ಬಾಯಿ ಹುಣ್ಣಿಗೆ ಹಲವಾರು ಕಾರಣಗಳಿದ್ದು, ಅದಕ್ಕೆ ಪರಿಹಾರವೇನು? ಅದಕ್ಕೆ ಕಾರಣಗಳೇನು ಏನು ಎನ್ನುವುದನ್ನು ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಬಾಯಿ ಒಳಗೆ ಚಿಕ್ಕಚಿಕ್ಕ ಗಾಯಗಳಾಗಿ ಕಾಣಿಸುವ ಹುಣ್ಣು, ನೋವು, ಕಿವುಚುವಿಕೆ, ಆಹಾರ ಸೇವನೆಯಲ್ಲಿ ತೊಂದರೆ ಉಂಟು ಮಾಡಬಹುದು.
ಇದರ ಪ್ರಮುಖ ಕಾರಣಗಳು:
- ವಿಟಮಿನ್ B12, ಲೋಹ, ಫೋಲಿಕ್ ಆಮ್ಲದ ಕೊರತೆ
- ಜಠರದ ಅಜೀರ್ಣ, ಗ್ಯಾಸ್, ಉರಿಯೂತ
- ಮಾನಸಿಕ ಒತ್ತಡ
- ತೀವ್ರ ಬಿಸಿ-ಕಾರ ಆಹಾರ
- ಅನಿಯಮಿತ ಉಪವಾಸ ಅಥವಾ ಆರೋಗ್ಯಕರವಲ್ಲದ ಆಹಾರ
- ಕೆಲವೊಂದು ಔಷಧಿಗಳ ದುಷ್ಪ್ರರಿಣಾಮ.

ಫೋಟೋ ಕೃಪೆ : ಅಂತರ್ಜಾಲ
ಪರಿಹಾರಗಳು:
- ಹಣ್ಣು, ಸೊಪ್ಪು, ಬೇಳೆಸಾರು, ಎಳನೀರು ಸೇರಿರುವ ಆಹಾರ ಸೇವನೆ
- ಜೀರಿಗೆ–ಧನಿಯಾ ಕಷಾಯ ಅಥವಾ ತ್ರಿಕಟು ಸೇವನೆ
- ಬಸಲೆ ಸೊಪ್ಪನ್ನು ಬೆಣ್ಣೆ ಯಲ್ಲಿ ಅರೆದು ಹುಣ್ಣಿಗೆ ಹಚ್ಚಬಹುದು (ಇದೆ ರೀತಿ ಅನೇಕ ಮೂಲಿಕೆಗಳ ಮೂಲಕವೂ ಗುಣಪಡಿಸಲು ಸಾಧ್ಯ)
- ತುಳಸಿ ಸೊಪ್ಪು ಅಥವಾ ಬೆಳ್ಳುಳ್ಳಿ ಹಿಂಡಿ ಹುಣ್ಣಿನ ಮೇಲೆ ಹಾಕುವುದು
- ಸಾಕಷ್ಟು ನೀರು ಕುಡಿಯುವುದು, ಒತ್ತಡ ದೂರ ಇಡುವುದು
ಹುಣ್ಣು ವಾರಕ್ಕಿಂತ ಹೆಚ್ಚು ಕಾಲ ಉಳಿದರೆ ಅಥವಾ ಜ್ವರ/ಉರಿಯೂತ ಜೊತೆಯಾದರೆ ವೈದ್ಯರ ಸಲಹೆ ಅವಶ್ಯಕ ಅಥವಾ ನನ್ನನ್ನು ಸಂಪರ್ಕಿಸಬಹುದು ನನ್ನಲ್ಲಿ ಔಷಧೋಪಚಾರ ಇದೆ.
ಆರೋಗ್ಯವಿರಲಿ – ಎಚ್ಚರಿಕೆಯಿಂದಿರಿ! ಎಲ್ಲಾ ಬಾಯಿ ಹುಣ್ಣು ಅಪಾಯಕಾರಿ ಅಲ್ಲ, ಆದರೂ ನಿಶ್ಚಿಂತೆಯಿಂದ ಇರುವಂತಹುದೂ ಅಲ್ಲ.
- ಸುಮನಾ ಮಳಲಗದ್ದೆ – ಪಾರಂಪರಿಕ ವೈದ್ಯ – 9980182883.
