ಈ ಕವನ ಭಾವನಾತ್ಮಕವಾಗಿ ಬೆಸೆಯುತ್ತದೆ.ಇತ್ತೀಚಿಗೆ ಕವಿಯತ್ರಿ ರೇಷ್ಮಾ ಅವರ ತಂದೆಯವರು ಕರೋನಾ ಮಹಾಮಾರಿಗೆ ಬಲಿಯಾದರು..ಅಪ್ಪನನ್ನು ನೆನೆದು ಬರೆದಂತಹ ಕವನವಿದು. ಅವರು ಎಲ್ಲೇ ಇದ್ದರೂ ದೂರದಿಂದ ಮಗಳ ಬೆಳವಣಿಗೆಯನ್ನು ನೋಡಿ ಸಂತೋಷ ಪಡುತ್ತಾರೆ, ಅವರ ಆಶೀರ್ವಾದ ಸದಾ ಅವರ ಮೇಲಿರುತ್ತದೆ ಎನ್ನುವ ಮಾತಿನೊಂದಿಗೆ ನೀವು ಓದಿ, ಈ ಯುವ ಕವಿಯತ್ರಿಯನ್ನು ಪ್ರೋತ್ಸಾಹಿಸಿ…
#ಕರೆಯದೇ_ಬರುವವ_ನೀನು
ಹೇಳದೇ ಕೊಂಡುಹ್ಯೊಯುವವ ನೀನು…
ನಿನಗೆ ‘#ಸಾವು‘ ಎಂಬ ಹೆಸರು ಸಾಕೇನು ?
ಸ್ವಲ್ಪ ವರ್ಷಗಳಾದರೂ ತಡೆಯಲಿಲ್ಲ
ತುಸು ದಿನಗಳಾದರೂ ಬಿಡಲಿಲ್ಲ
ಕ್ಷಣ ಹೊತ್ತಾದರೂ ಉಳಿಸಲಿಲ್ಲ….
ಶರವೇಗದಲಿ ಜೀವ ಕರೆದ್ಯೊಯ್ಯುವೆಯಲ್ಲ….?
ಎದೆಯ ಒಳಗಿನ ಎಷ್ಟೋ ಮಾತು
ನೀರವ ಮೌನವಾಯಿತು
ಉಸಿರು ಹಸಿರಲಿ ಒಂದಾಯಿತು
ನೆನಪುಗಳಿಗೆ ಆಶ್ರುತರ್ಪಣವೇ ಅಭಿಷೇಕವಾಯಿತು…
#ಗೋರಿಯ ಮೇಲೆ ಹುಲ್ಲು ಬೆಳೆದು
ನಲಿಯಿತು ..!
ಬೂದಿ ನದಿಯ ಸೇರಿ
ಕಡಲೊಳಗೆ ಲೀನವಾಯಿತು
ಮನೆಗೆ …ದುಃಖವೇ ದೊರೆಯಾಗಿ
ಮಸಣದ ಛಾಯೆ ತುಂಬಿತು ….
ಕರೆಯದೇ ಬರುವವ ನೀನು
ಅಗ್ರಮಾನ್ಯರು ಅರಿಯಲಾಗದ
ಸರ್ವಕಾಲದ ಸತ್ಯವು ನೀನು……
ಮರೆತಾಗಲೇ ಎದುರಾಗಿ
ನಿನ್ನಿರವ ಕಾಣುವೆ ನಾನು.
- ರೇಶ್ಮಾಗುಳೇದಗುಡ್ಡಾಕರ್ (ಯುವ ಕವಿಯತ್ರಿ, ಸಾಮಾಜಿಕ ಚಿಂತಕರು)