ಮಹಿಳೆಯರಿಗೆ ಮೆನೋಪಾಸ್ ವರವೋ ಶಾಪವೋ?

ಮಹಿಳೆಯರಿಗೆ ಮೆನೋಪಾಸ್ ವರವೂ ಅಲ್ಲ ಶಾಪವು ಅಲ್ಲ ಸಮಸ್ಯೆಯೂ ಅಲ್ಲ ಇದೊಂದು ಪ್ರಕೃತಿ ಸಹಜ ಕ್ರಿಯೆ ಹಾಗಾಗಿ ಈ ತಾತ್ಕಾಲಿಕ ಬದಲಾವಣೆ ಸಮಯವನ್ನು ಧೈರ್ಯದಿಂದ ಎದುರಿಸಬೇಕು. ಮಹಿಳೆಯ ಆರೋಗ್ಯದ ಕುರಿತು ಗೀತಾಂಜಲಿ ಎನ್ ಎಮ್ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

  • ಪ್ರತೀ ಹೆಣ್ಣೂ ಋತುಮತಿ ಆಗುವವರೆಗೂ ಮಾತ್ರವೇ ಆರಾಮದಾಯಕ ಹಾಗೂ ನೆಮ್ಮದಿಯ ಜೀವನ ನೆಡೆಸುತ್ತಾಳೆ ಎಂದರೆ ತಪ್ಪಿಲ್ಲ ಕಾರಣ ಋತುಮತಿಯಾದ ನಂತರ ಪ್ರತೀ ಹೆಣ್ಣೆಗೂ ಸಾಕಷ್ಟು ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಸರ್ವೇಸಾಮಾನ್ಯವಾಗಿದ್ದು ಅವುಗಳು ಪ್ರಕೃತಿದತ್ತವಾಗಿ ಬಂದಿರುತ್ತವೆ. ಋತುಮತಿ ಆದಾಗಿನಿಂದ ಋತುಬಂಧದವರೆಗೂ ಒಂದು ಹೆಣ್ಣು ಅನುಭವಿಸುವ ಆ ಅನುಭವಗಳು ಅವಳಿಗೊಂದು ಸವಾಲೇ ಆಗಿರತ್ತವೆ! ಋತುಮತಿಯಾದಾಗ ಶುರುವಾಗುವ ದೈಹಿಕ ನೋವುಗಳು ಹಾರ್ಮೋನ್ಗಳಲ್ಲಿನ ವ್ಯತ್ಯಾಸದಿಂದ ಆಗುವ ತೊಂದರೆಗಳು ಋತುಬಂಧದ ವರೆಗೂ ಅವಳನ್ನು ಹಿಂಡಿ ಹಿಪ್ಪೆ ಮಾಡಿರುತ್ತವೆ.
  • ಇನ್ನು ಮೆನೋಪಾಸ್ ಅಥವಾ ಋತುಬಂದದ ಸಮಯದಲ್ಲಂತೂ ಒಂದು ಹೆಣ್ಣು ಅನುಭವಿಸುವ ಸಂಕಷ್ಟಗಳು ಬದಲಾವಣೆಗಳು ಅವಳನ್ನು ಹತಾಶಳನ್ನಾಗಿ ಮಾಡಿಬಿಡುತ್ತವೆ. ಹಾಗಾದರೆ ಈ ಮೇನೋಪಾಸ್ ಏನೆಲ್ಲಾ ಬದಲಾವಣೆಗಳನ್ನು ಸಂಕಷ್ಟಗಳನ್ನು ತಂದೊಡ್ಡುತ್ತದೆ ತಿಳಿಯೋಣ,ಈ ಮೆನೋಪಾಸ್​ ಎನ್ನುವುದು ಮಹಿಳೆಯ ಜೀವನದಲ್ಲಿ ಒಂದು ಮುಖ್ಯ ಘಟ್ಟವಾಗಿದ್ದು ಇದು ಪ್ರತಿ ಮಹಿಳೆಯರ ಆರೋಗ್ಯದ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ. ವಿಶೇಷವಾಗಿ 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಈ ಮೆನೋಪಾಸ್ ಎನ್ನುವುದು ಋತುಬಂಧದ ಅವಧಿಯಾಗಿದ್ದು, ಇದು ಮಹಿಳೆಯರ ದೇಹದಲ್ಲಿ ಗಮನಾರ್ಹ ಹಾರ್ಮೋನುಗಳ ಬದಲಾವಣೆ ಗಳನ್ನು ಉಂಟು ಮಾಡುತ್ತದೆ.ಈ ಅವಧಿಯಲ್ಲಿ ಅನೇಕ ಮಹಿಳೆಯರು ಋತುಬಂಧಕ್ಕೆಕಾರಣವಾಗುವ ಯಾವುದೇ ಪ್ರಮುಖ ದೈಹಿಕ ಬದಲಾವಣೆಗಳನ್ನು ಹೇಳಿಕೊಳ್ಳುವುದಿಲ್ಲ ಕಾರಣ ಋತುಬಂಧದ ಅನುಭವವು ಮಹಿಳೆಯಿಂದ ಮಹಿಳೆಗೆ ಬದಲಾಗುತ್ತದೆ. ಈಸ್ಟ್ರೊಜೆನ್ ಪ್ರೊಜೆಸ್ಟರಾನ್ ಹಾರ್ಮೋನ್ಗಳ ಮಟ್ಟದಲ್ಲಿ ಏರಿಳಿತಗಳು ಉಂಟಾಗುವ ಪರಿಣಾಮ ದಿಂದಾಗಿ ಅನಿಯಮಿತ ಋತುಚಕ್ರ,ಶಕೆ ಮೂಡ್​ ಸ್ವಿಂಗ್ಸ್​ ಮತ್ತು ನಿದ್ರೆಯ ಕೊರತೆ ಕೀಲುಗಳಲ್ಲಿ ನೋವು ಮತ್ತು ಆಯಾಸ ಅಧಿಕ ರಕ್ತ ಸ್ರಾವ, ಸುಸ್ತು, ಆತಂಕ, ಬೊಜ್ಜು ಅಭದ್ರತೆಯ ಭಾವನೆಗಳು ಹೀಗೆ ಹಲವು ದೈಹಿಕ ಬದಲಾವಣೆಗಳು ಉಂಟಾಗುತ್ತದೆ ಕೆಲವೊಂದಿಷ್ಟು ಮಹಿಳೆಯರು ಈ ಅವಧಿಯಲ್ಲಿ ಡಿಪ್ರೆಷನ್ನಂತಹ ಗಂಭೀರ ಪರಿಣಾಮಗಳನ್ನು ಎದುರಿಸ ಬೇಕಾಗುತ್ತದೆ.
  • ಇನ್ನು ಕೆಲವರಿಗೆ ಅಷ್ಟೊಂದು ತೀವ್ರವಾದ ಸಮಸ್ಯೆಗಳು ಇರುವುದಿಲ್ಲವಾದರು ಇಲ್ಲಿ ಇನ್ನೊಂದು ಪ್ರಮುಖವಾದ ವಿಷಯವೆಂದರೆ ಮನೆಯ ವಾತಾವರಣ, ಜವಾಬ್ದಾರಿ ಹಾಗೂ ಜೊತೆಯಲ್ಲಿದ್ದವರ ವರ್ತನೆಗಳೂ ಕೂಡ ಕೆಲವೊಂದಿಷ್ಟು ಜನರ ಮೇಲೆ ಪರಿಣಾಮ ಬೀರುತ್ತವೆ. ಕಡಿಮೆ ಸಂಖ್ಯೆಯ ಮಹಿಳೆಯರಿಗೆ ಮಾತ್ರವೇ ಈ ವಯಸ್ಸಿನಲ್ಲಿ ಜವಾಬ್ದಾರಿರಹಿತ ಹಾಗೂ ನೆಮ್ಮದಿಯ ಜೀವನ ಸಿಕ್ಕಿರುತ್ತದೆ, ಅಂತಹ ಸೌಲಭ್ಯಗಳಿರುವ ಮಹಿಳೆಯರು ಹಾಗೂ ಮಾನಸಿಕವಾಗಿ ಈ ವಯಸ್ಸಿನಲ್ಲಿ ಆಗುವ ಬದಲಾವಣೆಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿಯವರು ಬದಲಾವಣೆಗಳನ್ನು ಕೂಲ್ ಆಗಿ ಎದುರಿಸುತ್ತಾರೆ, ಆದರೆ ಬಹುತೇಕ ಮಹಿಳೆಯರ ಜೀವನ ಈ ವಯಸ್ಸಿನಲ್ಲಿ ಹೆಚ್ಚಿನ ಜವಾಬ್ದಾರಿಯುತವಾಗಿರುತ್ತದೆ ಮಕ್ಕಳ ಮದುವೆ ಮಕ್ಕಳ ಉದ್ಯೋಗದ ವಿಷಯಗಳ ಜೊತೆ ಆರ್ಥಿಕ ಸಂಕಷ್ಟಗಳು ಸರ್ವೇಸಾಮಾನ್ಯ ವಾಗಿರುತ್ತವೆ ಇದರ ಮದ್ಯೆ ತನ್ನ ದೇಹದಲ್ಲಾಗುವ ಬದಲಾವಣೆಗಳು ಮಾನಸಿಕವಾಗಿ ಆಗುವ ಕಿರಿಕಿರಿಗಳ ಜೊತೆ ಈ ಹಾರ್ಮೋನ್ಗಳ ಏರಿಳಿತದಿಂದಾಗುವ ಬದಲಾವಣೆಗಳೊಂದಿಗೆ ಬಿಳಿಯಾಗುತ್ತಿರುವ ತಲೆಕೂದಲು ಯೌವ್ವನ ಕಳೆದುಕೊಂಡು ಸುಕ್ಕಾಗುತ್ತಿರುವ ಚರ್ಮದ ಬದಲಾವಣೆ ಅವಳನ್ನು ಮತ್ತಷ್ಟು ಕುಗ್ಗಿಸುತ್ತವೆ ಇನ್ನು ಹೊರಗೆ ದುಡಿಯುವ ಮಹಿಳೆಯರಂತೂ ಡಬಲ್ ಡಬಲ್ ಟೆನ್ಷನ್ ನಿಂದ ಕುಸಿಯುತ್ತಾರೆ.
  • ಇಂತಹ ಸಂದರ್ಭದಲ್ಲಿ ಮಹಿಳೆಯರು ಯೋಗ ಧ್ಯಾನ ಮಾಡುವುದರ ಜೊತೆಗೆ ಸಮಯಕ್ಕೆ ಸರಿಯಾಗಿ ಪೌಷ್ಟಿಕಾಂಶದ ಆಹಾರವನ್ನು ಸೇವಿಸಬೇಕು ಆದಷ್ಟು ಮನಸ್ಸು ಶಾಂತ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳ ಬೇಕು ಹಾಗೂ ಬಿಡುವಿನ ವೇಳೆಯಲ್ಲಿ ಸಮಾಧಾನ ಚಿತ್ತದಿಂದ ಮನಸ್ಸಿಗಿಷ್ಟವಾಗುವ ಕೆಲಸ ಕಾರ್ಯಗಳನ್ನು ಮಾಡಬೇಕು ಹೆಚ್ಚು ವಿಶ್ರಾಂತಿ, ಪಡೆಯಬೇಕು ಇವೆಲ್ಲಕ್ಕಿಂತ ಹೆಚ್ಚಾಗಿ ಮನೆಯವರ ಪ್ರೀತಿ ಹಾಗೂ ಸಹಕಾರ ತುಂಬಾ ಅಗತ್ಯವಾಗಿರುತ್ತದೆ. ಕೆಲವರಿಗೆ ಸೊಸೆ,ಅಳಿಯ ಬರುವ ವಯಸ್ಸಾದರು ಅತ್ತೆಯ ಕಾಟ ತಪ್ಪಿರುವುದಿಲ್ಲ ಹಾಗಾಗಿ ಅತ್ತೆಯ ಸ್ಥಾನದಲ್ಲಿರುವವರೂ ಒಂದು ಹೆಣ್ಣೇ ಅಲ್ಲವೇ ಅವರೂ ಕೂಡ ಹಂತವನ್ನು ದಾಟಿಯೇ ಬಂದಿರುತ್ತಾರೆ ಹೆಣ್ಣನ್ನು ಹೆಣ್ಣೇ ಅರ್ಥ ಮಾಡಿಕೊಳ್ಳದಿದ್ದರೆ ಮತ್ಯಾರು ಅರ್ಥ ಮಾಡಿಕೊಳ್ಳಲು ಸಾದ್ಯ ಅಲ್ಲವೇ? ಹಾಗಾಗಿ ತಾಯಿ,ಅತ್ತೆಯಾದವರು ಬಹಳ ಜವಾಬ್ದಾರಿಯುತವಾಗಿ ನೆಡೆದುಕೊಳ್ಳಬೇಕು ಅದರಲ್ಲೂ ಗಂಡನಾದವನು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ತಾಳ್ಮೆ ಹಾಗೂ ಜವಾಬ್ದಾರಿಯಿಂದ ನೆಡೆದುಕೊಳ್ಳಬೇಕೆ ಹೊರತು ಇಷ್ಟು ದಿವಸ ಎಲ್ಲವನ್ನು ಸಮಯಕ್ಕೆ ಸರಿಯಾಗಿ ಶಿಸ್ತುಬದ್ದವಾಗಿ ನಿಭಾಯಿಸಿ ಮನೆಯನ್ನು ನೆಮ್ಮದಿ ಹಾಗೂ ನಿರಾತಂಕವಾಗಿ ನೆಡೆಸುತ್ತಿದ್ದ ಅವಳ ಕೆಲಸದಲ್ಲಿ ಏರುಪೇರು ಆದಾಗ ಕೂಗಾಡುವುದು, ರೇಗಾಡುವುದು ಜಗಳ ಮಾಡುವುದು ಬೈಯುವುದು ಮಾಡದೆ ಕಾಳಜಿ ಮತ್ತು ಪ್ರೀತಿಯಿಂದ ನೋಡಿಕೊಂಡರೆ ಅವಳಿಗೆ ಈ ಸಮಯದ ಕಷ್ಟಗಳು ಕಷ್ಟ ಎನಿಸುವುದೇ ಇಲ್ಲ ಅದು ಬಿಟ್ಟು ಸಣ್ಣ ಪುಟ್ಟ ವಿಷಯಗಳಿಗೆ, ಬದಲಾವಣೆಗಳಿಗೆ ಜಗಳ ಮಾಡುವುದು ಬೈಯುವುದು ಕಿರಿಕಿರಿ ಮಾಡಿದರೆ ಅವಳು ಮತ್ತಷ್ಟು ಆತಂಕಕ್ಕೆ ಹೋಗಿ ಕುಸಿಯುತ್ತಾಳೆ.
  • ಹಾರ್ಮೋನ್ಗಳಲ್ಲಿ ಆಗುವ ಬದಲಾವಣೆಗೆ ಸೂಕ್ತ ಚಿಕಿತ್ಸೆಗಳಿರುವುದರಿಂದ ಚಿಕಿತ್ಸೆ ಕೊಡಿಸಬೇಕೆ ಹೊರತು ಅವಳನ್ನು ದೋಷಿಸಿ ಜಗಳ ಮಾಡುವುದು ಸರಿಯಲ್ಲ ಇದು ಮುಟ್ಟು ನಿಲ್ಲುವ ಒಂದೆರಡು ವರ್ಷ ಅವಧಿಯ ವ್ಯತ್ಯಾಸವೇ ಹೊರತು ಶಾಶ್ವತ ಸಮಸ್ಯೆಯಲ್ಲ ಮುಟ್ಟು ನಿಂತ ನಂತರ ಎಲ್ಲವೂ ಸಹಜ ಸ್ಥಿತಿಗೆ ಬರುವುದರಿಂದ ತಾತ್ಕಾಲಿಕ ಸಮಸ್ಯೆಗೆ ಶಾಶ್ವತ ಆರೋಪಗಳು ಸರಿಯಲ್ಲ, ಇನ್ನೂ ಮಕ್ಕಳಿಗೂ ಸಹ ಇದರ ಅರಿವಿರಬೇಕು ತಾಯಂದಿರು ಸಂಕೋಚ ದಾಚೆ ವಿಷಯವನ್ನು ಮಕ್ಕಳಿಗೆ ಅರ್ಥೈಸಬೇಕು ಮಕ್ಕಳೂ ಸಹ ತನ್ನ ತಾಯಿಯ ಪರಿಸ್ಥಿತಿಯನ್ನು ಅರ್ಥಮಾಡಿ ಕೊಂಡು ಕಾಳಜಿ ವಹಿಸಬೇಕು. ಇನ್ನು ಮೆನೋಪಾಸ್ ನಂತರ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಆಗುವ ಸಿಕ್ನೆಸ್ಗಳಿಂದ ಹೊರಬಂದೆವು ಮೆನೋಪಾಸ್ ಒಂದು ವರವೆಂದು ಸಮಾಧಾನ ಪಟ್ಟುಕೊಳ್ಳಬೇಕೊ ಇಲ್ಲವೇ ಋತುಬಂಧದ ನಂತರ ಆಗುವ ಬದಲಾವಣೆಗಳು ಹಾಗೂ ಕಷ್ಟವನ್ನು ಶಾಪವೆಂದು ತಿಳಿಯಬೇಕೋ ಎನ್ನುವುದು ಅವಳಿಗೊಂದು ಪ್ರಶ್ನೆಯಾಗಿ ಕಾಡುತ್ತದೆ, ಋತುಚಕ್ರ ಸರಿಯಾಗಿ ಆಗುವಾಗ ಈಸ್ಟ್ರೊಜೆನ್ ಪ್ರೊಜೆಸ್ಟರಾನ್ ಹಾರ್ಮೋನುಗಳು ಸರಿಯಾಗಿದ್ದಾಗ ಹೃದಯಾಘಾತ ಸೇರಿ ಹಲವು ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ ಯಾವಾಗ ಈಸ್ಟ್ರೊಜೆನ್ ಪ್ರೊಜೆಸ್ಟರಾನ್ ಹಾರ್ಮೋನ್ಗಳು ಕಡಿಮೆಯಾಗುತ್ತದೆಯೋ ಅಲ್ಲಿಂದ ಹಲವು ಆರೋಗ್ಯ ಸಮಸ್ಯೆಗಳು ಭಾದಿಸುತ್ತವೆ ಎಂದು ವ್ಯೆದ್ಯರು ಹೇಳುತ್ತಾರೆ. ಹಾಗಾಗಿ ಇಂತಹ ಸಂದರ್ಭದಲ್ಲಿ ಮಹಿಳೆಯರು ಸದಾ ಉತ್ಸಾಹಿಗಳಾಗಿ, ಮಾನಸಿಕವಾಗಿ ಪ್ರಬಲ ಹಾಗೂ ಸಕ್ರಿಯರಾಗಿರಬೇಕು, ಹೆಚ್ಚು ಪುಸ್ತಕಗಳನ್ನು ಓದ ಬೇಕು ಜೊತೆಗೆ ಧ್ಯಾನ ಹಾಗೂ ಯೋಗ ತಮ್ಮ ಇಷ್ಟದ ಹವ್ಯಾಸಗಳನ್ನು ಮಾಡುವುದು ಈ ಸಂದರ್ಭಕ್ಕೆ ತಕ್ಕ ಪರಿಹಾರವೆನ್ನಬಹುದು,

  • ಗೀತಾಂಜಲಿ ಎನ್ ಎಮ್ – ಕೊಡಗು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW