೆಮಿಯ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಜ್ಞಾಪಕ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳುವುದು, ಹೆಚ್ಚು ಅಂಕ ಹೇಗೆ ಗಳಿಸಬೇಕು, ಪರೀಕ್ಷೆಯ ಭೀತಿಯಿಂದ ಆಗುವ ಖಿನ್ನತೆಯಿಂದ ಹೇಗೆ ಮುಕ್ತಿ ಪಡೆಯಬೇಕು ಎನ್ನುವುದರ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಶಾಲಾ,ಕಾಲೇಜ್, ಸಾರ್ವಜನಿಕ ಸ್ಥಳಗಳಲ್ಲಿ ಸಾವಿರಾರು ಸೆಮಿನಾರ್ ನೀಡಿದ್ದಾರೆ. ಅವರೊಂದಿಗೆ ಇತ್ತೀಚಿಗೆ ಆಟ ಪಾಠಕ್ಕೆ ಸಂಬಂಧಿಸಿದಂತೆ ನಮ್ಮ ಆಕೃತಿ ಕನ್ನಡ ಮುಕ್ತ ಮಾತುಕತೆಯನ್ನು ನಡೆಸಿತು. ಬನ್ನಿ ನೋಡೋಣ…

೧.ಇಂದಿನ ಮಕ್ಕಳು ಮೊಬೈಲ್ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದು, ಅದರಿಂದ

ದೂರವಿಡುವುದು ಹೇಗೆ?

೨. ಮಕ್ಕಳು ಮೊಬೈಲ್ ಮೇಲಿನ ಅವಲಂಬನೆಗೆ ಪರೋಕ್ಷವಾಗಿ ಪಾಲಕರೆ ಕಾರಣವೇ?

೩.ಮಕ್ಕಳಿಗೆ ಓದುವ ವಾತಾವರಣ ಪಾಲಕರು ಕಲ್ಪಿಸುತ್ತಿದ್ದಾರೆಯೇ?

೪.’ಜಗತ್ತಿನಲ್ಲಿ ಯಾವ ಮಕ್ಕಳು ದಡ್ಡರಲ್ಲ’ ಹೇಗೆ ನಿರೂಪಿಸುತ್ತೀರಿ?

೫.ಪ್ರತಿಯೊಂದು ಮಕ್ಕಳಲ್ಲಿಯೂ ಪ್ರತಿಭೆಗಳಿರುತ್ತವೆ ಅದನ್ನು ಪಾಲಕರು ಹೇಗೆ ಹುಡುಕಿ ತಗೆಯಬೇಕು?

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW