ರವಿ ಕಾಣದಿಹದನ್ನು ಕಂಡನು ಕವಿಯು, ಕಾಣದಿರಿ ಕವಿಯ ಕೀಳಾಗಿ …ಕವಿ ಡಾ.ಮಲ್ಲಿಕಾರ್ಜುನ ಎಸ್ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಕವಿಯು ಸಮಾಜದ ಪ್ರತಿಬಿಂಬವು
ಅತ್ಯದ್ಭುತ ಕಲ್ಪನೆಗಳ ಸಾಗರವು
ಕಾವ್ಯ ಕವಿಯ ಜೀವಾಳವು
ರವಿ ಕಾಣದಿಹದನ್ನು ಕಂಡನು ಕವಿಯು
ಅವನ ಲೇಖನಿಯೂ
ಒಮ್ಮೆ ದುರ್ಮಾರ್ಗಿಳ ವಿರುದ್ಧ
ಖಡ್ಗವಾಗುವದು
ಇನ್ನೊಮ್ಮೆ ಕರುಣೆಯ ಕಡಲಾಗುವದು
ಪ್ರೀತಿಯ ಸೆಲೆಯಾಗುವದು
ಮಧುರ ಒಲವಿಗೆ ಪ್ರೇಮಲೋಕವೇ
ಸೃಷ್ಠಿಸಿ ಕೊಡುವದು
ನಿಂದಕರ ನುಡಿಗಳಿಗೆ ನೊಂದರು
ಪುಟಿದೇಳುವದು
ಅನ್ಯಾಯ, ಅಕ್ರಮ ಅಧರ್ಮದ ವಿರುದ್ಧ
ಸಂಘರ್ಷಣೆ ಮಾಡುವದು
ಸಮುದಾಯದ ಓರೆ – ಕೋರೆಗಳ
ತಿದ್ದಿ ತೀಡುವದು
ಪ್ರಕೃತಿಗೆ ತನ್ನಾತ್ಮವನ್ನೇ
ಅರ್ಪಿಸಿಕೊಳ್ಳುವದು
ಬಡತನದ ಬೇಗೆಯಲ್ಲಿ ಬೆಂದರು
ಸಮ ಸಮೂಹದ ಚಿಂತನೆ
ಅನುಕ್ಷಣ ಮಾಡುವದು
ಕಾವ್ಯಕರ್ತ ಧನಿಕನಲ್ಲ ಆದ್ರೆ
ಲೇಖನಿಯೇ ಅವನ ಅಷ್ಟೈಶ್ವರ್ಯವು
ಧನ – ಕನಕ ಕರಗಿಹೋಗಬಹುದು
ಸಿರಿ – ಸಂಪದ ನಾಶವಾಗಬಹುದು
ಕಾವ್ಯವೆಂಬ ಅಮೃತವು
ಚಿರಂಜೀವಿಯಾಗಿದೆ
ಕಾಣದಿರಿ ಕವಿಯ ಕೀಳಾಗಿ
ಕಲೆ, ಸಾಹಿತ್ಯ ಸಂಸ್ಕೃತಿಯೇ
ಮುಂದಿನ ಪರಂಪರೆಗೆ ಮೂಲಾಧಾರವು
- ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ.
