ಮದರಂಗಿ ಅಥವಾ ಗೋರಂಟಿ ಎಂದು ಕರೆಯಲ್ಪಡು ಈ ಗಿಡದ ಮಹತ್ವದ ಕುರಿತು ನಾಟಿವೈದ್ಯರಾದ ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಇದನ್ನು ಹೆಚ್ಚಾಗಿ ಚರ್ಮಕ್ಕೆ ಕೂದಲಿಗೆ ಬಣ್ಣ ಬರಿಸಲು ಉಪಯೋಗಿಸುತ್ತಾರೆ. ಇದರ ಬೇರು, ಕಾಂಡ, ಎಲೆ, ಹೂ, ಕಾಯಿ ಇವುಗಳು ಔಷಧೀಯ ರೂಪದಲ್ಲಿ ಉಪಯೋಗಿಸುತ್ತಾರೆ.
1) ಇದರ ಎಲೆಯನ್ನು ಮತ್ತು ನೀಲಿ ಸೊಪ್ಪು ಸೇರಿಸಿ ಅರೆದು ತಲೆಗೆ ಪ್ಯಾಕ್ ಹಾಕುವುದರಿಂದ ಕೂದಲು ಕಪ್ಪು ಮಿಶ್ರಿತ ಕೆಂಪು ಬಣ್ಣ ಬರುತ್ತದೆ. ಇದು ನ್ಯಾಚುರಲ್ ಹೇರ್ ಡೈ.
2) ಮದರಂಗಿಯ ಎಲೆಗಳನ್ನು ಪೇಸ್ಟ್ ಮಾಡಿ ಬಾಯಿ ಹುಣ್ಣಿಗೆ ಹಚ್ಚುವುದರಿಂದ ಬಾಯಿ ಹುಣ್ಣು ಗುಣವಾಗುತ್ತದೆ.
3) ಇದರ ಎಲೆಯ ಕಷಾಯ ಮಾಡಿ ಹಾಲು ಹಾಕಿ ಸ್ವಲ್ಪ ಕೆಂಪು ಕಲ್ಲು ಸಕ್ಕರೆ ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ದೇಹದಲ್ಲಿ ಬಲ ಉಂಟಾಗುತ್ತದೆ ಮತ್ತು ರಕ್ತ ಶುದ್ಧಿಯಾಗುತ್ತದೆ.
ಫೋಟೋ ಕೃಪೆ : google
4) ಗೋರಂಟಿ ಸೊಪ್ಪು, ಬೆಳ್ಳುಳ್ಳಿ, ಮೆಣಸು, ನಿಂಬೆರಸ ಸೇರಿಸಿ ಅರೆದು ಪೇಸ್ಟ್ ಮಾಡಿ ಹಚ್ಚುವುದರಿಂದ ಉಗುರು ಸುತ್ತು ನಿವಾರಣೆ ಆಗುತ್ತದೆ.
5) ಸೊಪ್ಪನ್ನು ನಿಂಬೆಹುಳಿಯಲ್ಲಿ ಅರೆದು ಅಂಗಲಿಗೆ ಹಚ್ಚುವುದರಿಂದ ಅಂಗಾಲು ಉರಿ ಗುಣವಾಗುತ್ತದೆ.
6) ಒಂದು ಭಾಗ ಸೊಪ್ಪು ರಸ ತೆಗೆದು ಮೂರು ಭಾಗ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಸೇರಿಸಿ ಕಾಯಿಸಿ ತಯಾರಿಸಿದ ಎಣ್ಣೆ ಹಚ್ಚುವುದರಿಂದ ನೆತ್ತಿ ತಂಪಾಗುತ್ತದೆ ಮತ್ತು ಕೂದಲು ಸೊಂಪಾಗಿ ಬೆಳೆಯುತ್ತದೆ.
7) ಗೋರಂಟಿಯ ಹೂ ಗೊಂಚಲನ್ನು ಕೂದಲಿಗೆ ಮುಡಿಯುವುದರಿಂದ ಅಥವಾ ತಲೆದಿಂಬಿನಲ್ಲಿಟ್ಟು ಮಲಗುವುದರಿಂದ ಚೆನ್ನಾಗಿ ನೆಮ್ಮದಿಯ ನಿದ್ದೆ ಬರುತ್ತದೆ.
8) ಗೋರಂಟಿಯ ಹೂವಿನೊಂದಿಗೆ ಪಚ್ಚ ಕರ್ಪೂರ ಸೇರಿಸಿ ಪರಿಮಳ ತೆಗೆದುಕೊಳ್ಳುವುದರಿಂದ ತಲೆನೋವು ಗುಣವಾಗುತ್ತದೆ.
9) ಗೋರಂಟಿಯ ಬೀಜದ ರಸ ತೆಗೆದು ಅಕ್ಕಿ ತೊಳೆದ ನೀರಿನಲ್ಲಿ ಸೇರಿಸಿ ಸೇವಿಸುವುದರಿಂದ ಕಾಮಾಲೆ ಗುಣವಾಗುತ್ತದೆ.
10) ಗೋರಂಟಿ ಬೀಜವನ್ನು ಕೆಂಡದಲ್ಲಿ ಹಾಕಿ ಘಾಟನ್ನು ಕಿವಿಯಲ್ಲಿ ತೆಗೆದುಕೊಳ್ಳುವುದರಿಂದ ಬಾಯಲ್ಲಿ ಹುಳುಗಳು ಬಿದ್ದು ಹಲ್ಲು ನೋವು ಗುಣವಾಗುತ್ತದೆ. ಇದು ನನ್ನ ಅಜ್ಜಿ ಮಾಡುತ್ತಿದ್ದ ಹಲ್ಲು ನೋವಿಗಾಗಿ ಔಷಧಿ.
11) ಸೊಪ್ಪನ್ನು ನಾಟಿ ಹಸುವಿನ ಹಾಲಿನಲ್ಲಿ ಸೇವಿಸುವುದರಿಂದ ಕಾಮಾಲೆ ಮತ್ತು ಕಾಮಾಲೆಯಿಂದ ಆದ ಸುಸ್ತು ಗುಣವಾಗುತ್ತದೆ.
12) ಗೋರಂಟಿ ಗಿಡದ ಚಕ್ಕೆಯನ್ನು ಕಷಾಯ ಮಾಡಿ ಕುಡಿಯುವುದರಿಂದ ಮೂತ್ರದ ಕಲ್ಲು ನಿವಾರಣೆ ಆಗುತ್ತದೆ.
13) ನಾನು ತಯಾರಿಸುವ ಕೂದಲಿನ ಎಣ್ಣೆಯಲ್ಲಿ ಗೋರಂಟಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ತಲೆಗೆ ಹಚ್ಚುವ ಸೋಪಿನಲ್ಲಿಯೂ ಗೋರಂಟಿ ಇರುತ್ತದೆ
14)) ಉತ್ತರ ದಿಕ್ಕಿಗೆ ಹೋದ ಗೋರಂಟಿ ಬೇರನ್ನು ಅಮಾವಾಸ್ಯೆ ಯಂದು ಕಿತ್ತು ಪೂಜಿಸಿ ಕೊರಳಲ್ಲಿ ಕಟ್ಟುವುದರಿಂದ ಯಕೃತ್ತಿನ ಸಮಸ್ಯೆಗಳು ನಿವಾರಣೆ ಆಗುತ್ತದೆ. ಇದು ಮೂಢನಂಬಿಕೆಯಲ್ಲ. ಸ್ನಾನ ಮಾಡುವಾಗ ಎದೆಯ ಭಾಗದಿಂದ ನೀರು ಬಿದ್ದು ಈ ಕ್ರಿಯೆ ಇಂದ ಸರಿ ಹೋಗಿರುತ್ತದೆ .
15) ವರ್ಷಕ್ಕೆ ಒಮ್ಮೆ ನಾಗರ ಪಂಚಮಿಯಲ್ಲಿ ಸಾಂಪ್ರದಾಯಿಕವಾಗಿ ಉಗುರಿಗೆ ಉಪಯೋಗಿಸುತ್ತಾರೆ. ಇದರಿಂದ ಉಗುರಿನ ಅನೇಕ ಕಾಯಿಲೆಗಳು ಗುಣವಾಗುತ್ತದೆ. ಇದು ನಮ್ಮ ಹಿರಿಯರು ರಕ್ತ ಶುದ್ದಿಗೆ ಕಾಣಿಸಿಕೊಂಡ ಉಪಾಯ.
- ಸುಮನಾ ಮಳಲಗದ್ದೆ