ಕರಿಬೇವಿನ ಚಿತ್ರಾನ್ನ ಬಲು ರುಚಿ

ಕರಿಬೇವು ಕಣ್ಣಿನ ಆರೋಗ್ಯಕ್ಕೆ ಉತ್ತಮ ಔಷಧಿ. ಅಡುಗೆಯಲ್ಲಿ ಕರಿಬೇವು ಒಗ್ಗರಣೆ ಕೊಟ್ಟರೆ, ಅದನ್ನು ತಿನ್ನದೇ ಪಕ್ಕಕ್ಕೆ ಸರಿಸಿಡುವವರೇ ಹೆಚ್ಚು. ಕರಿಬೇವು ಆರೋಗ್ಯಕ್ಕೆ ಒಳ್ಳೆಯದು, ಅದನ್ನು ಚಿತ್ರಾನ್ನ ಮಾಡಿ ತಿಂದರೆ ಹೊಟ್ಟೆಗೆ ಹೋಗುವುದು. ಮೌನ ಚಂದ್ರಕಾಂತ್ ಅವರು ಕರಿಬೇವಿನ ಚಿತ್ರಾನ್ನ ಮಾಡುವ ವಿಧಾನವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ… 

ಬೇಕಾಗುವ ಸಾಮಗ್ರಿಗಳು :

  • ಕರಿಬೇವು – ಒಂದು ಕಟ್ಟು
  • ಹಸಿ ಮೆಣಸಿನಕಾಯಿ – 4 ರಿಂದ 5
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಉದ್ದಿನಬೇಳೆ – ಸ್ವಲ್ಪ
  • ಕಡಲೆ ಬೇಳೆ- ಸ್ವಲ್ಪ
  • ಕಡಲೆ ಬೀಜ – ಸ್ವಲ್ಪ
  • ಸಾಸಿವೆ – ಸ್ವಲ್ಪ
  • ಜೀರಿಗೆ -ಸ್ವಲ್ಪ
  • ಹಸಿ ಶುಂಠಿ – ಸ್ವಲ್ಪ
  • ತೆಂಗಿನಕಾಯಿ ತುರಿ -ಸ್ವಲ್ಪ

ಮಾಡುವ ವಿಧಾನ : 

ಮೊದಲೇ  ಅನ್ನವನ್ನು ಬೇಯಿಸಿಟ್ಟುಕೊಳ್ಳಬೇಕು. ಕರಿಬೇವು, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಹಸಿ ಶುಂಠಿ, ತೆಂಗಿನಕಾಯಿ ತುರಿ ಜೊತೆ ಮಿಕ್ಸಿಗೆ ಹಾಕಿ ತೇರಿ ತೇರಿಯಾಗಿ ರುಬ್ಬಿಕೊಳ್ಳಬೇಕು. ಅನಂತರ ಸ್ಟೋವ್ ಮೇಲೆ ಸಣ್ಣ ಬಾಣಲೆಯನ್ನಿಟ್ಟು ಎಣ್ಣೆ ಹಾಕಿ ಅದರಲ್ಲಿ ಜೀರಿಗೆ, ಸಾಸಿವೆ ಹಾಕಬೇಕು ಅದು ಚಟ್ ಪಟ್ ಅಂದಾಕ್ಷಣ ಅದರಲ್ಲಿ ಕಡಲೆ ಬೆಳೆ, ಉದ್ದಿನಬೇಳೆ, ಕಡಲೆ ಬೀಜವನ್ನು ಹಾಕಬೇಕು. ಆಮೇಲೆ ಮಿಕ್ಸಿ ಮಾಡಿದ ಸಾಮಾಗ್ರಿಯನ್ನು ಒಗ್ಗರಣೆ ಹಾಕಿದ ಬಾಣಲೆಯಲ್ಲಿ ಹಾಕಿ ಕೈಯಾಡಿಸಬೇಕು. ಆಮೇಲೆ ಅದಕ್ಕೆ ಅನ್ನವನ್ನು ಸೇರಿಸಿದರೆ, ಕರಿಬೇವಿನ ಚಿತ್ರಾನ್ನ ರೆಡಿ. ಹುಳಿ ಅಂಶ ಇಷ್ಟಪಡುವವರು ಮೇಲೆ ಲಿಂಬೆಹಣ್ಣಿನ ರಸ ಹಿಂಡಬೇಕು.


Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading