ಬದುಕು ಕಟ್ಟಿಕೊಳ್ಳಲು ಅಲೆದಾಡುವ ಜೀವಿಗಳ ಕತೆ

ಇಳಿವಯಸ್ಸಿನಲ್ಲಿ ಮನೆ ಜವಾಬ್ದಾರಿ ಹೊತ್ತಾಗ ಆಗುವ ಮಾನಸಿಕ ಹಿಂಸೆ ಅದರ ತೊಳಲಾಟದ ಕುರಿತು ಯುವ ಲೇಖಕ ವಿಕಾಸ್ ಮಡಿವಾಳರ ಅವರು ಬರೆದಿರುವ ಚಿಂತನ ಲೇಖನವನ್ನು ತಪ್ಪದೆ ಓದಿ…

ಸಾಗುತ ದೂರ ದೂರ

“ನನ್ನಂತ ಕಷ್ಟ ಯಾರಿಗೂ ಬರಬಾರದು ” ನನ್ನ ಅಣ್ಣ ಹೇಳಿದ ಮಾತಿದು. ಅವತ್ತು ಯಾಕೊ ಮನಸಲ್ಲೊಂದು ಚಡಪಡಿಕೆ ಇತ್ತು ತುಂಬಾ ಕೆಲಸಗಳಿದ್ದರೂ ಮನಸ್ಸು ನನ್ನ ಮಾತನ್ನ ಕೇಳೊ ಸ್ಥಿತಿಯಲ್ಲಿ ಇರಲಿಲ್ಲ. ಬೆಳಬೆಳಗ್ಗೆ ನೆಲದ ಮೇಲೆ ಹಾಸಿದ ಚಾಪೆಗೆ ತಲೆ ಕೊಟ್ಟು ಮಲಗಿದಾಗ ಒಂದು ಹಿತ ಅನುಭವವಾಗುತ್ತಿತ್ತು. ಆಗಲೆ ಕೊನೆಯ ಮೂಲೆಯಲ್ಲಿ ಮಲಗಿದ್ದ ನನಗೆ ಕಂಡಿದ್ದು ನಮ್ಮಣ್ಣನ ಮುಖ.

ಅವನು ನನ್ನ ಒಡಹುಟ್ಟಿದವನಾಗದಿದ್ದರು ಸ್ವಂತ ಅಣ್ಣನೂ ಕೂಡ ಕೊಡದ ಪ್ರೀತಿಯನ್ನು ಕೊಟ್ಟಿದ್ದ. ನನ್ನ ನೋವು ನಲಿವಿನ ದೋಣಿಯಲ್ಲಿ ನಾವಿಕನಾಗಿ ಪ್ರೋತ್ಸಾಹಿಸಿದ್ದ. ಸದಾ ನಗುಮುಖ ಇಟ್ಟುಕೊಂಡು ಸಾಗುವ ಅವನ ಜೀವನದ ಬಗ್ಗೆ ಬರೆಯುವ ಆಸೆಯಿಂದ ನನ್ನ ಮನದ ಇಂಗಿತವನ್ನ ಅವನಿಗೆ ತಿಳಿಸಿದೆ. ಕೆಲ ಸಮಯ ಕೆಲಸದಲ್ಲಿ ತೊಡಗಿಸಿಕೊಂಡು ಬಿಡುವಾದಾಗ ನನ್ನ ಮಾತಿಗೆ ತಲೆಬಾಗಿ ಅವನ ಜೀವನದ ಪುಟಗಳನ್ನು ತೆರೆದಿಟ್ಟ.

ಅವನ ಕತೆಯನ್ನು ಕೇಳಿದ ಮೇಲೆ ನಾನೆ ಸೋತು ಹೋದೆ. ಸದಾ ನಗುವ ಮನಸ್ಸಿನಲ್ಲಿ ಎಷ್ಟು ನೋವಿತ್ತು ಎಂದು ನನಗೆ ಅರಿವಾಗಲಿಲ್ಲ. ಇದು ಅವನದೊಂದೆ ಕತೆಯಲ್ಲ, ಅವನಂತಹ ನೂರಾರು ಮಂದಿ ನಮ್ಮ ಸುತ್ತಮುತ್ತಲು ಕಾಣುವರು. ತಮ್ಮ ನೋವನ್ನು ಹೇಳಿಕೊಳ್ಳಲಾಗದೆ ಅನುಭವಿಸಲಾಗದೆ, ಮುಖದಲ್ಲಿ ಸುಳ್ಳು ನಗುವೊಂದನ್ನು ಹಿಡಿದುಕೊಂಡು ಸಾಗುವ ನೂರಾರು ಜನರಲ್ಲಿ ಅವನು ಕೂಡ ಒಬ್ಬನಾಗಿದ್ದ.

ಫೋಟೋ ಕೃಪೆ : punemirror

ನಮ್ಮ ಶಾಲಾ ದಿನಗಳಲ್ಲಿ ನಾವು ಕಂಡ ಕನಸೆಂದರೆ, ಒಂದು ಡಾಕ್ಟರ್ ಆಗುವುದು ಇಲ್ಲ ಇಂಜಿನಿಯರ್ ಆಗುವುದು. ಕಾಲೇಜು ಮೆಟ್ಟಿಲು ಹತ್ತುವಷ್ಟರಲ್ಲಿ ಕೆಲವರಿಗೆ ಈ ಕನಸುಗಳು ಕನಸಾಗೆ ಉಳಿಯುತ್ತದೆ. ಇನ್ನೂ ಕೆಲವರಿಗೆ ನನಸಾದರು ಏನು ಪ್ರಯೋಜನವಿಲ್ಲವೆಂಬ ಭಾವನೆಯಲ್ಲಿ ಮುಳುಗಿರುತ್ತಾರೆ. ಸ್ವಲ್ಪ ಜನಕ್ಕೆ ಪಿ. ಯು. ಸಿ ಯಲ್ಲಿ 80% ತಗೆದು ಇಂಜಿನಿಯರ್ ಕಾಲೇಜು ಸಿಕ್ಕಿತು ಅನ್ನೊ ಖುಷಿಯಲ್ಲಿ ಒಂದು ವರ್ಷ ಹೇಗೆ ದಾಟಿತು ಅಂತಾ ಅರಿವಾಗುವುದೆ ಇಲ್ಲ. ಮುಂದೆ ಕಾಲೇಜಿಗೆ ಚಕ್ಕರ್, ಪ್ರೇಮ ಕಾವ್ಯ, ಪ್ರೀತಿ ಮಧುರ ತ್ಯಾಗ ಅಮರ, ಗಲಾಟೆ, ತಲೆಹರಟೆ,ಹೀಗೆ ಸಾಗಿದ ದಿನಗಳಿಗೆ ಒಂದು ಫುಲ್ ಸ್ಟಾಪ್ ಇಟ್ಟಿದ್ದು ಅವರ ಓದು ಮುಗಿದ ಮೇಲೆಯೆ. ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಒಳ್ಳೆ ಕೆಲಸ ಸಿಗುತ್ತೆ, ಹಾಗೆ ಆಗುತ್ತೆ ಹೀಗೆ ಆಗುತ್ತೆ ಅಂತಾ ಕಟ್ಟಿಕೊಂಡ ಕನಸಿನ ಗೋಪುರ ತಮ್ಮ ಕಣ್ಣೆದುರಿಗೆ ಮುಗುಚಿ ಬೀಳುವುದನ್ನು ಕಂಡು ಯಾರು ತಾನೆ ಸಹಿಸಿಕೊಳ್ಳುತ್ತಾರೆ ಹೇಳಿ. ಆದರೆ ಅವರು ಸಹಿಸಿಕೊಳ್ಳುವುದು ತುಂಬಾನೆ ಇತ್ತು. ಇದು ಅವರ ಬದುಕಿನ ಟ್ರೈಲರ್ ಆಗಿತ್ತು ಅಷ್ಟೆ.

ಫೋಟೋ ಕೃಪೆ : voicesofyouth

ಕಷ್ಟವೆಂದರೆ ಏನು ಅಂತಾ ತಿಳಿಯದ ಮುಗ್ದ ಜೀವಿಗಳಿಗೆ, ಜವಾಬ್ದಾರಿಗಳು ಬಂದಾಗ ಯಮನ ಹೆಗಲಿಗೆ ತಲೆ ಕೊಟ್ಟಂತೆ ಅನಿಸುತ್ತದೆ. ಇಷ್ಟು ದಿನ ಅವರನ್ನು ರಾಜ ರಾಣಿಯರಂತೆ ಸಾಕಿದ ಅವರ ತಂದೆ ತಾಯಿಯರು, ಮುಂದೆ ನಮ್ಮ ಮಕ್ಕಳು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆಂದು ಹವಾನಿಸುತ್ತಿರುತ್ತಾರೆ. ಅನಿಸಿದ್ದು ಆಗದಿದ್ದಾಗ ಬೆಂಗಳೂರು, ಬಾಂಬೆ, ಹೈದರಾಬಾದ್ ಕಡೆ ಕೆಲಸ ಹುಡುಕಿಕೊಂಡು ಹೋಗುವ ಜೀವಿಗಳಿಗೆ ಮುಂದೆನಾಗುತ್ತದೆ ಎಂಬ ಸಣ್ಣ ಅರಿವು ಕೂಡ ಇರುವುದಿಲ್ಲ. ಏನನ್ನೊ ಸಾಧಿಸಬೇಕೆಂಬ ಹುಚ್ಚು ಜಂಭತನ, ಕೆಲಸ ಸಿಗದೆ ಹಗಲಿರುಳು ಅಲೆದಾಡಿ ಮಲಗಿದಾಗಲೆ ಸುಟ್ಟು ಹೋಗುವುದು. ಪಾಪ ಪಂಜರದ ಗೀಳಿಗೆ ಹಾರುವುದು ಹೇಗೆ ಗೊತ್ತಿರುತ್ತೆ ಹೇಳಿ. ಸಂಜೆ ಬರುವ ಪಾಲಕರ ಕರೆ ಕೆಲಸ ಸಿಕ್ಕಿತಾ ಅಂತ ಕೇಳಿದಾಗ, ಭೂಮಿಯೆ ಒಂದು ಕ್ಷಣ ಬಿರುಕಾದಂತೆ ಅನಿಸುತ್ತದೆ.

ತಂದೆ ತಾಯಿಯನ್ನು ಸಾಕುವ ಚಿಂತೆ, ತಂಗಿ ಅಣ್ಣಂದಿರ ಮದುವೆ, ಮನೆಯ ಸಾಲ, ಮುಂತಾದ ಆಲೋಚನೆಗಳು ಅವರ ನಿದ್ರೆಯನ್ನು ಕಿತ್ತು ತಿಂದರೆ, ಬೆಳಗ್ಗೆ ಅದೆ ಹಾಡು ಅದೆ ರಾಗ ಅಂತ ಕಾಲಿಗೆ ಬೂಟು ಹಾಕಿಕೊಂಡು ಗೆಳೆಯನಲ್ಲಿ ಒಂದೆರಡು ನೂರು ರೂಪಾಯಿ ಸಾಲ ಮಾಡಿ ಕೆಲಸ ಹುಡುಕಿಕೊಂಡು ಹೋಗುವಾಗ, ಅವರ ಮನಸಲ್ಲಿ ಬರುವ ಮಾತೆ ” ನನ್ನಂತ ಕಷ್ಟ ಯಾರಿಗೂ ಬರಬಾರದು ”


  • ವಿಕಾಸ್ ಮಡಿವಾಳರ – ಯುವ ಬರಹಗಾರ

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW