ಗಂಟೆಗಟ್ಟಲೆ ಪೂಜೆ ಮಾಡಿಕೊಂಡು, ಮನಸಿನಲ್ಲಿ ಕಲ್ಮಶ ತುಂಬಿಕೊಂಡು ಜೀವನ ನಡೆಸುವ ಬದಲು ಅವರ ಭಕ್ತಿ ಭಾವಕ್ಕೆ ತಕ್ಕ ಹಾಗೆ ಪೂಜಿಸಿದರಾಯಿತು ಎಂಬ ಭಾವನೆ ಮೂಡಿತು. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ‘ಲೈಟ್ ಕಂಬದ ದೇವರು’ ತಪ್ಪದೆ ಮುಂದೆ ಓದಿ…
ಇದೇನಿದು ಅಂತ ಅನಿಸಿರಬಹುದಲ್ವಾ? ಹೌದು ಅನಿಸುತ್ತದೆ ಯಾವೂರಿನ ಲೈಟ್ ಕಂಬದ ದೇವರಪ್ಪಾ ಅಂತ. ದೇವರು ಎಲ್ಲಾ ಕಡೆಯೂ ಇದಾನೆ, ಎಲ್ಲರಲ್ಲೂ ಇದಾನೆ, ನಮ್ಮಲ್ಲೇ ಇದಾನೆ ಹೀಗೆ ಅನೇಕರ ಅನಿಸಿಕೆ, ನಂಬಿಕೆ ಅಭಿಪ್ರಾಯಗಳು. ಹಾಗೆ ಇದು ಲೈಟ್ ಕಂಬದ ದೇವರು.
ನಾನು ಹೊರಗೆ ಹೋದಾಗ ಸುತ್ತ ಮುತ್ತ ಜನ ಪ್ರಾಣಿ ಪಕ್ಷಿ ಮಕ್ಕಳು ಹೀಗೆ ಎಲ್ಲರನ್ನೂ ಎಲ್ಲವನ್ನೂ ಗಮನಿಸಿಕೊಂಡು, ಅಲ್ಲಿ ಇಲ್ಲಿ ನೋಡಿಕೊಂಡು ಹೋಗುತಿರುತ್ತೇನೆ. ವಿಶೇಷವಾಗಿದ್ದು ಗಮನ ಸೆಳೆಯುತ್ತದೆ.
ಈಗೆಲ್ಲ ಆನ್ಲೈನ್ ಶಾಪಿಂಗ್ ನಲ್ಲಿ ನಮ್ಮ ರಸ್ತೆ ಬದಿಯ ವ್ಯಾಪಾರವೇ ಮರೆತುಬಿಟ್ಟಿದ್ದೇವೆ. ಜನ ಬೇಡ ಜಾತ್ರೆ ಬೇಡ ಎಲ್ಲಾ ಆನ್ಲೈನ್ ಆಗಿಬಿಟ್ಟಿದೆ……ಅದಕ್ಕೆ ಈಗಿನ ಮಕ್ಕಳಿಗೆ ಭಾವನೆಗಳೇ ಇಲ್ಲ, ಒಬ್ಬರ ಜೊತೆ ಬೆರೆತು ಮಾತನಾಡುವುದಿಲ್ಲ, ಯಾರೊಂದಿಗೆ ಹೇಗೆ ಮಾತನಾಡಬೇಕೆಂದು ಗೊತ್ತಾಗುವುದಿಲ್ಲ. ಯಾರಾದರೂ ಮನೆಗೆ ಹೋದರೆ ಯಾರಿಗೂ ಕಾಣದ ಹಾಗೆ ಕೋಣೆ ಸೇರಿಕೊಂಡು ಬಿಡುತ್ತಾರೆ. ಮಕ್ಕಳೇ ಹಾಗೆ ಮಾಡ್ತಾರೋ ತಂದೆ ತಾಯಿಗಳು ನೋಡಿ ಸುಮ್ಮನಿರಿತ್ತಾರೋ ತಿಳಿಯದಾಗಿದೆ.

ಫೋಟೋ ಕೃಪೆ : google
ಇರಲಿ ವಿಷಯಕ್ಕೆ ಬರ್ತೀನಿ…ಹೀಗೆ ವಿಹಾರ ಹೋಗ್ತ ನೋಡಿದೆ ರಸ್ತೆ ಬದಿಯಲ್ಲಿ ಹೂವು ಮಾರುತಿದ್ದವರನ್ನು. ಪಕ್ಕದಲ್ಲೇ ಲೈಟ್ ಕಂಬ ಅದಕ್ಕೆ ಒಂದು ದೇವರ ಫೋಟೋ ತೂಗು ಹಾಕಿ ಅದಕ್ಕೆ ಹೂವು ಸಿಕ್ಕಿಸಿ ಊದಿನ ಕಡ್ಡಿ ಬೆಳಗಿಸಿ ಪೂಜೆ ಮಾಡಿ ನಂತರ ವ್ಯಾಪಾರಕ್ಕೆ ಕುಳಿತುಕೊಳ್ಳುವ ರೀತಿ ಬಹಳ ಸೋಜಿಗವೆನಿಸಿದರೂ, ಸತ್ಯವೆನಿಸಿತು. ದೇವರು ಎಲ್ಲೆಲ್ಲಿಯೂ ಇದಾನೆ ಎಂದ ಮೇಲೆ ಖಂಡಿತ ಲೈಟ್ ಕಂಬದಲ್ಲಯೂ ಇದಾನೆ ಅನಿಸಿತು…ಅದಕ್ಕೆ ಪವರ್ ಗಾಡ್ ಅವನು….ಇದನ್ನೆಲ್ಲ ನೋಡಿದಾಗ ಕಾಯಕವೇ ಕೈಲಾಸ ಎನ್ನುವರು, ಮತ್ತೂ ಕೆಲವರು ಕಾಯಕದಲ್ಲೇ ಕೈಲಾಸ ಕಾಣುವರು.
ಗಂಟೆಗಟ್ಟಲೆ ಪೂಜೆ ಮಾಡಿಕೊಂಡು, ಮನಸಿನಲ್ಲಿ ಕಲ್ಮಶ ತುಂಬಿಕೊಂಡು ಜೀವನ ನಡೆಸುವ ಬದಲು ಅವರ ಭಕ್ತಿ ಭಾವಕ್ಕೆ ತಕ್ಕ ಹಾಗೆ ಪೂಜಿಸಿದರಾಯಿತು ಎಂಬ ಭಾವನೆ ಮೂಡಿತು. ಯಾವುದೇ ಒಳ್ಳೆಯ ವಿಚಾರಗಳಲ್ಲಿ, ಯಾರಿಗೇ ಆಗಲಿ ಸರಿ ಅನಿಸಿದ್ದನ್ನು ಮಾಡಿದರೆ ಅದು ಅವರ ವೈಯುಕ್ತಿಕ ವಿಷಯ. ಅದರಿಂದ ಬೇರೆ ಯಾರಿಗೂ ತೊಂದರೆ ಆಗದಿದ್ದಲ್ಲಿ ಅದಕ್ಕೆ ಬೇರೆಯವರ ಸಮ್ಮತಿ ಬೇಕಿರುವುದಿಲ್ಲ. ಜನರು ಇದರ ಬಗ್ಗೆ ಮಾತನಾಡಿದರೆ ಅದು ಅವರವರ ಅಭಿಪ್ರಾಯವಾಗಿರುತ್ತದೆ ಅಷ್ಟೆ.
ವೈಯುಕ್ತಿಕ ಅಭಿಪ್ರಾಯವು ಪ್ರತಿಯೊಬ್ಬ ವ್ಯಕ್ತಿಯ ಜೀವನ ಅನುಭವಗಳು, ಮೌಲ್ಯಗಳು, ಸಂಸ್ಕೃತಿ, ಹಾಗೂ ವ್ಯಕ್ತಿತ್ವದಿಂದ ಪ್ರೇರಿತವಾಗಿರುತ್ತದೆ. ಕೆಲವರು ಬದಲಾಯಿಸುವ ಪರಿಸ್ಥಿತಿಗಳು, ಭಾವನೆಗಳು, ಹಾಗೂ ಮಾನಸಿಕ ಸ್ಥಿತಿಯ ಆಧಾರದ ಮೇಲೆ ವಿಷಯವನ್ನು ವಿಭಿನ್ನವಾಗಿ ನೋಡುವುದರಿಂದ, ಅಭಿಪ್ರಾಯಗಳು ವೈಯಕ್ತಿಕವಾಗಿ ವ್ಯತ್ಯಾಸಗೊಳ್ಳುತ್ತವೆ ಉದಾಹರಣೆಗೆ : ಒಂದು ಸಂಗತಿ ಒಬ್ಬನಿಗೆ ಸಹಜವಾಗಿ ಕಂಡರೂ, ಅದೇ ಸಂಗತಿ ಇನ್ನೊಬ್ಬನಿಗೆ ಅಸಹ್ಯವಾಗಬಹುದು. ಹೀಗಾಗಿ, ವೈಯುಕ್ತಿಕ ಅಭಿಪ್ರಾಯಗಳು ಆ ವ್ಯಕ್ತಿಯ ಹಿನ್ನೆಲೆಯನ್ನು ಪ್ರತಿಬಿಂಬಿಸುತ್ತವೆ. ಈ ರೀತಿಯ ಅಭಿಪ್ರಾಯಗಳಿಗೆ ಮನ್ನಣೆ ಕೊಡುತ್ತಾ ಹೋದರೆ ಸ್ವಂತಿಕೆ ಎಂಬುದು ಇರುವುದೇ ಇಲ್ಲ. ಒಂದು ವಸ್ತುವನ್ನು ನೋಡಿದಾಗ ಹೇಗೆ ಒಬ್ಬರಿಗೊಬ್ಬರಿಗೆ ಅದರ ಬಗ್ಗೆ ಯೋಚನೆ ಬರುತ್ತದೋ ಹಾಗೆ ಅವರವರ ಅಭಿಪ್ರಾಯಗಳಿರುತ್ತದೆ.

ಫೋಟೋ ಕೃಪೆ : google
ಹೀಗೆ ದೇವರು ಎಲ್ಲರ ಪಾಲಿಗೆ ಇದನೋ ಇಲ್ಲವೂ, ಅವರ ನಂಬಿಕೆ ಅಥವಾ ಅವರ ವೈಯುಕ್ತಿಕ ವಿಷಯವೋ ಅವರವರಿಗೆ ಬಿಟ್ಟಿದ್ದು. ಆದರೆ ಈ ಥರ ಘಟನೆಗಳನ್ನು ನೋಡಿದಾಗ ನಮಗೆ ಜನ ಜೀವನ ಅರಿಯುವುದು, ಅನುಭವ ಆಗುವುದು ಪ್ರಪಂಚ ಅರಿಯುವುದು. ಮನಸಿನ ಭಾವನೆಗಳು ಬೇರೆ ಆಗಿರುತ್ತದೆ ಅಷ್ಟೆ.
ಭಿನ್ನಾಭಿಪ್ರಾಯಗಳಿಗೆ ಉತ್ತರಿಸಬೇಕಾಗುವುದರ ಅವಶ್ಯಕತೆ ಇರುವುದಿಲ್ಲ. ಸಾಮಾನ್ಯವಾಗಿ ಚರ್ಚೆಗಳು, ನಿರ್ಣಯಗಳು, ಹಾಗೂ ಪರ-ವಿರೋಧ ಅಭಿಪ್ರಾಯಗಳಿರುವ ಸಂದರ್ಭಗಳಲ್ಲಿ ಮಾತ್ರ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಸಂಸ್ಕೃತಿ, ಧರ್ಮ, ಅಥವಾ ನೈತಿಕತೆ ಕುರಿತು ಚರ್ಚಿಸುವಾಗ, ವಿವಿಧ ಅಭಿಪ್ರಾಯಗಳು ಎದುರಾಗುತ್ತವೆ, ಮತ್ತು ಅವುಗಳಿಗೆ ಸ್ಪಷ್ಟನೆ ನೀಡಲು ಅಥವಾ ಉತ್ತರಿಸಲು ಅಗತ್ಯವಿರಬಹುದಾದ ಸಂದರ್ಭದಲ್ಲಿ ಮಾತ್ರ ಹೇಳಬಹುದು.
ರಾಜಕೀಯ ಚರ್ಚೆಗಳು ಅಥವಾ ಸರಕಾರದ ನೀತಿಗಳು ಕುರಿತು ವ್ಯಕ್ತಿಗಳ ಅಭಿಪ್ರಾಯಗಳು ವಿಭಿನ್ನವಾಗಿರಬಹುದು, ಹಾಗೂ ಇವುಗಳ ಬಗ್ಗೆ ಉತ್ತರಗಳು ಭಿನ್ನವಾಗಿರಬಹುದು. ಜೀವನ ಶೈಲಿ, ಧರಿಸುವ ಬಟ್ಟೆ, ಆಹಾರಾಭ್ಯಾಸ, ಮುಂತಾದ ವೈಯಕ್ತಿಕ ಆಯ್ಕೆಗಳ ವಿಷಯದಲ್ಲಿ ಅಭಿಪ್ರಾಯಗಳನ್ನು ಹಂಚಿಕೊಳ್ಳುವಾಗ ಅವುಗಳಿಗೆ ಉತ್ತರಿಸುವುದು ಸಹ ಅವರವರ ಅಭಿಪ್ರಾಯದ ಮೇಲೆ ಅವಲಂಬಿಸಿದೆ. ಹೊಸ ಸಂಶೋಧನೆಗಳು, ತಂತ್ರಜ್ಞಾನಗಳ ಪರಿಣಾಮಗಳು ಇತ್ಯಾದಿ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳು ಇದ್ದಾಗ, ತಾಂತ್ರಿಕ ಅಥವಾ ವೈಜ್ಞಾನಿಕ ಮಾಹಿತಿಯನ್ನು ನೀಡುವುದರಿಂದ ವಿಷಯ ನಿರ್ಣಯಿಸಲು ಸಹಕಾರಿಯಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಅಭಿಪ್ರಾಯಗಳಿಗೆ ಉತ್ತರಿಸುವುದರಿಂದ ಹೊಸ ಅರಿವನ್ನು ಮೂಡಿಸಲು, ತರ್ಕದ ಮೂಲಕ ವಿಷಯವನ್ನು ಸ್ಪಷ್ಟಪಡಿಸಲು ಅಥವಾ ಒಬ್ಬರ ಅಭಿಪ್ರಾಯವನ್ನು ಮತ್ತೊಬ್ಬರಿಗೆ ಅರ್ಥಗೊಳಿಸಲು ಸಹಕಾರಿಯಾಗುತ್ತದೆ.
ಹೀಗೆ ಅವರವರ ಭಾವಕ್ಕೆ, ಅವರವರ ಭಕುತಿಗೆ ಎಂಬಂತೆ ಅನ್ಯರ ಭಾವನೆಗಳಿಗೆ ಧಕ್ಕೆ ಬರದಂತೆ ಇರಬೇಕಾಗುತ್ತದೆ. ಅವರ ಕೆಲಸಗಳಲ್ಲಿ ಯಾವ ಲೋಪವೂ ಇಲ್ಲದೆ, ಬೇರೆಯವರ ಬದುಕಿಗೆ ಕೆಡುಕಾಗದಂತೆ ಇದ್ದರೆ ಅದೇ ಮಹತ್ಕಾರ್ಯ. ಅವರವರ ನಂಬಿಕೆಗೆ ಕೆಲವೊಮ್ಮೆ ಬೆಲೆ ಕೊಡಬೇಕಾಗುತ್ತದೆ. ಲೋಕೋ ಭಿನ್ನ ರುಚಿಃ ಎಂಬಂತೆ ಜನರ ಇಚ್ಚೆ ಬೇರೆ ಬೇರೆ. ಎಲ್ಲರನ್ನೂ ಎಲ್ಲವನ್ನೂ ಗೌರವಿಸುವುದರಲ್ಲಿ ತಪ್ಪು ಕಾಣದು.
ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :
- ಚಂಪಾ ಚಿನಿವಾರ್ (ಆಪ್ತ ಸಮಾಲೋಚಕಿ) ಪರಿಚಯ
- ಮಾನಸ….ಇದು ಮನಸಿನ ಮಾತು (ಭಾಗ-೧)
- ಮಾನಸ….ಇದು ಮನಸಿನ ಮಾತು (ಭಾಗ-೨)
- ಮಾನಸ….ಇದು ಮನಸಿನ ಮಾತು (ಭಾಗ-೩)
- ಮಾನಸ….ಇದು ಮನಸಿನ ಮಾತು (ಭಾಗ-೪)
- ಮಾನಸ….ಇದು ಮನಸಿನ ಮಾತು (ಭಾಗ-೫)
- ಮಾನಸ….ಇದು ಮನಸಿನ ಮಾತು (ಭಾಗ-೬)
- ಮಾನಸ….ಇದು ಮನಸಿನ ಮಾತು (ಭಾಗ-೭)
- ಮಾನಸ….ಇದು ಮನಸಿನ ಮಾತು (ಭಾಗ-೮)
- ಮಾನಸ….ಇದು ಮನಸಿನ ಮಾತು (ಭಾಗ-೯)
- ಮಾನಸ….ಇದು ಮನಸಿನ ಮಾತು (ಭಾಗ-೧೦)
- ಮಾನಸ….ಇದು ಮನಸಿನ ಮಾತು (ಭಾಗ-೧೧)
- ಮಾನಸ….ಇದು ಮನಸಿನ ಮಾತು (ಭಾಗ-೧೨)
- ಮಾನಸ….ಇದು ಮನಸಿನ ಮಾತು (ಭಾಗ-೧೩)
- ಮಾನಸ….ಇದು ಮನಸಿನ ಮಾತು (ಭಾಗ-೧೪)
- ಮಾನಸ….ಇದು ಮನಸಿನ ಮಾತು (ಭಾಗ-೧೫)
- ಮಾನಸ….ಇದು ಮನಸಿನ ಮಾತು (ಭಾಗ-೧೬)
- ಮಾನಸ….ಇದು ಮನಸಿನ ಮಾತು (ಭಾಗ-೧೭)
- ಮಾನಸ….ಇದು ಮನಸಿನ ಮಾತು (ಭಾಗ-೧೮)
- ಮಾನಸ….ಇದು ಮನಸಿನ ಮಾತು (ಭಾಗ-೧೯)
- ಮಾನಸ….ಇದು ಮನಸಿನ ಮಾತು (ಭಾಗ-೨೦)
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.
