ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರ ‘ಸ್ಪ್ರಿಂಗ್ ರೋಲ್’ ಎಷ್ಟು ರುಚಿಕರವೋ ಅಷ್ಟೇ ಮಾಡುವುದು ಸುಲಭ. ಮಾಡುವುದು ಹೇಗೆ ಎನ್ನುವುದು ಶಕುಂತಲಾ ಅವರು ಹೇಳಿಕೊಟ್ಟಿದ್ದಾರೆ ತಪ್ಪದೆ ಮಾಡಿ ನೋಡಿ…
ಬೇಕಾಗುವ ಪದಾರ್ಥಗಳು :
- ಬೀನ್ಸ್
- ಕ್ಯಾರೆಟ್
- ಈರುಳ್ಳಿ,
- ಕ್ಯಾಬೇಜ್,
- ಮೈದಾ ಹಿಟ್ಟು
- ಉಪ್ಪು
- ಅಚ್ಚ ಮೆಣಸಿನ ಪುಡಿ
- ಅರಶಿಣ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಗರಂ ಮಸಾಲ
ಮಾಡುವ ವಿಧಾನ :
ಬೀನ್ಸ್, ಕ್ಯಾರೆಟ್, ಈರುಳ್ಳಿ, ಕ್ಯಾಬೇಜ್ ಎಲ್ಲವನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಂಡು ಎರಡು ಸ್ಪೂನ್ ಎಣ್ಣೆ ಹಾಕಿ ಒಂದೊಂದಾಗಿ ತರಕಾರಿ ಹಾಕಿ ಸಣ್ಣ ಉರಿಯಲ್ಲಿ ಕರಿಯಬೇಕು. ನೀರನ್ನು ಹಾಕಬೇಡಿ. ಉಪ್ಪು, ಅರಶಿನ, ಅಚ್ಚ ಖಾರದ ಪುಡಿ ಹಾಕಿ ಮಿಶ್ರಣ ಸಿದ್ದ ಮಾಡಿಕೊಳ್ಳಿ. ಬೇಕಿದ್ದರೆ ಶುಂಟಿ, ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ ಸೇರಿಸಿ.
ಮೈದಾ ಹಿಟ್ಟಿಗೆ ಉಪ್ಪು, ನೀರು ಹಾಕಿ ಕಲಸಿ ಒಂದೆಡೆ ನೆನೆಯಲು ಬಿಡಿ. ಈಗ ಎಣ್ಣೆ ಕಾಯಲು ಇಟ್ಟು, ಚಪಾತಿಯಂತೆ ಲಟ್ಟಿಸಿ ಅದರ ಒಳಗೆ ಮಾಡಿಟ್ಟ ಪಲ್ಯ ತುಂಬಿ ಮೂರೂ ನಾಲ್ಕು ರೋಲ್ ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ. ಸ್ವಲ್ಪ ತಣ್ಣಗಾದ ಮೇಲೆ ಕಟ್ ಮಾಡಿ ಟೊಮ್ಯಾಟೋ ಸಾಸ್ ಜೊತೆ ಸವಿಯಿರಿ. ಈ ತರಕಾರಿಗಳ ಜೊತೆ ಬ್ರೊಕೊಲಿ, ಅಮೆರಿಕನ್ ಸ್ವೀಟ್ ಕಾರ್ನ್, ಕ್ಯಾಪ್ಸಿಕಂ, ಪನೀರ್, ಚೀಸ್ ಎಲ್ಲವನ್ನೂ ಬಳಸಬಹುದು.
- ಶಕುಂತಲಾ ಸವಿ – ನಳಪಾಕ ಪ್ರವೀಣೆ , ಮೈಸೂರು
