‘ಕೆಜಿಫ್’ ಯಶಸ್ಸಿನ ಅಲೆಯಲ್ಲಿ ನಾಗೇಂದ್ರ ಪ್ರಸಾದ

bf2fb3_27779768951b4dc4b7fbd9ad3a0e4905~mv2.jpg

ನಾಗೇಂದ್ರ ಪ್ರಸಾದ ಅವರ ರಚನೆಯ ಪ್ರತಿಯೊಂದು ಹಾಡುಗಳನ್ನು ಬಹಳ ಇಷ್ಟಪಟ್ಟು, ತಪ್ಪದೆ ಕೇಳಿದ್ದೇನೆ. ಅವರ ಪ್ರತಿ ಹಾಡುಗಳು ವಿಶೇಷವಾಗಿರುವುದರ ಜೊತೆಗೆ ವಿಭಿನ್ನವಾಗಿದೆ. ಅಷ್ಟೇ ಅಲ್ಲ ನಾನು ಗಮನಿಸಿದ ಹಾಗೆ ಅವರ ಹಾಡುಗಳು ಸಮಾಜಕ್ಕೆ ಎಲ್ಲೊ ಒಂದು ಕಡೆ ಸಂದೇಶವನ್ನು ಸಾರುತ್ತದೆ. ಆದರೆ ಮೊನ್ನೆ ತೆರೆಕಂಡ ಕೆಜಿಫ್ ಸಿನಿಮಾದಲ್ಲಿನ ‘ಸಲಾಂ ರಾಕಿ ಭಾಯಿ… ‘ ಹಾಡನ್ನು ಮೊದಲ ಭಾರಿ ಕೇಳಿದಾಗ ಒಂದು ನಿಮಿಷ ನಾನು ದಂಗಾದೆ. ಕಾರಣ ನಾಗೇಂದ್ರ ಪ್ರಸಾದ ಅವರು ಬಳಸಿದಂತಹ ಹಿಂದಿ ಪದಗಳು. ಒಂದು ಮಾತಿದೆ ನೋಡಿ, ಪ್ರೀತಿ ಇದ್ದ ಕಡೆ ಕೋಪವು ಇರುತ್ತದೆ ಎಂದು. ಅವರ ಹಾಡನ್ನು ಇಷ್ಟಪಟ್ಟ ಮೇಲೆ ಅವರ ಹಾಡಿನ ಮೇಲೆ ಸಿಟ್ಟಾಗುವ ಹಕ್ಕು ನಮಗಿದೆ. ಹಾಗಾಗಿ ಅವರ ಮೇಲೆ ಸ್ವಲ್ಪ ಕೋಪವು ಬಂತು. ಆ ಕೋಪ ನನ್ನ ನೆಚ್ಚಿನ ಗೀತ ರಚನೆಕಾರ ಹಿಂದಿ ಭಾಷೆಗೆ ಮಣೆ ಹಾಕಿದರಲ್ಲ ಎನ್ನುವುದು. ಆ ಸಿಟ್ಟಿನಲ್ಲಿಯೇ ಸಿನಿಮಾ ನೋಡಲು ಹೋದೆ, ಸಿನಿಮಾ ನೋಡಿ ವಾಪಸ್ಸಾಗುವಷ್ಟರಲ್ಲಿ ನನ್ನ ಬಾಯಲ್ಲಿಯೇ ಸಲಾಂ ರಾಕಿ ಭಾಯಿ…ಬಂದುಬಿಟ್ಟಿತು.

bf2fb3_4dd2dc90f64b473a9b2d0ff1a1f65b96~mv2.jpg

ಸಿನಿಮಾದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಹಾಡಿನ ರಚನೆ ಮಾಡುವುದು ಕೆಲವೊಮ್ಮೆ ಅನಿವಾರ್ಯವಾಗಿರುತ್ತದೆ ಎನ್ನುವ ಮಾತನ್ನು ಕಾರ್ಯಕ್ರಮವೊದರಲ್ಲಿ ನಾಗೇಂದ್ರ ಪ್ರಸಾದ ಅವರು ಹೇಳಿದ್ದರು. ಆ ಮಾತು ಈ ಸಂದರ್ಭದಲ್ಲಿ ನೆನಪಿಗೆ ಬಂತು. ಅದೇ ರೀತಿ ಕೆಜಿಫ್ ಸಿನಿಮಾದಲ್ಲೂ ಸಂದರ್ಭಕ್ಕೆ ತಕ್ಕಂತೆ ಹಿಂದಿ ಪದಬಳಕೆ ಮಾಡಲಾಗಿದೆಯೇ ವಿನಃಹ ಇಲ್ಲಿ ಕನ್ನಡ ಭಾಷೆಯನ್ನುಕಡೆಗಾಣಿಸಿಲ್ಲ.

ಬದಲಾಗಿ ಹಿಂದಿ ಟಚ್ ಕೊಟ್ಟು ಕನ್ನಡ ಭಾಷೆಯತ್ತ ಪರಭಾಷಿಗರನ್ನು ಸೆಳೆದಿದ್ದಾರೆ. ಹಾಡು ನಿಜಕ್ಕೂ ಖುಷಿ ಕೊಡುತ್ತದೆ. ಸಿನಿಮಾವಂತೂ ಎಲ್ಲರ ಬಾಯಲ್ಲೂ ಸೂಪರ್ ಎನ್ನಿಸಿಕೊಂಡಿದೆ. ಅದೇ ರೀತಿ ‘ಸಲಾಂ ರಾಕಿ ಭಾಯಿ…’ ಹಾಡು ಕೂಡಾ ಯಶಸ್ಸಾಗಿದೆ.

ನಾಗೇಂದ್ರ ಪ್ರಸಾದ ಅವರು ಸಾಕಷ್ಟುಹಾಡುಗಳನ್ನು ರಚಿಸಿದ್ದಾರೆ. ಒಂದು ಕಡೆ ನೀನೇ ರಾಮ…ನೀನೇ ಶಾಮಾ… ಹಾಡಿನ ಮೆಲೋಡಿ ಸ್ವಾದವಿದ್ದರೆ,ಇನ್ನೊಂದೆಡೆ ಡಾರ್ಲಿಂಗ್ …ಡಾರ್ಲಿಂಗ್….ಕಮ್…ಕಮ್…ಡಾರ್ಲಿಂಗ್ ವೀ ಗೋ ಜಾಲಿ ..ಎನ್ನುವ ಮಜಕೊಡುವಂತಹ ಹಾಡು. ಸ್ವಲ್ಪ ಮುಂದೆ ಹೋಗಿ ಕೇಳಿದರೆ ‘ಅಪ್ಪ…ಲವ್ ಯು ಪಾ’ ಎನ್ನುವ ಭಾವನಾತ್ಮಕ ಹಾಡುಗಳು. ಕೇಳುಗರಿಗೆ ನಾಗೇಂದ್ರ ಪ್ರಸಾದ ಎಂದರೆ ಬಿಡಿಸಲಾಗದ ಕಗ್ಗಂಟಿನ ಬರಹಗಾರ. ಎಂತಹ ಹಾಡುಗಳನ್ನಾದ ರೂ ತಕ್ಷಣಕ್ಕೆ ಕೊಡ ಬಲ್ಲರು. ಎಷ್ಟೋ ಬರಹಗಾರರು, ಗೀತರಚನಾಕಾರರು ತನ್ನದೆಯಾದಂತಹ ಒಂದು ಶೈಲಿಯನ್ನು ಮಾತ್ರ ರೂಢಿಸಿಕೊಂಡಿರುತ್ತಾನೆ. ಅದರಲ್ಲೂ ಗೀತ ರಚನಾಕಾರನಾದರೆ ಮೆಲೋಡಿಯಲ್ಲೋ ಅಥವಾ ಟಪೋರಿ ಸ್ಟೈಲ್ ನಲ್ಲೂ ಒಂದರಲ್ಲಿ ಮಾತ್ರ ಸೈ ಎನ್ನಿಸಿಕೊಂಡಿರುತ್ತಾನೆ. ಆದರೆ ನಾಗೇಂದ್ರ ಪ್ರಸಾದ ಹಾಗಲ್ಲ.ಈ ಸಂದರ್ಭಕ್ಕೆ ಈ ಹಾಡು ಬೇಕು ಎಂದರೆ ಸಾಕು ಆ ಹಾಡು ರೆಡಿ ಮಾಡಿ ಬಿಡುತ್ತಾರೆ. ಅವರ ಯಾವ ಹಾಡುಗಳು ಒಂದನೊಂದು ಹೋಲುವುದೇ ಇಲ್ಲ. ಅವರ ಹಾಡಿನ ಮೋಡಿಯೇ ಅಂತದ್ದು.. ಎಲ್ಲವೂ ವಿಶೇಷ.ಅದು ಹೇಗೆ ಸಾಧ್ಯ? ಎನ್ನುವ

ಪ್ರಶ್ನೆಗೆ ಅವರಿಂದಲೇ ಉತ್ತರ ಬರಬೇಕು.

images (11)

ಅವರ ‘ಸಾಲುತ್ತಿಲ್ಲವೇ ?…ಸಾಲುತ್ತಿಲ್ಲವೇ?…ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ?…’ ಹಾಡು ರಚನೆಯಾಗಿದ್ದು ವಿಶೇಷವಂತೆ. ಮೊದಲು ಬರೆದ ಹಾಡನ್ನು ಪೂರ್ತಿಯಾಗಿ ಬದಲಾಯಿಸಿ, ಮುಂಬೈ ಮುಟ್ಟುವಷ್ಟರಲ್ಲೇ ವಿಮಾನದಲ್ಲೇ ಕುಳಿತು ಬರೆದಂತಹ ಹಾಡದು. ಕಡಿಮೆ ಅವಧಿಯಲ್ಲಿ ಮೈರೋಮಾಚನ ಗೊಳಿಸುವಂತಹ ಹಾಡನ್ನು ರಚಿಸಿ,ಎಲ್ಲರೂ ಆ ಹಾಡನ್ನು ಗುನ್-ಗುನ್ನಾಯಿಸು ವಂತೆ ಮಾಡಿದರು. ಸಿನಿಮಾಕ್ಕೆ ಕತೆಯ ಎಳೆ ಎಷ್ಟು ಮುಖ್ಯವೋ- ಅಷ್ಟೇ ಹಾಡು ಕೂಡಾ ಮುಖ್ಯವಾಗುತ್ತದೆ. ಹಾಡಿನ ಸಾಹಿತ್ಯದಲ್ಲಿ ಗಟ್ಟಿತನವಿಲ್ಲದಿದ್ದರೆ, ಆ ಕ್ಷಣಕ್ಕೆ ಬಿಸಿದ ಬಿರುಗಾಳಿ ಯಂತೆ ಬಂದು ಹೋಗಿಬಿಡುತ್ತದೆ. ಆದರೆ ನಾಗೇಂದ್ರ ಪ್ರಸಾದ ಅವರ ಸಾಹಿತ್ಯದಲ್ಲಿ ಆ ಗಟ್ಟಿತನವನ್ನು ಕಾಣುತ್ತೇವೆ. ಹಾಗಾಗಿ ಅವರ ಹಾಡುಗಳು ಯಾವಾಗೆ ಕೇಳಿದರು ಮನಸ್ಸಿಗೆ ಖುಷಿ ಕೊಡುತ್ತವೆ ಮತ್ತು ಅಚ್ಚಳಿಯದೆ ಉಳಿಯುತ್ತದೆ.

ಈಗ ನಾಗೇಂದ್ರ ಪ್ರಸಾದ ಅವರು ಕೆಜಿಫ್ ಯಶಸ್ಸಿನ ಅಲೆಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಎಂತಹ ಜಮತ್ಕಾರದ ಹಾಡುಗಳನ್ನು ನಮ್ಮ ಮುಂದೆ ತರುತ್ತಾರೋ ಗೊತ್ತಿಲ್ಲ. ಆ ಕುತೂಹಲ ದಲ್ಲಿ ನಾನಿದ್ದೇನೆ. ಮತ್ತು ಅವರ ಹಾಡುಗಳು ಹೀಗೆ ಯಶಸ್ಸನ್ನು ಸಾಧಿಸುತ್ತಿರಲಿ ಎಂದು ನಮ್ಮ ಆಕೃತಿ ಕನ್ನಡ ಪರವಾಗಿ ಆಶಿಸುತ್ತೇನೆ.

 

ಲೇಖನ : ಶಾಲಿನಿ ಪ್ರದೀಪ್

aakritikannada@gmail.com

Home
Search
All Articles
Videos
About
%d bloggers like this:
Aakruti Kannada

FREE
VIEW