‘ಮತ್ತೊಮ್ಮೆ ಜನಿಸಿ ಬನ್ನಿ’… ಕವನ –  ಜಿ.ಎಸ್.ಶರಣು

ಕರುನಾಡಲ್ಲಿ ಮತ್ತೊಮ್ಮೆ ಜನಿಸಿ ಬನ್ನಿ ಓ ಕನಕದಾಸರೇ…ಯುವಕವಿ  ಜಿ.ಎಸ್.ಶರಣು ಅವರ ಒಂದು ಕವನದೊಂದಿಗೆ ಎಲ್ಲರಿಗೂ ಸಂತ ಕವಿ ಭಕ್ತ ಕನಕದಾಸ ಜಯಂತಿಯ ಶುಭಾಶಯಗಳು, ತಪ್ಪದೆ ಮುಂದೆ ಓದಿ..

ಕನಕ ನೀನು ನಮ್ಮ ನಾಯಕ
ಕೀರ್ತನೆ ರಚನೆಯ ಸೂಚಕ
ಸತ್ಯದ ಗೀತೆಗಳ ಖೂರುಕ
ಕನ್ನಡ ನಾಡಿನ ಖ್ಯಾತ ಕನಕ

ಸಮಾನ ಮನಸ್ಸಿನ ಗುಣದವನಾಗಿ
ಬಚ್ಚಮ್ಮ ಬೀರಪ್ಪರ ಮಗನಾಗಿ
ಬಾಡ ಗ್ರಾಮದ ಗುರುವಾಗಿ
ಹುಟ್ಟಿ ಬಂದನು ನಾಡಿನ ಹೆಮ್ಮೆಯಾಗಿ

ಕೀರ್ತನೆಯಲ್ಲಿ ಕೆಟ್ಟವರ ಕೆಟ್ಟತನ
ವೀಣೆ ಬಾರಿಸುವಾಗ ದುಷ್ಟರ ದುರುಳತನ
ಪದಗಳ ಹಾಡುವಾಗ ನೀಚರ ನೀಚತನ
ಇವೆಲ್ಲವನ್ನು ಓಡಿಸುವಂಗಿತ್ತು ಕನಕನ ಮನ

ಕುಲ-ಕುಲ ಎನ್ನುವುದು ಬಿಡಿಸಲು
ಜಾತಿ ವ್ಯವಸ್ಥೆ ಕಿತ್ತಿ ಎಸೆಯಲು
ಮನುಜರ ಬದುಕು ತಿಳಿಸಲು
ಕನಕನ ಕೀರ್ತನೆಗಳಿದ್ದವು, ಸಾಧ್ಯವಿಲ್ಲ ಮರೆಯಲು

ಕರುನಾಡಲ್ಲಿ ಮತ್ತೊಮ್ಮೆ ಜನಿಸಿ ಬಾ
ಬಂದೇ ಬರುತ್ತೀಯ ಬಾ
ಮತ್ತೊಂದು ಕೀರ್ತನೆಯ ಹೊತ್ತು ಬಾ
ಜಾತಿಯನ್ನ ಸುಟ್ಟು ಹೋಗುವಂತೆ


  •  ಜಿ.ಎಸ್.ಶರಣು – ಯುವಕವಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW