ಕೇರಳದ ಪುಟ್ಟೂ ಅದರ ತಯಾರಿ ಗುಟ್ಟು

ಶ್ರೀಲಂಕಾ, ಮಲೇಷಿಯಾ, ಸಿಂಗಾಪುರ್, ಇಂಡೋನೇಷಿಯ ಮತ್ತು ಪಿಲಿಪೈನ್ಸ್ ನಲ್ಲೂ ಪುಟ್ಟೂ ಪ್ರಖ್ಯಾತಿ ಪಡೆದ ಉಪಹಾರ ಆಗಿದೆ. ಅಸ್ಸಾಂನಲ್ಲಿ ಸುಂಗ – ಪಿತಾ ಎಂಬ ತಿಂಡಿ ಪುಟ್ಟೂ ರೀತಿಯೇ ತಯಾರಿಸುತ್ತಾರೆ. ಪುಟ್ಟೂ ಮಾಡುವ ವಿಧಾನ ಮತ್ತು ಅದರ ವಿಶೇಷತೆಯ ಕುರಿತು ಅರುಣ್ ಪ್ರಸಾದ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಅಸ್ಸಾಂನಲ್ಲಿ ಸುಂಗ – ಪಿತಾ ಎಂಬ ತಿಂಡಿ ಪುಟ್ಟೂ ರೀತಿಯೇ ತಯಾರಿಸುತ್ತಾರೆ. ಪೋರ್ಚುಗೀಸರ ಸ್ಟೀಮ್ ರೈಸ್ ಕೇಕ್ ಕೂಡ ಪುಟ್ಟೂ ರೀತಿಯದ್ದೇ ಇದ್ದು ಪೋಚು೯ಗೀಸರಿಂದಲೇ ಪುಟ್ಟು ಬಂತು ಎಂಬ ವಾದವೂ ಇದೆ.

ಪುಟ್ಟೂ ಬಗ್ಗೆ 15 ನೇ ಶತಮಾನದಲ್ಲಿ ತಮಿಳು ಕವಿ ಅರುಣಗಿರಿನಾಥನ್ ತಮ್ಮ “ತಿರುಪು ಗಾಜು” ಎಂಬ ಪುಸ್ತಕದಲ್ಲಿ ಉಲ್ಲೇಖ ಮಾಡಿರುವುದೆ ಒ0ದು ದಾಖಲೆ ಅದಕ್ಕೂ ಹಿಂದೆ ಪುಟ್ಟೂ ಬಗ್ಗೆ ದಾಖಲೆ ಇಲ್ಲ. ಹೊಸ ಪುಟ್ಟೂ ತಯಾರಿಸುವ ಪಾತ್ರೆಯಲ್ಲಿ ನಾನು ಪುಟ್ಟೂ ತಯಾರಿಸಿದ ಪ್ರಯೋಗ.

ಪುಟ್ಟುಮಾಡುವ ವಿಧಾನ :

ಪುಟ್ಟೂ ಮಾಡುವುದು ತುಂಬಾ ಸರಳ. 4 ಗಂಟೆ ಅಕ್ಕಿ ನೆನಸಿಡುವುದು ನಂತರ ನೀರು ತೆಗೆದು ಮಿಕ್ಸಿಯಲ್ಲಿ ರವೆಯಂತೆ ತರಿ-ತರಿಯಾಗಿ ಪುಡಿ ಮಾಡಿ ಅದನ್ನು ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಹುರಿಯಬೇಕು. ನಂತರ ತಣ್ಣಗಾದಾಗ ಅದಕ್ಕೆ ರುಚಿಗೆ ಬೇಕಾಗುವಷ್ಟು ಉಪ್ಪು ನೀರಲ್ಲಿ ಕರಗಿಸಿ ಕೈಯಿಂದ ಕಲಸಿ, ತೆಂಗಿನ ತುರಿ ಸೇರಿಸಿ, ಸ್ವಲ್ಪ ಸ್ವಲ್ಪ ಬಿಸಿ ನೀರು ಬೆರಸಿ ಹದವರಿತು ಪುಟ್ಟು ಹಿಟ್ಟು ಕಲಸಿಕೊಳ್ಳಬೇಕು (ಹೆಚ್ಚು ಹಸಿ ಆಗಬಾರದು ಮತ್ತು ಹೆಚ್ಚು ಒಣ ಪುಡಿಯೂ ಆಗದಂತೆ).

ಪುಟ್ಟೂ ಮಾಡುವ ಪಾತ್ರೆಗೆ ನೀರು ಹಾಕಿ ಬಿಸಿಗೆ ಇಟ್ಟು, ಪುಟ್ಟೂ ಕೊಳವೆಗೆ ಸ್ವಲ್ಪ ಕಾಯಿ ತುರಿ ನಂತರ ಈ ಹಿಟ್ಟು ನಂತರ ಕಾಯಿ ತುರಿ ನಂತರ ಹಿಟ್ಟು ಹೀಗೆ ಪದರ ಪದರವಾಗಿ ಹಾಕಿ ಮೇಲ್ಬಾಗದಲ್ಲಿ ಕಾಯಿ ತುರಿ ಒಂದೆರೆಡು ಚಮಚ ಸಕ್ಕರೆ ಹಾಕಿ ಪುಟ್ಟೂ ಕೊಳವೆ ಪುಟ್ಟೂ ನೀರಿನ ಪಾತ್ರೆಗೆ ಜೋಡಿಸಿ.

ಪುಟ್ಟೂ ಕೊಳವೆಗೆ ಮುಚ್ಚುಳ ಹಾಕಿ, 10 ನಿಮಿಷದಲ್ಲಿ ಕೊಳವೆಯಿಂದ ಹಬೆ ಬಂದಾಗ ಪುಟ್ಟೂ ಬೆಂದಿರುತ್ತದೆ. ಆಗ ಪುಟ್ಟೂ ಕೊಳವೆ ತೆಗೆದು ಹಿಂಬಾಗದಿಂದ ಪುಟ್ಟೂ ತೆಗೆಯುವ ಕಡ್ಡಿಯಿಂದ ದೂಡಿದರೆ ಪುಟ್ಟೂ ನಮ್ಮ ಉಪಹಾರದ ತಟ್ಟೆಗೆ ಬರುತ್ತದೆ.

ಬಾಳೆ ಹಣ್ಣು ಸಕ್ಕರೆ, ಕಡಲೆ ಪಲ್ಯ, ಮೀನು -ಮಾಂಸದ ಜೊತೆಗೂ ನಿಮ್ಮ ಇಷ್ಟದ ಪದಾರ್ಥದ ಜೊತೆ ಪುಟ್ಟೂ ತಿನ್ನಬಹುದು. ಪುಟ್ಟೂ ಬಗ್ಗೆ 15 ನೇ ಶತಮಾನದಲ್ಲಿ ತಮಿಳು ಕವಿ ಅರುಣಗಿರಿನಾಥನ್ ತಮ್ಮ “ತಿರುಪು ಗಾಜು” ಎಂಬ ಪುಸ್ತಕದಲ್ಲಿ ಉಲ್ಲೇಖ ಮಾಡಿರುವುದೆ ಒ0ದು ದಾಖಲೆ ಅದಕ್ಕೂ ಹಿಂದೆ ಪುಟ್ಟೂ ಬಗ್ಗೆ ದಾಖಲೆ ಇಲ್ಲ. ಈಗ ಪುಟ್ಟು ಕೇರಳ, ತಮಿಳುನಾಡು ಮತ್ತು ನಮ್ಮ ರಾಜ್ಯದ ದ.ಕ.ಜಿಲ್ಲೆಗಳಲ್ಲಿ ಬಳಕೆ ಇದೆ.

ಶ್ರೀಲಂಕಾ, ಮಲೇಷಿಯಾ, ಸಿಂಗಾಪುರ್, ಇಂಡೋನೇಷಿಯ ಮತ್ತು ಪಿಲಿಪೈನ್ಸ್ ನಲ್ಲೂ ಪುಟ್ಟೂ ಪ್ರಖ್ಯಾತಿ ಪಡೆದ ಉಪಹಾರ ಆಗಿದೆ. ಅಸ್ಸಾಂನಲ್ಲಿ ಸುಂಗ – ಪಿತಾ ಎಂಬ ತಿಂಡಿ ಪುಟ್ಟೂ ರೀತಿಯೇ ತಯಾರಿಸುತ್ತಾರೆ. ಪೋರ್ಚುಗೀಸರ ಸ್ಟೀಮ್ ರೈಸ್ ಕೇಕ್ ಕೂಡ ಪುಟ್ಟೂ ರೀತಿಯದ್ದೇ ಇದ್ದು ಪೋಚು೯ಗೀಸರಿಂದಲೇ ಪುಟ್ಟೂ ಬಂತು ಎಂಬ ವಾದವೂ ಇದೆ.
ಈಗೆಲ್ಲ ನವ ನವೀನ ಪುಟ್ಟೂ ಮೇಕರ್ ಮಾರುಕಟ್ಟೆಯಲ್ಲಿದೆ, ಸ್ಟೀಲ್‌ ಮತ್ತು ಅಲ್ಯೂಮಿನಿಯಮ್‌ ನದ್ದು.

ಹಿಂದಿನ ಕಾಲದಲ್ಲಿ ಮಣ್ಣಿನ ಮಡಕೆ, ಬಿದಿರು ಬೊಂಬು ಪುಟ್ಟೂ ತಯಾರಿಸಲ ಬಳಸುತ್ತಿದ್ದರು ನಂತರ ಕಂಚಿನ ಪಾತ್ರೆ ಬಳಕೆ ಆಯಿತು.


  • ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW