ನಮ್ಮ ವೆಂಕಟಪ್ಪ ಸೀತಮ್ಮನವರ ಪ್ರೀತಿಯ ಸುಪುತ್ರ ಈ ಕುವೆಂಪು ಅವರು…!!! ಕವಿ ನಿಜಗುಣಿ ಎಸ್ ಕೆಂಗನಾಳ ಅವರು ತಮ್ಮ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಈ ನಮ್ಮ ಕನ್ನಡ ನಾಡಿಗೆ
ಕುವೆಂಪು ಇವರು
ಈ ನಮ್ಮ ಕರ್ನಾಟಕ ಜನತೆಯ
ಆರಾಧ್ಯ ಕವಿಗಳು ಇವರು
ರಾಷ್ಟ್ರಗೀತೆಯನ್ನು ಬರೆದು ಈ ನಮ್ಮ
ರಾಷ್ಟ್ರಕ್ಕೆ ರಾಜಯೋಗ ತಂದುಕೊಟ್ಠಂತ
ಕುಪ್ಪಳ್ಳಿಯ ಸಿಡಿಗುಂಡು ಇವರು
ನಮ್ಮ ವೆಂಕಟಪ್ಪ ಸೀತಮ್ಮನವರ ಪ್ರೀತಿಯ
ಸುಪುತ್ರ ಈ ಕುವೆಂಪು ಅವರು…!!!
ಕನ್ನಡದ ಕಾವ್ಯಗಳಲ್ಲಿ ಕನ್ನಡದ ಕವಿ ಮನಸುಗಳಲ್ಲಿ
ಪ್ರತಿದಿನವೂ ಪ್ರತಿಕ್ಷಣವೂ ಅರಳುವಂತ
ಕನ್ನಡದ ಮನಸುಗಳ ಕಲಾರತ್ನವೂ ಇವರು
ಬರೆಯುವ ಕಾವ್ಯಗಳಲ್ಲಿ ಕನ್ನಡದ ಉಸಿರಾಗಿ
ಕನ್ನಡಕ್ಕೆ ಹಸಿರಾಗಿ ನಿಂತವರು ಇವರು…!!!
ಈ ನಮ್ಮ ಕನ್ನಡದ ಕಲಾಜ್ಞಾನಿಯಾಗಿ ಈ ನಮ್ಮ
ಕನ್ನಡ ನಾಡಿಗೆ ಉಪಾನ್ಯಾಸಕರಾದವರು ಇವರು
ಭಾರತ ಮಾತೆಯ ಹೆಮ್ಮೆಯ ಸುಪುತ್ರನಾಗಿ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ
ಕುಪ್ಪಳ್ಳಿಯ ಗ್ರಾಮದಲ್ಲಿ ೨೯ ಡಿಸೆಂಬರ್ ೧೯೦೪
ಮಕರ ಸಂಕ್ರಾಂತಿಯಂದು ಜನಿಸಿದವರು ಇವರು…!!!
- ನಿಜಗುಣಿ ಎಸ್ ಕೆಂಗನಾಳ – ಸಾಹಿತಿಗಳು, ರಂಗಭೂಮಿ ಕಲಾವಿದರು, ಕಲಬುರಗಿ.
