‘ಮರೆಯಲಾರದ ನೋವು’ ಕವನ – ಬಿಟ್ಟೀರ ಚೋಂದಮ್ಮ

ಕಾಣದೂರಿಗೆ ಪಯಣ ಬೆಳೆಸಿದೆ ಒಂದು ಮಾತನು ತಿಳಿಸದೆ…ಕಳೆದು ಹೋದವು ಮೂರು ವರ್ಷವು ಮಗನು ಮನೆಯಲಿ ಇಲ್ಲದೆ…ಕವಿಯತ್ರಿ ಬಿಟ್ಟೀರ ಚೋಂದಮ್ಮ ಅವರು ಮಗನಿಗಾಗಿ ಬರೆದ ಭಾವುಕ ಬರಹ…

ಕಳೆದು ಹೋದವು ಮೂರು ವರ್ಷವು
ಮಗನು ಮನೆಯಲಿ ಇಲ್ಲದೆ
ಬಳಿಯಲಿಲ್ಲದೆ ಜೀವ ಮರುಗಿದೆ
ಹೋದ ಜಾಡನು ತಿಳಿಯದೆ

ಬದುಕಿ ಬಾಳಲು ಸಮಯವಿದ್ದರು
ತೊರೆದೆಯೇತಕೆ ನಮ್ಮನು
ಕೆದಕಿ ಕಾಡಿದೆ ಹಳೆಯ ಗಾಯವು
ವ್ರಣಕೆ ಔಷಧಿ ಕಾಣೆನು

ಕಾಣದೂರಿಗೆ ಪಯಣ ಬೆಳೆಸಿದೆ
ಒಂದು ಮಾತನು ತಿಳಿಸದೆ
ಜಾಣತನದಲಿ ಬರುವೆನೀಗಲೆ
ಎಂದ ಮಾತನು ಉಳಿಸದೆ

ನಿನ್ನ ನಂಬಿದ ಜೀವವಿಲ್ಲಿವೆ
ತಾಳಲಾರದ ನೋವಲಿ
ತನ್ನೊಡಲಿನೊಳಗುರಿಯ ಸಂಕಟ
ತಣಿಸಲಾರದೆ ಬದುಕಲಿ

ಹೋದೆಯೆಲ್ಲಿಗೆ ಯಾರು ತಿಳಿಯರು
ವಾರ್ತೆ ತರುವವರಿಲ್ಲದೆ
ಬಾಧೆಯರಿಯದ ಯಮನ ಕಿಂಕರ-
ನೊಯ್ದನೇತಕೆ ಮೋಹದೆ


  • ಬಿಟ್ಟೀರ ಚೋಂದಮ್ಮ , ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading