ಮೂಢನಂಬಿಕೆ ಸಮಾಜದ ಮೌನಶತ್ರು

ಮದುವೆ ಮಾಡುವಾದ ಮೂಲನಕ್ಷತ್ರ, ಜ್ಯೇಷ್ಟಾನಕ್ಷತ್ರ, ರೇವತಿ ನಕ್ಷತ್ರ ಇನ್ನೂ ಹಲವಾರು ನಕ್ಷತ್ರ ಕೆಲವೊಂದು ರಾಶಿಗಳಲ್ಲಿ ಹುಟ್ಟಿದವರಿಗೆ ಹವನ ಹೋಮ ಮಾಡದ್ರೂ ಹಣೆಬರಹ ಬದಲಿಸಲು ಸಾಧ್ಯವಾ?. ಲೇಖಕರಾದ ಶೀತಲ್ ಹೆಗಡೆ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

  • ದಿನವೂ ವಾಕಿಂಗ್ ಮುಗಿಸಿ ನಾವೆಲ್ಲ ಗೆಳತಿಯರು ಚಾಟಿಂಗ್ ಮಾಡೋ ಪದ್ದತಿ ಇದೆ. ಕಾಲಿಗೊಂದೇ ವ್ಯಾಯಾಮ ಆದ್ರೆ ಸಾಕಾ.! ಬಾಯಿಗೂ ಬೇಕಲ್ಲ. ಮೊನ್ನೆ ವಾಕಿಂಗ್ ಮಾಡೋವಾಗ ಪಾರ್ಕಲ್ಲಿ ಒಂದಿಬ್ಬರು ಹೆಂಗಸರು ದಾಳಿಂಬೆ ಗಿಡದ ಹತ್ರ ನಿಂತು ಆಚೀಚೆ ನೋಡಿ ಗಿಡಕ್ಕೆ ಕೈ ಹಾಕೋವಾಗ ನಾ ಕೇಳದೆ” ಇನ್ನೂ ಕಾಯಿ ಬಲಿತಿಲ್ಲ. ಏನ್ ಕಿತ್ತಗೋತಾ ಇದೀರಾ” ಅಂದಾಗ ಅವರಲ್ಲಿ ಒಬ್ಬಳು “ನಮ್ಮನೇಲಿ ಚಿಕ್ಕ ಪಾಪು ಇದೆ. ಅದರ ತುಟಿಗೆ ಹಚ್ಚಲು ದಾಳಿಂಬೆ ಹೂವು ಬೇಕಿತ್ತು ಅದಕ್ಕೆ ಕೀಳತಾ ಇದೀನಿ” ಅಂದಳು. ನನಗೆ seriously ಇದೇನಪ್ಪ ಹಾಲುಹಸುಳೆಗೆ ಹೊರಗಿನದ್ದು ಏನನ್ನೂ.. ನೀರು ಸಹ ೬ ತಿಂಗಳವರೆಗೆ ಕೊಡದೇ ಕೇವಲ ಅಮ್ಮನ ಹಾಲೇ ಅವಕ್ಕೆ ಜೀವಾಮೃತ ಆಗಿರೋವಾಗ ಹೀಗೆಲ್ಲ ದಾಳಿಂಬೆ ಹೂವನ್ನು ಅರೆದು ತುಟಿಗೆ ಹಚ್ಚಿದಾಗ ಅದರ ರಸ ಚಪ್ಪರಿಸಿ ಮಗುವಿನ ಗತಿ ಏನಾಗಿರಬೇಡ.! ಅನಿಸ್ತು.
  • ಕೊರೋನಾ ಸಮಯದಲ್ಲಿ ಯಾರೋ ಅವಿವೇಕಿ ಮೂಗಿಗೆ ಲಿಂಬಿರಸ ಹಾಕಿದ್ರೆ ಕಾಯಿಲೆ ವಾಸಿಯಾಗುತ್ತಂತ ತಾನು ಹಾಕಿ ಅವಾಂತರ ಸೃಷ್ಟಿಸಿದ್ದಲ್ಲದೇ, ಅದನ್ನು ನೋಡಿ ಅದರಂತೆ ಮಾಡಿದವರು ಅದೆಷ್ಟೋ ಜನ ಪ್ರಾಣ ಕಳೆದುಕೊಂಡವರಿದ್ದಾರೆ.
  • ಮಕ್ಕಳಲ್ಲಿ ತಮ್ಮ ಇಡೇರಲಾರದ ಆಸೆ ಆಕಾಂಕ್ಷೆಗಳನ್ನು ನೋಡುವ ಕಾಣುವ ಬಹುತೇಕ ಪೋಷಕರು ಇದ್ದಾರೆ. ಅವರ ಬಯಕೆ ಸಹಜ. ಮೊನ್ನೆಯ ನೀಟ್ ಪರೀಕ್ಷೆ ಬರಿಯಬೇಕಾಗಿದ್ದವ ಅವನ ಹಾಲ್ ಟಿಕೇಟ್ ತೆಗೆದುಕೊಂಡು ದೇವಸ್ಥಾನಕ್ಕೆ ಹೋಗಿ ಅಲ್ಲಿ ಅರ್ಚಕರ ಬಳಿ ಅದನ್ನು ದೇವರ ಪಾದದ ಬಳಿಯಿಟ್ಟು ಆಶೀರ್ವದಿಸಿಕೊಡಿ ಅಂದು ಅರ್ಚಕರಿಗೆ ಕೊಟ್ಟಾಗ ಅವರು ಆರತಿ ತಟ್ಟೆಯಲ್ಲಿ ಹಾಕಿಕೊಂಡು ಗರ್ಭಗುಡಿಯ ಒಳಗೆ ಹೋಗುವುದರೊಳಗೆ ಹಾಲ್ ಟಿಕೇಟ್ ತಟ್ಟೆಯಲ್ಲೇ ಸರಿದು ಅದಕ್ಕೆ ಬೆಂಕಿಹತ್ತಿಕೊಂಡಿತು. ಆ ವಿದ್ಯಾರ್ಥಿಗೆ ಹೇಗಾಗಿರಬೇಡ.! ಇದು ಅವನದಲ್ಲದ ತಪ್ಪಿನಿಂದ ಅವನ ಪೋಷಕರ ಒತ್ತಾಯದ ಮೇರೆಗೆ ದೇವಸ್ಥಾನಕ್ಕೆ ಹೋಗಿ ಆಶೀರ್ವಾದ ತೆಗೆದುಕೊಂಡು ಬಂದ್ರೆ ಒಳ್ಳೆಯದಾಗುತ್ತದೆಂಬ ಮೂಢನಂಬಿಕೆಗೆ ಒಂದುವರ್ಷವೇ ಅವನದ್ದು ಹಾಳಾಯಿತು. ಇದು ಅಶೀಕ್ಷಿತರಲ್ಲ ಉನ್ನತ ಶಿಕ್ಷಣ ಪಡೆದವರಿಂದಲೇ ಆಗಿದ್ದು. ಮನೆಯಲ್ಲಿ ದೇವರ ಮುಂದಿಟ್ಟು ಕೈಮುಗಿದ್ರೆ ದೇವರು ಆಶೀರ್ವಾದ ಕೊಡಲ್ಲ ಅಂದಿದ್ರಾ.
  • ಯಾವುದಾದರೂ ಶುಭ ಸಂದರ್ಭದಲ್ಲಿ ಹೊರಟಾಗ ತುಂಬಿದ ಕೊಡ ಎದುರಿಗೆ ಸಿಕ್ರೆ ಶುಭ ಶಕುನ, ಕರಿಬೆಕ್ಕು ಅಡ್ಡಲಾಗಿ ಹಾದು ಹೋದ್ರೆ ಆಗುವ ಕೆಲಸ ಆಗದು ಎಂಬ ಲಾಜಿಕ್ಕಿಲ್ಲದ ನಂಬಿಕೆ.
  • ಮದುವೆ ಮಾಡುವಾದ ಮೂಲನಕ್ಷತ್ರ, ಜ್ಯೇಷ್ಟಾನಕ್ಷತ್ರ, ರೇವತಿ ನಕ್ಷತ್ರ ಇನ್ನೂ ಹಲವಾರು ನಕ್ಷತ್ರ ಕೆಲವೊಂದು ರಾಶಿಗಳಲ್ಲಿ ಹುಟ್ಟಿದವರಿಗೆ ಹವನ ಹೋಮ ಮಾಡದ್ರೂ ಹಣೆಬರಹ ಬದಲಿಸಲು ಸಾಧ್ಯವಾ?.
  • ಆರೋಗ್ಯದ ಸಮಸ್ಯೆ ಉಂಟಾದ್ರೆ ವೈದ್ಯರ ಬಳಿ ಹೋಗುವುದರ ಬದಲು ತಾಯತ, ಮಂತ್ರ ಮಸಿ ಅಂತ ಕಟ್ಟಿಕೊಂಡು ಕಾಯಿಲೆ ಜಾಸ್ತಿಯಾಗಿ ರೋಗಿ ಮರಣಹೊಂದಬಹುದು.
  • ನನ್ನ ಮನೆಯ ಕೆಲಸದಾಕೆಯ ಸಂಬಂಧಿಗಳಲ್ಲಿ ಒಂದು ಹೆಂಗಸಿಗೆ ‘ಅಪೆಂಡಿಕ್ಸ್’ ಆಗಿತ್ತು. ಆಗ ಮನೇಲ್ಲಿ ಯಾರೋ ವಯಸ್ಸಾದವರು ಔಷಧಿ ಕೊಡ್ತಾರೆ ಅಂತ ಅವರ ಬಳಿ ಕರೆದೊಯ್ದರು. ಅವರು ಲಟ್ಟಣಿಕೆಯಿಂದ ಅವಳ ಹೊಟ್ಟೆ ಮೇಲೆ ಗಟ್ಟಿಯಾಗಿ ಅದುಮಿ ಅದುಮಿ ಅವಳನ್ನು ಇನ್ನು ನಿನಗೆ ಕಡಿಮೆ ಆಗುತ್ತೆ ಅಂತ ಮನೆಗೆ ಕಳಿಸಿದಾಗ ದಾರಿಯ ಮಧ್ಯದಲ್ಲೇ ಅವಳಿಗೆ ನೋವು ಜಾಸ್ತಿಯಾಗಿ ಮರಣ ಹೊಂದಿದಳು.

ಮೂಢನಂಬಿಕೆಯ ಪರಿಣಾಮಗಳು :

ಇದೊಂದು ಸಂಪ್ರದಾಯ ರೀತಿರಿವಾಜುಗಳ ನಡುವೆ ನಡೆಯುತ್ತಿದ್ದರೂ ಅದಕ್ಕೆ ವೈಜ್ಞಾನಿಕ ನೆಲೆಗಟ್ಟಾಗಲಿ, ಲಾಜಿಕ್ ಆಗಲಿ ಇರದೇ ಇರುವ ಟೊಳ್ಳು ನಂಬಿಕೆ. ಇದರಿಂದ ಜನರ ಮನಸ್ಥಿತಿ ಹೊಸ ವಿಚಾರ ಆಲೋಚನೆಗಳಿಗೆ ಅವಕಾಶವಿರದೇ ‘ಅಜ್ಜ ನೆಟ್ಟಿದ ಆಲದ ಮರಕ್ಕೆ ಹಗ್ಗ ಹಾಕಿಕೊಳ್ಳುವ’ ಕೆಲಸ ನಡೆಯುತ್ತಿದೆ.

ಯುವ ಜನತೆಯ ಬೌದ್ದಿಕ ಶಕ್ತಿ ಸೀಮಿತಗೊಳ್ಳುವುದು. ವಿಜ್ಞಾನ ಮುಂದುವರೆದಂತೆಲ್ಲ ಇಂತಹ ಪೊಳ್ಳು ಆಧಾರವಿಲ್ಲದ ಪದ್ಧತಿಗೆ ಮಾರುಹೋದರೆ ಸಮಾಜದ ಬೆಳವಣಿಗೆಯ ಗತಿ ಏನು?

ಮೊದಲಾದ್ರೆ ಜನರಲ್ಲಿ ಶಿಕ್ಷಣಕೊರತೆಯಿಂದ ತಿಳುವಳಿಕೆ, ತಾರ್ಕಿಕ ಆಲೋಚನೆ, ಒಳಿತು- ಕೆಡಕು ಯಾವುದೆಂದು ನಿರ್ಧರಿಸುವ ಬುದ್ಧಿಮತ್ತೆ ಕಡಿಮೆ ಇದೆಯೊಂದು ಒಪ್ಪುವ ಮಾತಾಗಿತ್ತು. ಆದ್ರೆ ಈಗಿನ ಚಂದ್ರಲೋಕಕ್ಕೆ ಹೋಗಿಬಂದ ವಿದ್ಯಮಾನದಲ್ಲಿ, ರೊಬೋಟ್ ಗಳಿಂದ ಕೆಲಸ ತೆಗೆದುಕೊಳ್ಳುವ ಕಾಲದಲ್ಲಿ, AI ಜಮಾನ ಇದಾಗಿರುವಾಗಲೂ ಕೆಲವೊಂದು ಕಡೆ ಸದ್ದಿಲ್ಲದೇ ಮೌನವಾಗಿ ಇಂತಹ ಹೀನ, ಅಸಂಬದ್ದ, ಅರಗಿಸಿಕೊಳ್ಳಲಾಗದ ಘಟನೆಗಳಿಗೆ ನಾವು ದಿನನಿತ್ಯ ಸಾಕ್ಷಿಯಾಗುತ್ತಲಿದ್ದೇವೆ. ಇದು ಕೇವಲ ವ್ಯಕ್ತಿಗತವಾದ ಪರಿಣಾಮ ಬೀರದೇ ಸಮಾಜ, ದೇಶದ ಮೇಲೂ ಪರಿಣಾಮ ಬೀರುವಂತಾಗಿದೆ. ವ್ಯಕ್ತಿ ಚನ್ನಾಗಿದ್ರೆ ಕುಟುಂಬ, ಸಮಾಜ ದೇಶ ಚನ್ನಾಗಿದೆ ಎಂದರ್ಥ ಅಲ್ಲವಾ.!
ಮೂಢನಂಬಿಕೆಯು ಸಮಾಜದ ಮೌನ ಶತ್ರುವಾಗ್ತಾ ಇದೆ.


  • ಶೀತಲ್ ಹೆಗಡೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading