ಗಂಡು ಮಕ್ಕಳಾಗಲಿ, ಹೆಣ್ಣು ಮಕ್ಕಳಾಗಲಿ ಹರೆಯಕ್ಕೆ ಬರುತಿದ್ದಂತೆ ಅವರಿಗೆ ಅಗತ್ಯವಾಗಿ ಲೈಂಗಿಕ ಶಿಕ್ಷಣ ಕೊಡಲೇಬೇಕು. ತಂದೆ ತಾಯಿಗೆ ಮುಜುಗರವಾದರೆ ಆಪ್ತಸಮಾಲೋಚಕರ ಬಳಿ ಹೇಳಿಸಬಹುದು. ಶಾಲೆಗಳಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ವೈದ್ಯರು, ಆಪ್ತಸಮಾಲೋಚಕರು ಮಕ್ಕಳಿಗೆ ತಿಳಿಹೇಳಿಸಬಹುದು. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣವನ್ನು ತಪ್ಪದೆ ಮುಂದೆ ಓದಿ…
ಹರೆಯದ ಹೆಣ್ಣು ಮಕ್ಕಳು ಹೊಳೆ ದಾಟಿದರೆ ಮುಟ್ಟು ನಿಲ್ಲುತ್ತದೆ.
ಅಜ್ಜಿ ಮನೆಯಲ್ಲಿ ಹೈಸ್ಕೂಲ್ ಓದುತ್ತಿದ್ದ ಅವರ ಮೊಮ್ಮಗಳನ್ನು ಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಡಾಕ್ಟರೇ ನನ್ನ ಮೊಮ್ಮಗಳು ಎರಡು ತಿಂಗಳ ಹಿಂದೆ ಹೊಳೆ ದಾಟಿ ಪಕ್ಕದ ಊರಿಗೆ ಹೋಗಿ ಬಂದಳು. ನೋಡಿ ಮತ್ತೆ ಮುಟ್ಟಾಗೇ ಇಲ್ಲ ಎಂದು ಮುಗ್ಧತೆಯಿಂದಲೋ, ಅಜ್ಞಾನದಿಂದಲೋ ಹೇಳಿದಾಗ ವೈದ್ಯರಿಗೆ, ಹೊಳೆ ದಾಟಿದರೆ ಮುಟ್ಟು ನಿಲ್ಲುತ್ತದಾ ಎಂದು ನಗುವೂ ಬಂತು ಹಾಗೆಯೇ ಈ ಅಜ್ಜಿಯ ಅಜ್ಞಾನಕ್ಕೆ ಕೋಪವೂ ಬಂತು.
ವೈದ್ಯರು ಮೊಮ್ಮಗಳನ್ನು ಕರೆದು ಪರೀಕ್ಷೆ ಮಾಡಿದರು ಆ ಹುಡುಗಿಗೆ ಎರಡು ತಿಂಗಳಿಂದ ಮುಟ್ಟು ನಿಂತಿತ್ತು. ವೈದ್ಯರು ಏನಾಯ್ತು ಎಂದು ಕೇಳಿದಾಗ ಆ ಹುಡುಗಿ ಅಳಲು ಶುರುಮಾಡಿದಳು. ನಂತರ ಅವಳು ಶಾಲೆಗೆ ಹೋಗುವ ದಾರಿಯಲ್ಲಿ ಒಬ್ಬ ಹುಡುಗನ ಪರಿಚಯವಾಗಿ ಅವನು ಅವಳ ಸ್ನೇಹ ಸಂಪಾದಿಸಿ ಅವಳನ್ನು ಅತ್ಯಾಚಾರ ಮಾಡಿದ್ದನು. ಯಾರಿಗಾದರೂ ಹೇಳಿದರೆ ಅವಳಿಗೆ ಶಾಲೆಯಲ್ಲಿ ಕೆಟ್ಟ ಹೆಸರು ತರುತ್ತೇನೆಂದು ಹೇಳಿ ಭಯಪಡಿಸಿದ್ದನು. ಭಯಪಟ್ಟುಗೊಂಡು ಈ ವಿಷಯ ಯಾರಲ್ಲಿಯೂ ಅವಳು ಹೇಳಿರಲಿಲ್ಲ. ವಿಷಯ ವಿಪರೀತಕ್ಕೆ ಹೋಗಿ ಅವಳು ಬಸಿರಾಗಿದ್ದಳು. ಆ ಹುಡುಗ ಆ ಹಳ್ಳಿ ಬಿಟ್ಟು ಪಟ್ಟಣ ಸೇರಿದ ಎಂಬ ಮಾತು ಅವಳ ಕಿವಿಗೆ ಬಿದ್ದಿತ್ತು.
ಆ ಹುಡುಗಿಯ ತಂದೆ ತಾಯಿ ಮನೆಕೆಲಸ, ಗಾರೆ ಕೆಲಸ ಮಾಡುವ ವೃತ್ತಿ ಹೊಂದಿದ್ದು ಓದು ಬರಹ ಕಲಿಯಲು ಅವಳ ಅಜ್ಜಿ ಮನೆಯಲ್ಲಿ ಬಿಟ್ಟಿದ್ದರು. ಹತ್ತನೆಯ ತರಗತಿ ಓದುತ್ತಿರುವ ಆ ಹುಡುಗಿಗೆ ಈ ಪರಿಸ್ಥಿತಿ ಬಂದಿತ್ತು. ಮೂಢನಂಬಿಕೆಯಿಂದ ಅಜ್ಜಿ ಮೊಮ್ಮಗಳನ್ನು ವೈದ್ಯರ ಬಳಿ ಕರೆತಂದಿದ್ದಳು.

ಫೋಟೋ ಕೃಪೆ : google
ಮನೆಯಲ್ಲಿ ಕೆಲವೊಮ್ಮೆ ಮಕ್ಕಳಿಗೆ ತಿಳುವಳಿಕೆ ಹೇಳಲು ಮುಜುಗರಪಟ್ಟಿಕೊಳ್ಳುತ್ತಾರೆ. ಗಂಡು ಮಕ್ಕಳಾಗಲಿ, ಹೆಣ್ಣು ಮಕ್ಕಳಾಗಲಿ ಹರೆಯಕ್ಕೆ ಬರುತಿದ್ದಂತೆ ಅವರಿಗೆ ಅಗತ್ಯವಾಗಿ ಲೈಂಗಿಕ ಶಿಕ್ಷಣ ಕೊಡಲೇಬೇಕು. ತಂದೆ ತಾಯಿಗೆ ಮುಜುಗರವಾದರೆ ಆಪ್ತಸಮಾಲೋಚಕರ ಬಳಿ ಹೇಳಿಸಬಹುದು. ಶಾಲೆಗಳಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ವೈದ್ಯರು, ಆಪ್ತಸಮಾಲೋಚಕರು ಮಕ್ಕಳಿಗೆ ತಿಳಿಹೇಳಿಸಬಹುದು.
ಹರೆಯದ ವಯಸ್ಸಿನ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದು ತುಂಬಾ ಸಂವೇದನಾಶೀಲ ಮತ್ತು ಮಹತ್ವದ ವಿಷಯ. ಇದನ್ನು ತಿಳಿಸುವಾಗ ಗಮನದಲ್ಲಿ ಇಡಬೇಕಾದ ಕೆಲವು ಪ್ರಮುಖ ಅಂಶಗಳೆಂದರೆ :
- ವಯೋಮಾನದ ಮಟ್ಟಕ್ಕೆ ಅನುಗುಣವಾದ ಮಾಹಿತಿ ನೀಡಬೇಕು. ಮಕ್ಕಳಿಗೆ ಅವರ ವಯಸ್ಸಿಗೆ ಮತ್ತು ಅರಿವಿಗೆ ತಕ್ಕಂತೆ ಸರಳ ಮತ್ತು ಸ್ಪಷ್ಟ ಮಾಹಿತಿ ನೀಡುವುದು ಮುಖ್ಯ. ತಮ್ಮ ದೇಹದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಪರಿಚಯಿಸುವುದು, ಉದಾಹರಣೆಗೆ, ಶರೀರದ ಬೆಳವಣಿಗೆ ಅದನ್ನು ಸಂಕೋಚವಿಲ್ಲದೆ ಸಹಜ ಕ್ರಿಯೆ ಎಂದು ಹೇಳಬೇಕು.
- ವೈಜ್ಞಾನಿಕ ದೃಷ್ಟಿಕೋನದಿಂದ ಎಲ್ಲ ಮಾಹಿತಿಯೂ ತಪ್ಪಿಲ್ಲದೆ ತಿಳಿಸಬೇಕು. ತಪ್ಪು ಕಲ್ಪನೆಗಳನ್ನು ನಿವಾರಿಸಲು ಮತ್ತು ಮಕ್ಕಳಿಗೆ ಸರಿಯಾದ ಅರಿವು ಮೂಡಿಸಲು ವೈದ್ಯಕೀಯ ಮತ್ತು ವೈಜ್ಞಾನಿಕ ಆಧಾರದ ಮೇಲೆ ಸ್ಪಷ್ಟನೆ ನೀಡುವುದು ಮುಖ್ಯ.
- ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಲೈಂಗಿಕತೆಯ ವಿಚಾರದಲ್ಲಿ ಮಾನವೀಯತೆ, ಗೌರವ, ಮತ್ತು ನೈತಿಕತೆ ಕೂಡ ಪ್ರಮುಖ ಅಂಶಗಳು. ಲೈಂಗಿಕ ಸಂಬಂಧಗಳಲ್ಲಿ ಹೊಣೆಗಾರಿಕೆ, ಪರಸ್ಪರ ಗೌರವ, ಮತ್ತು ಸ್ವೇಚ್ಛಾಚಾರದ ಪರಿಣಾಮಗಳನ್ನು ವಿವರಿಸಿ ಹೇಳಬೇಕು.
- ಮಕ್ಕಳಿಗೆ ತನ್ನ ದೇಹವನ್ನು ಹೇಗೆ ಕಾಪಾಡಿಕೊಳ್ಳಬೇಕು, ಹೆಣ್ಣು ಮಕ್ಕಳಾಗಲಿ, ಗಂಡು ಮಕ್ಕಳಾಗಲಿ ಬೇರೆ ಯಾರಿಂದಲೂ ಅನಾಹುತವಿಲ್ಲದೆ ಇರುವುದು ಹೇಗೆ ಎಂಬುದರ ಬಗ್ಗೆ ತಿಳಿಸಬೇಕು. ಅನಗತ್ಯ ಸ್ಪರ್ಶ, ಶೋಷಣೆಯ ಲಕ್ಷಣಗಳು, ಮತ್ತು ಅವುಗಳಿಂದ ರಕ್ಷಣೆ ಪಡೆಯಲು ಮಾಡಬಹುದಾದ ಕ್ರಮಗಳನ್ನು ತಿಳಿಸುವುದು ಅಗತ್ಯ.
- ತಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವಂತೆ, ತಂದೆ ತಾಯಿ, ಶಿಕ್ಷಕರು ಅವರಿಗೆ ಮುಕ್ತ ವಾತಾವರಣ ನಿರ್ಮಿಸಿ ಕೊಡಬೇಕು. ಮಕ್ಕಳು ಕೇಳುವ ಯಾವ ಪ್ರಶ್ನೆಯೇ ಆಗಿರಲಿ ಅದನ್ನು ತಳ್ಳಿಹಾಕದೆ, ಆ ಪ್ರಶ್ನೆಗಳಿಗೆ ಅವರ ಅರಿವಿಗೆ ತಕ್ಕಂತೆ ಸರಿಯಾದ ಉತ್ತರವನ್ನು ಕೊಡುವುದು ಮುಖ್ಯ.
- ಲೈಂಗಿಕ ಶಿಕ್ಷಣವು ಹೆಚ್ಚು ಅರ್ಥಪೂರ್ಣವಾಗಿ ನೀಡಬೇಕಾದದ್ದು ಕುಟುಂಬದಿಂದ ಮತ್ತು ಶಾಲೆಯ ಶಿಕ್ಷಕರ ವರ್ಗದಿಂದ ಮಾತ್ರ ಸಾಧ್ಯ. ಏಕೆಂದರೆ ಇದು ಜ್ಞಾನ ಮಾತ್ರವಲ್ಲದೆ, ಹೊಣೆಗಾರಿಕೆ ಎಚ್ಚರಿಕೆ ಕೊಡಬಲ್ಲ ಸಂಗತಿ.
- ಮೂಢನಂಬಿಕೆಗಳತ್ತ ಬೆಲೆ ಹಾಗು ಗಮನ ಕೊಡಬಾರದು. ನದಿ ದಾಟಿದರೆ ಮಕ್ಕಳಾಗುತ್ತದೆ ಎಂಬ ತಪ್ಪು ಮಾಹಿತಿಯನ್ನು ಮಕ್ಕಳಿಗೆ ಕೊಡುವುದು ತಪ್ಪು. ಹರೆಯದ ವಯಸಿನಲ್ಲಿ ಗಂಡು ಮಕ್ಕಳಾಗಲಿ ಹಾಗು ಹೆಣ್ಣು ಮಕ್ಕಳಾಗಲಿ ಸಾಂಗತ್ಯ ಬಯಸುತ್ತಿರುತ್ತಾರೆ. ಈ ಸಾಂಗತ್ಯ ಮಿತಿ ಮೀರಿದಾಗ ಅನಾಹುತಗಳಾಗುವುದು ಹೆಚ್ಚು.
- ಈ ಅನಾಹುತಗಳನ್ನು ತಡೆಯಲು ಮೊದಲು ಸ್ಪರ್ಷ ಮಾಡಬಾರದು. ಜೊತೆಯಲ್ಲಿ, ಪಕ್ಕಪಕ್ಕದಲ್ಲಿಯೇ ಕುಳಿತುಕೊಂಡು ಮೈ ನವಿರೇಳಿಸುವಂತಹ ಸ್ಪರ್ಷ ಇದ್ದರೆ ದೂರ ಸರಿಯಬೇಕು. ಓದುವ ಸಮಯದಲ್ಲಿ ಅಂದರೆ ತಮ್ಮ ಶಿಕ್ಷಣದ ಸಮಯದಲ್ಲಿ ಖಂಡಿತವಾಗಿಯೂ ಓದಿನಲ್ಲಿ ಆಸಕ್ತಿ ಹೊಂದಿರಬೇಕು.
- ಹರೆಯದ ವಯಸಿನಲ್ಲಿ ಹೆಣ್ಣು ಮಕ್ಕಳು ಅಕ್ಕಪಕ್ಕದ ಮನೆಗೆ ಯಾರಾದರೂ ಗಂಡು ಮಕ್ಕಳು ಒಬ್ಬರೇ ಇದ್ದಾಗ ಹೋಗಿ ಸಲಿಗೆಯಿಂದ ನಡೆದುಕೊಳ್ಳಬಾರದು. ಮನೆಯಲ್ಲಿ ಹಿರಿಯರು ಮಕ್ಕಳ ಮೇಲೆ ಗಮನ ಇಟ್ಟಿರಬೇಕು. ಅತೀ ಶಿಸ್ತಾಗಿ ಬೆಳೆಸುವ ಬದಲು ಪ್ರೀತಿಯಿಂದ ವಾಸ್ತವ, ಪರಿಸ್ಥಿತಿ, ದುಷ್ಪರಿಣಾಮಗಳು, ಅನಾಹುತಗಳನ್ನು ತಡೆಗಟ್ಟಲು ತಿಳಿಯಾಗಿ ವಿವರಿಸಬೇಕು. ಹೊರಗಡೆ ಯಾರಾದರೂ ಅನುಚಿತವಾಗಿ ನಡೆದುಕೊಂಡಾಗ ಭಯ ಪಡದೆ ಮನೆಯಲ್ಲಿ ತಿಳಿಸಬೇಕು ಎಂಬ ಭದ್ರತೆಯ ವಾತಾವರಣ ಸೃಷ್ಟಿಸಿಕೊಡಬೇಕು.
- ಗಂಡು ಮಕ್ಕಳಿಗೆ ಮನೆಯಲ್ಲಿ, ಯಾವುದೇ ಹೆಣ್ಣು ಮಕ್ಕಳಿಗೆ ಗೌರವಪೂರ್ವಕವಾಗಿ ನಡೆದುಕೊಳ್ಳಲು ತಿಳಿಸಬೇಕು. ಹೆಣ್ಣು ಮಕ್ಕಳನ್ನು ಬರೀ ಕಾಮದ ದೃಷ್ಟಿಯಿಂದ ನೋಡುವ ಬದಲು ಸ್ನೇಹಭಾವ, ಅಭಯ ನೀಡಿ ಅವರನ್ನು ಅತ್ಯಾಚಾರಗಳಿಂದ ತಪ್ಪಿಸಿ ಮಾನವೀಯತೆಯಿಂದ ನಡೆದುಕೊಳ್ಳುವ ಸಂಸ್ಕಾರ ಮನೆ ಮನೆಯಿಂದ ಶುರುವಾದರೆ ಎಷ್ಟೋ ಅತ್ಯಾಚಾರಗಳನ್ನು ತಪ್ಪಿಸಬಹುದು.
ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :
- ಚಂಪಾ ಚಿನಿವಾರ್ (ಆಪ್ತ ಸಮಾಲೋಚಕಿ) ಪರಿಚಯ
- ಮಾನಸ….ಇದು ಮನಸಿನ ಮಾತು (ಭಾಗ-೧)
- ಮಾನಸ….ಇದು ಮನಸಿನ ಮಾತು (ಭಾಗ-೨)
- ಮಾನಸ….ಇದು ಮನಸಿನ ಮಾತು (ಭಾಗ-೩)
- ಮಾನಸ….ಇದು ಮನಸಿನ ಮಾತು (ಭಾಗ-೪)
- ಮಾನಸ….ಇದು ಮನಸಿನ ಮಾತು (ಭಾಗ-೫)
- ಮಾನಸ….ಇದು ಮನಸಿನ ಮಾತು (ಭಾಗ-೬)
- ಮಾನಸ….ಇದು ಮನಸಿನ ಮಾತು (ಭಾಗ-೭)
- ಮಾನಸ….ಇದು ಮನಸಿನ ಮಾತು (ಭಾಗ-೮)
- ಮಾನಸ….ಇದು ಮನಸಿನ ಮಾತು (ಭಾಗ-೯)
- ಮಾನಸ….ಇದು ಮನಸಿನ ಮಾತು (ಭಾಗ-೧೦)
- ಮಾನಸ….ಇದು ಮನಸಿನ ಮಾತು (ಭಾಗ-೧೧)
- ಮಾನಸ….ಇದು ಮನಸಿನ ಮಾತು (ಭಾಗ-೧೨)
- ಮಾನಸ….ಇದು ಮನಸಿನ ಮಾತು (ಭಾಗ-೧೩)
- ಮಾನಸ….ಇದು ಮನಸಿನ ಮಾತು (ಭಾಗ-೧೪)
- ಮಾನಸ….ಇದು ಮನಸಿನ ಮಾತು (ಭಾಗ-೧೫)
- ಮಾನಸ….ಇದು ಮನಸಿನ ಮಾತು (ಭಾಗ-೧೬)
- ಮಾನಸ….ಇದು ಮನಸಿನ ಮಾತು (ಭಾಗ-೧೭)
- ಮಾನಸ….ಇದು ಮನಸಿನ ಮಾತು (ಭಾಗ-೧೮)
- ಮಾನಸ….ಇದು ಮನಸಿನ ಮಾತು (ಭಾಗ-೧೯)
- ಮಾನಸ….ಇದು ಮನಸಿನ ಮಾತು (ಭಾಗ-೨೦)
- ಮಾನಸ….ಇದು ಮನಸಿನ ಮಾತು (ಭಾಗ-೨೧)
- ಮಾನಸ….ಇದು ಮನಸಿನ ಮಾತು (ಭಾಗ-೨೨)
- ಮಾನಸ….ಇದು ಮನಸಿನ ಮಾತು (ಭಾಗ-೨೫)
- ಮಾನಸ….ಇದು ಮನಸಿನ ಮಾತು (ಭಾಗ-೨೬)
- ಮಾನಸ….ಇದು ಮನಸಿನ ಮಾತು (ಭಾಗ-೨೭)
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ
