ನಾಟಿ ವೈದ್ಯೆ ಸುಮನಾ ಮಳಲಗದ್ದೆ ಅವರು ಬೆಂಡೆಕಾಯಿಯಲ್ಲಿರುವ ಔಷಧೀಯ ಗುಣದ ಕುರಿತು ಮಹತ್ವದ ಮಾಹಿತಿಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಬೆಂಡೆಕಾಯಿ ಆಹಾರವಾಗಿ ಪಲ್ಲೆ, ಗೊಜ್ಜು ,ಕಾಯಿರಸ, ಸಾಂಬಾರು, ಸಾರು, ಚಟ್ನಿ ,ಫ್ರೈ, ಮಜ್ಜಿಗೆ ಹುಳಿ,ರಾಯತಾ, ಸಾಸಿವೆ ಮುಂತಾದ ಆಹಾರ ಪದಾರ್ಥವಾಗಿ ಉಪಯೋಗಿಸುವ ಇದು ಔಷಧೀಯ ಗುಣವುಳ್ಳದ್ದು.
ಬೆಂಡೆಕಾಯಿ ಹುಳು ಬೀಳುವುದು ಹೆಚ್ಚು. ಹೆಚ್ಚು ಔಷಧಿ ಹೊಡೆದು ಬೆಳೆದಿರುವ ಬೆಂಡೆಕಾಯಿ ಖರೀದಿಸುವಾಗ ಎಚ್ಚರಿಕೆ ಇರಲಿ.
ಫೋಟೋ ಕೃಪೆ :google
1) ಆಹಾರದಲ್ಲಿ ಹೆಚ್ಚು ಉಪಯೋಗಿಸುವುದರಿಂದ ಕಣ್ಣಿನ ದೃಷ್ಟಿ ಹೆಚ್ಚುತ್ತದೆ.
2) ಬೆಂಡೆಕಾಯಿ ಪೇಸ್ಟ್ ಮಾಡಿ ಕಣ್ಣಿನ ಮೇಲೆ ಪ್ಯಾಕ್ ಹಾಕುವುದರಿಂದ ಕಣ್ಣಿನ ದೃಷ್ಟಿ ಹೆಚ್ಚುತ್ತದೆ ಮತ್ತು ಕಣ್ಣು ತಂಪಾಗುತ್ತದೆ.
3) ಬೆಂಡೆಕಾಯಿ ಕುದಿಸಿ ಲೋಳೆಯನ್ನ ಸ್ವಲ್ಪ ಕೆಂಪು ಕಲ್ಲು ಸಕ್ಕರೆ ಹಾಕಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
4) ಹಸಿ ಬೆಂಡೆಕಾಯಿಯನ್ನು ಮಿಕ್ಸಿಯಲ್ಲಿ ರುಬ್ಬಿ ಆಗ ತಾನೆ ಕರೆದ ಹಾಲನ್ನು ಹಾಕಿ ಕುಡಿಯುವುದರಿಂದ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ.
5) ಎಳೆಯ ಬೆಂಡೆಕಾಯಿಯನ್ನು ಮಿಕ್ಸಿಯಲ್ಲಿ ರುಬ್ಬಿ ಹಾಲು ಸೇರಿಸಿ ಕುಡಿಯುವುದರಿಂದ ಲೈಂಗಿಕ ಶಕ್ತಿ ಹೆಚ್ಚುತ್ತದೆ.
6) ರುಬ್ಬಿದ ಬೆಂಡೆಕಾಯಿಯನ್ನು ಚರ್ಮಕ್ಕೆ ಹಚ್ಚುವುದರಿಂದ ಚರ್ಮದ ಕಾಂತಿ ವೃದ್ಧಿಸುತ್ತದೆ.
7) ಕಾಯಿ ಎಲೆಗಳನ್ನು ಸೇರಿಸಿ ರುಬ್ಬಿ ಕೂದಲಿಗೆ ಹಚ್ಚುವುದರಿಂದ ಕೂದಲಿನ ಶೈನಿಂಗ್ ಹೆಚ್ಚುತ್ತದೆ.
8) ಕಾಯಿಯ ತೊಟ್ಟುಗಳನ್ನು ಜಜ್ಜಿ ರಸ ತೆಗೆದು ಚರ್ಮರೋಗಕ್ಕೆ ಹಚ್ಚುವುದರಿಂದ ಚರ್ಮರೋಗ ಗುಣವಾಗುತ್ತದೆ.
9) ಹೂವುಗಳನ್ನು ಪ್ರತಿದಿನ ಹಾಲಿನೊಂದಿಗೆ ಸೇವಿಸುವುದರಿಂದ ಕೂದಲು ಕಪ್ಪಾಗುತ್ತದೆ.
10) ಮಧುಮೇಹಿಗಳು ಎರಡು ಬೆಂಡೆಕಾಯಿಯನ್ನು ಹೆಚ್ಚಿ ರಾತ್ರಿ ನೆನೆಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಿವುಚಿ ಕುಡಿಯುವುದರಿಂದ ಶುಗರ್ ಹತೋಟಿಗೆ ಬರುತ್ತದೆ.
11) ಬೆಂಡೆಕಾಯಿ ಕ್ಯಾನ್ಸರ್ ರೋಗಿಗಳಿಗೆ ಒಳ್ಳೆಯ ಆಹಾರ.
12) ಗರ್ಭಿಣಿ ಸ್ತ್ರೀಯರು ಬೆಂಡೆ ರಸವನ್ನು ಕುಡಿಯುವುದರಿಂದ ಮಲಬದ್ಧತೆ ಉಂಟಾಗುವುದಿಲ್ಲ.
13) ಸ್ಥೂಲಕಾಯದವರು ಬೆಂಡೆ ರಸವನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ತೂಕ ನಿಯಂತ್ರಣಕ್ಕೆ ಬರುತ್ತದೆ.
14) ಬೆಂಡೆಕಾಯಿ ಹೆಚ್ಚಾಗಿ ತಿನ್ನೋದರಿಂದ ಅಜೀರ್ಣ ಸಂಭವಿಸುತ್ತದೆ.
15) ಬೆಂಡೆಕಾಯಿ ಅತಿಯಾದರೆ ಕಿಡ್ನಿಯಲ್ಲಿ ಕಲ್ಲು ಆಗುವ ಸಂಭವ ಹೆಚ್ಚು.
- ಸುಮನಾ ಮಳಲಗದ್ದೆ