ಜಗವೆಲ್ಲವು ಆಗಲಿ ಮಗುವಿನ ಮನೆ, ಎಲ್ಲಾ ಚಿಣ್ಣರಿಗೂ ಉಜ್ವಲ ಭವಿಷ್ಯವನ್ನು ಹಾರೈಸುವೆ…ಕೊಡಗಿನ ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಮಕ್ಕಳಿರಲು ನಂದನ
ಅದುವೆ ಬೃಂದಾವನ
ಹೊಸಕನಸು ಅರಿವ ಮನಸು
ಎಷ್ಟು ಚೆಂದ ಇವರ ಒಡನಾಟದ
ಸೊಗಸು..
ಬಾಲ್ಯತನದ ಮುಗ್ಧತೆ
ಹಿರಿಯರೊಲವ ಅಸ್ಮಿತೆ
ಭಗವಂತನ ಕಂದರಿವರು
ಇರಲು ಮನದಿ ನಿಷ್ಕಪಟತೆ
ಮಕ್ಕಳ ಸಂಗದಿ
ಎಚ್ಚರವಿರಲಿ
ಆನಂದದ ಆ ದಿವ್ಯ ಶಿಶು
ಎಂದರು ಕವಿವರ್ಯ
ಕುವೆಂಪು
ನಮ್ಮಯ ಮನದ
ಪಾಪವ ಕಳೆವುದು
ಕಬ್ಬಿಗನ ಮಾತಿನ ಪೆಂಪು
ಮಗುತನದ ಆ ಬೆಡಗಿನ
ವಿಸ್ಮಯ ಲೋಕದಿ
ನಾವಾಗುವ ಬೆರಗಿನ
ವೀಕ್ಷಕರು
ಖುಷಿಯ ಬಂಡುಣುವ
ಮಧುಕರಿಗಳು….
ಮಗುವಾಗೆಲೆ ಮನ
ಮಗುವಾಗು
ಮಗುತನದ ಹಣತೆಯ
ತೈಲಬತ್ತಿಯಾಗು
ಜಗವೆಲ್ಲವು ಆಗಲಿ
ಮಗುವಿನ ಮನೆ
ತೊಡೆಯಲಿ ಕುವಿಚಾರದ
ಕಶ್ಮಲಗಳನೆ…
*
ಎಲ್ಲಾ ಚಿಣ್ಣರಿಗೂ
ಉಜ್ವಲ ಭವಿಷ್ಯವನ್ನು ಹಾರೈಸುವೆ….
- ಶಿವದೇವಿ ಅವನೀಶಚಂದ್ರ
