ಕೈರ್ಕೆಗಾರ್ಡ್ ನ ಸಮಾಧಿಯ ಎದುರು – ಮೇಗರವಳ್ಳಿ ರಮೇಶ್

ಸ್ಪ್ಯಾನಿಷ್ ಮೂಲ ಕವಿ ಎನ್ರಿಕ್ ಮೋಯಾ ಅವರ ಕವನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಮೇಗರವಳ್ಳಿ ರಮೇಶ್ ಅವರು, ತಪ್ಪದೆ ಓದಿ….

ಆಗಸದ ನೀಲಿಗೆ ನಿಷ್ಠನಾಗಿದ್ದೆ ನಾನು
ಆದರೆ ಕೂಪನ್ ಹೇಗನ್ ನ ಬೂದು ಬಣ್ಣ ಎದುರಾದಾಗ
ನನ್ನನ್ನೇ ನಾನು ಅರ್ಪಿಸಿಕೊಂಡೆ ಅದರಿಚ್ಛೆಯಂತೆ ಪಾದ್ರಿಯಾಗಿ.

ನಾನೀಗ ಎಚ್ಚರಿಕೆಯಿಂದ ಕೇಳಿಸಿಕೊಳ್ಳುತ್ತೇನೆ
ಕವಿದ ಮಂಜಿನೊಳಗಿಂದ ಹೊಮ್ಮುವ ಧ್ವನಿಗಳನ್ನ.
ಅವುಗಳ ಪ್ರತಿಧ್ವನಿಯನ್ನು ಅಕ್ಷರ ರೂಪಕ್ಕಿಳಿಸುತ್ತೇನೆ
ನೆನಪುಗಳು ಬೆರೆತ ಶಾಯಿ ಅಥವಾ ನೀರಿನಿಂದ.

ಸೋರೆನ್ ಕೈರ್ಕೆಗಾರ್ಡನ ಸಮಾಧಿಯ ಮೇಲೀಗ ಹೂವುಗಳಿಲ್ಲ
ಅದರ ಕಲ್ಲಿನ ಮೇಲೆ ಮರದ ನೆರಳೊಂದು ಮಲಗಿದೆ.
ಬೆಳಕಿನತುಣುಕುಗಳು ಕತ್ತಲ ತುಣುಕುಗಳೊಂದಿಗೆ
ಕಣ್ಣಾ ಮುಚ್ಚಾಲೆಯಾಡುತ್ತಿವೆ.

ಚರ್ಚ್ ಯಾರ್ಡಿನ ಮೇಲೆ ಮಂಜುಪೆಟ್ಟಿಗೆಯಲ್ಲಿ ಸ್ತಬ್ಧವಾಗಿದೆ ಆಕಾಶ.
ಡೇನಿಶ್ ಹಕ್ಕಿಗಳು ಸಂದರ್ಭೋಚಿತವಾಗಿ ಹಾಡುತ್ತವೆ:
ಅವುಗಳಿಗೆ ಗೊತ್ತಿದೆ ಯಾವಾಗ ಹಾಡ ಬೇಕೆಂದು–
ಚರಮಗೀತೆಯನ್ನೋ ಅಥವಾ ಸಂತಸದ ಸಂಗೀತವನ್ನೋ.

ಅವನ “ರಸಾಭಿಜ್ನತೆಯ ಅಧ್ಯಯನ” ದಲ್ಲಿ
ತತ್ವಜ್ನಾನಿ ಹೇಳುತ್ತಾನೆ-
“ಮರೆವು ಮತ್ತು ನೆನಪುಗಳಲ್ಲಿ
ಪರಿಪೂರ್ಣತೆಯನ್ನು ಸಾಧಿಸಿದಾಗ ಮಾತ್ರ
ನೀನು ಆಡಬಲ್ಲೆ ಅಸ್ತಿತ್ವಗಳೊಡನೆ ಆಟವನ್ನು.

ಏಪ್ರಿಲ್ ತಿಂಗಳ ಆಗಸದ ಕೆಳಗೆ
ಆಗತಾನೇ ಒಡಮೂಡಿದ ಚಿಗುರಿನೋಂದಿಗೆ
ಸಾವು ಮುಖಾ ಮುಖಿಯಾಗುವಷ್ಟು
“ಕ್ಷಣಿಕ” ಬೇರಾವುದೂ ಇಲ್ಲ!

ಮೂಕನಾಗಿ ಕೂರುತ್ತೇನೆ
ಸ್ಮಾರಕ ಲೇಖನದೆದುರು
ವಸಂತಕ್ಕೊಂದು ಉತ್ತಮ ಕವಿತೆ
ಮೌನದ ಈ ಕ್ಷಣ!

(೧೦ – ೦೩ – ೧೯ )

ಸೋರೆನ್ ಕೈರ್ಕೆಗಾರ್ಡ್

ಫೋಟೋ ಕೃಪೆ : plough

ಹತ್ತೊಂಭತ್ತನೇ ಶತಮಾನದಲ್ಲಿ ( ೫ – ೫ – ೧೮೧೩ ರಿಂದ ೧೧ – ೧೧ – ೧೮೫೫ ರ ವರೆಗೆ) ಜೀವಿಸಿದ ಸೋರೆನ್ ಕೈರ್ಕೆಗಾರ್ಡ್ ಒಬ್ಬ ಡೇನಿಷ್ ತತ್ವಜ್ನಾನಿ, ಮತ ಧರ್ಮ ಶಾಸ್ತ್ರಜ್ನ,ಕವಿ, ಸಾಮಾಜಿಕ ವಿಮರ್ಷಕ ಮತ್ತು ಧಾರ್ಮಿಕ ಬರಹಗಾರ. ಕೈರ್ಕೆಗಾರ್ಡ ಮೊದಲ ಅಸ್ತಿತ್ವವಾದಿ ತತ್ವಜ್ನಾನಿ ಎಂಬ ಹೆಗ್ಗಳಿಕೆ ಇದೆ. ಡೇನಿಷ್ ಭಾಶೆಯಲ್ಲಿ ಬರೆದ ಕೈರ್ಕೆಗಾರ್ಡ್ ನ ವಿಚಾರಗಳು ಮೊದ ಮೊದಲು ಸ್ಕಾಂಡಿನೇವಿಯಾಕ್ಕಷ್ಟೇ ಸೀಮಿತವಾಗಿತ್ತು. ಆದರೆ ಇಪ್ಪತ್ತನೇ ಶತಮಾನ ಅಡಿಯಿಡುತ್ತಿದ್ದಂತೆ ಅವನ ಬರಹಗಳು ಪ್ರಪಂಚದ ಹಲವಾರು ಪ್ರಮುಖ ಭಾಷೆಗಳಿಗೆ ಅನುವಾದಿಸಲ್ಪಟವು , ಇದರಿಂದಾಗಿ ಇಪ್ಪತ್ತನೇ ಶತಮಾನದ ಮಧ್ಯ ಭಾಗದಲ್ಲಿ ಕೈರ್ಕೆಗಾರ್ಡನ ವಿಚಾರಗಳು ತತ್ವಜ್ನಾನ, ಮತಧರ್ಮ ಶಾಸ್ತ್ರ,, ಸಾಹಿತ್ಯ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ಮೇಲೆ ಗಾಢ ಪ್ರಭಾವ ಬೀರಿತು.

****
ಎನ್ರಿಕ್ ಮೋಯಾ 

ಫೋಟೋ ಕೃಪೆ : laotrarevista

ಎನ್ರಿಕ್ ಮೋಯಾ ವೆನಿಜೂಲಿಯನ್ – ಆಸ್ಟ್ರಿಯನ್ ಕವಿ. ೧೯೫೮ ರಲ್ಲಿ ಕಾರ್ಕಾಸ್ ನಲ್ಲಿ ಜನಿಸಿದ ಮೋಯಾ ಓರ್ವ ಕಥೆಗಾರ, ಕವಿ, ಅನುವಾದಕ, ಪ್ರಕಾಶಕ, ಪ್ರಬಂಧಕಾರ, ಸಾಹಿತ್ಯ ಮತ್ತು ಸಂಗೀತ ವಿಮರ್ಷಕ. ಸಾಹಿತ್ಯದ ಹಲವು ಪ್ರಭೇದಗಳಲ್ಲಿ ಬರೆದ ಅವನ ಬರಹಗಳು ಅಮೇರಿಕ, ಲ್ಯಾಟಿನ್ ಅಮೇರಿಕ, ಏಷಿಯಾ ಮತ್ತು ಯೂರೋಪಿನ ಹಲವು ಸಾಹಿತ್ಯಿಕ ಪತ್ರಿಕೆಗಳಲ್ಲಿ ಮತ್ತು ವೃತ್ತಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಹಲವಾರು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಕವಿತಾವಾಚನ ಮಾಡಿರುವ ಮೋಯಾ ಹಲವಾರು ಅಂತರಾಷ್ಟ್ರೀಯ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾನೆ. ಲ್ಯಾಟಿನ್ ಅಮೆರಿಕನ್ ಮತ್ತು ಆಸ್ಟ್ರಿಯನ್ ಲಿಟರರಿ ಫ಼ೋರಂ ನ ನಿರ್ದೇಶಕನಾಗಿದ್ದಾನೆ ಮತ್ತು ವಿಯೆನ್ನಾದಲ್ಲಿ ನಡೆದ ಲ್ಯಾಟಿನ್ ಅಮೇರಿಕನ್ ಪೊಯೆಟ್ರಿ ಫೆಸ್ಟಿವಲ್ ನ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾನೆ.


ಸ್ಪ್ಯಾನಿಷ್ ಮೂಲ : ಎನ್ರಿಕ್ ಮೋಯಾ
ಕನ್ನಡಕ್ಕೆ: ಮೇಗರವಳ್ಳಿ ರಮೇಶ್ (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ)

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW