ನನ್ನೊಲವ ಬಾಗಿಲಲಿ ಬಂದು ನಿಂತ, ಚೆಂಬೆಳಕ ಅತಿಥಿ….ನಾಗರಾಜ ತಾಬಾಕಿ ಅವರ ಲೇಖನಿಯಲ್ಲಿ ಅರಳಿದ ಒಂದು ಪ್ರೇಮ ಕವನ, ತಪ್ಪದೆ ಓದಿ…
ನನ್ನೊಲವಿನಲಿ ಅವಳೊಲವ
ಸಾಂಗತ್ಯ ಅಪರೂಪ
ಪಿಸುಮಾತುಗಳಲ್ಲೆ ಪ್ರಜ್ವಲಿಸಿದೆ
ಆಂತರ್ಯದ ಪ್ರದೀಪ
ದೂರ ತೀರದ ಒಲವ ಮಕುಟವೀ
ಮನಸಿಗತ್ತಿರ
ಸದಾ ಸುಳಿದಾಡೊ ತಂಬೆಲರಂತೆ
ಭಾರಿ ಎತ್ತರ
ಮುಳುಗಿ ಹೋಗುವೆ ಕೆಲವೊಮ್ಮೆ
ಅವಳೊಲವ ಸಾಂಗತ್ಯದಿ
ತಂಬೊಲವ ಮಿಂಚಂತೆ ನಿತ್ಯವೂ
ಅವಲೊಲವ ತನ್ಮಯದಿ…
ನನ್ನೊಲವ ಬಾಗಿಲಲಿ ಬಂದು ನಿಂತ
ಚೆಂಬೆಳಕ ಅತಿಥಿ
ನಿತ್ಯನಿರತ ಸಾಬೀತಾಗುತಿದೆ
ನಮ್ಮೊಲವ ಸ್ಥಿತಿ..
ಅವಳೆದೆಯಲಿ ರಂಗೇರುತಿವೆ
ಕನಸಗಳ ಮಜಲು
ನನಸಾಗುವ ದಾರಿಯಲಿ ಕಾದಿರಿಸಿದ
ಅಣಿಮುತ್ತುಗಳಾರತಿ….
- ನಾಗರಾಜ ತಾಬಾಕಿ
