ಜೀವನ ಅಂದರೆ ಇಷ್ಟೇನಾ? – ಹರಿಹರ ಬಿ ಆರ್

ಗಂಡ ಹೆಂಡತಿ ಮಧ್ಯೆ ಸಣ್ಣ ಮನಸ್ತಾಪಗಳು ಶುರುವಾಗಿ ಮುಂದೆ ಆ ಸಮಸ್ಯೆಗಳೆ ಮುಂದೆ ಹೆಮ್ಮರವಾಗಿ ಬೆಳೆಯಲು ಕಾರಣವಾಗುತ್ತದೆ. ಹರಿಹರ ಬಿ ಆರ್ ಅವರು ಪುಟ್ಟ ಕತೆಯ ಮೂಲಕ ಓದುಗರ ಮುಂದೆ ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…

ದಂಪತಿಗಳಾಗಿದ್ದ ಸರು ಮತ್ತು ದೀಪು, ಮಕ್ಕಳು ಆಗುವ ತನಕ ಇಬ್ಬರಲ್ಲೂ ಪ್ರೀತಿ ತುಂಬಿತ್ತು. ಇಬ್ಬರು ಊರ ಎಲ್ಲಾ ಸುತ್ತಿದ್ದೆ ಸುತ್ತಿದ್ದು. ಕಾಲಾನಂತರ ಅವರ ಪ್ರೀತಿಯ ಸಂಕೇತವಾಗಿ ಒಂದು ಗಂಡು, ಇಂದು ಹೆಣ್ಣು ಮಗುವಾಯಿತು. ಇಬ್ಬರೂ ಕಚೇರಿಯ ಕೆಲಸವಿದ್ದುದರಿಂದ ಮಗ ಮತ್ತು ಮಗಳಿಬ್ಬರೂ ದೊಡ್ಡವರಾಗುವ ತನಕ ಗಂಡ ಹೆಂಡತಿ ಇಬ್ಬರೂ ಪರಸ್ಪರ ಕುಳಿತು ಮಾತನಾಡುವುದಿರಲಿ, ಒಬ್ಬರ ಮುಖ ಒಬ್ಬರು ನೋಡಲೂ ಒಮ್ಮೊಮ್ಮೆ ಆಗುತ್ತಿರಲಿಲ್ಲ. ಮಕ್ಕಳನ್ನು ನೋಡಿಕೊಳ್ಳುವುದರಲ್ಲೇ ಲೀನವಾಗಿರುತ್ತಿದ್ದರು.

ನಾನು ಅಡುಗೆ ಮಾಡ್ತಿರ್ತೀನಿ. ಮಕ್ಕಳಿಬ್ಬರಿಗೂ ಸ್ನಾನ ಮಾಡಿಸಿ , ತಿಂಡಿ ತಿನ್ನಿಸಿ , ಆಟೋ ಹತ್ತಿಸಬೇಕು ಮಕ್ಕಳು ಹೋದಮೇಲೆ ಪೂಜೆ ಮಾಡಿ ಇಬ್ಬರೂ ತಿಂಡಿ ತಿಂದು ಕಚೇರಿಗೆ ಹೋಗೋಣ ಎಂದು ಸರು ಗಂಡನಿಗೆ ಹೇಳಿದ್ದಳು .

ಅದಕ್ಕೆ ದೀಪು ಎಲ್ಲದಕ್ಕೂ ‘ಹು0’ ಎಂದು ಹೇಳುತ್ತಾ ಮಾಡುತ್ತಿದ್ದ.

ಕೆಲವೊಮ್ಮೆ ಮರೆತು ಕೆಲಸ  ಮಾಡದಿದ್ದರೆ ಇಬ್ಬರಲ್ಲೂ ವೃಥಾ ಮಾತು ಕತೆಗಳಾಗುತ್ತಿತ್ತು. ಮನೆಯಲ್ಲಿ ಮಕ್ಕಳಿಗೆ ಹುಷಾರಿಲ್ಲ ಎಂದರೆ ಇಬ್ಬರಲ್ಲಿ ಒಬ್ಬರು ಅರಿತು ರಜೆ ಹಾಕಿ ನೋಡಿಕೊಳ್ಳುವ ಒಪ್ಪಂದವಾಗಿತ್ತು. ಒಮ್ಮೊಮ್ಮೆ ಒಪ್ಪಂದ ಭಂಗವಾದಾಗ ಸೋತು ಜಗಳವಾಗುತ್ತಿತ್ತು.

ಶನಿವಾರ , ಭಾನುವಾರ ಆಫೀಸ್ ರಜೆ ಸಿಕ್ಕಾಗ ಮಕ್ಕಳ ಆಟ, ಸುತ್ತಾಟ, ಹೋಟೆಲ್ ಹೀಗೆ ಕಳೆದು ಹೋಗುತ್ತಿತ್ತು. ಮನೆಗೆ ಬಂದಾಗ ಇಬ್ಬರಿಗೂ ಆಯಾಸವಾಗಿ ಇಬ್ಬರು ಒಂದೊಂದು ಮಗುವಿನ ಪಕ್ಕದಲ್ಲಿ ಬೇರೆ ಬೇರೆ ಕೋಣೆಯಲ್ಲಿ ಮಲಗುತ್ತಿದ್ದರು. ನಿಧಾನವಾಗಿ ಇಬ್ಬರಲ್ಲೂ ಮೊದಲಿದ್ದ ಪ್ರೀತಿ ಕಡಿಮೆಯಾಗ ತೊಡಗಿತು.

ಒಂದು ದಿನ ಇಬ್ಬರಿಗೂ ಅನಿಸಿತು. ನಮ್ಮ ಪ್ರೀತಿ ಮಕ್ಕಳ ಮೇಲೆ ತಿರುಗಿ ಹೋಗಿದೆ. ನನಗಾಗಿ ದೀಪುವಿನ ಬಳಿ ಸಮಯವಿಲ್ಲ, ಸರುಗೆ ನನ್ನಗಾಗಿ ಸಮಯವಿಲ್ಲ ಎಂದು ದೀಪುವಿಗೆ ಅನಿಸಿತು.  ಮಕ್ಕಳ ಕೆಲಸಗಳನ್ನು ಭಾಗ ಮಾಡಿಕೊಂಡು, ನಾವಿಬ್ಬರೂ ಭಾಗಶಃ ಬೇರೆ ಬೇರೆಯಾಗಿ ಬದುಕುತ್ತಿದ್ದೇವೆ ಎಂದು ನಿರಾಸೆಯಾಗಿ ಜೀವನ ಅಂದರೆ ಇಷ್ಟೇನಾ? ಎಂದು ಇಬ್ಬರು ದುಃಖ ಪಟ್ಟರು.


  • ಹರಿಹರ ಬಿ ಆರ್ – ಅಕ್ಷಂತಲ ಬರಹ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading