ಆಹಾ …ಮದುವೆ … – ನಟರಾಜು ಮೈದನಹಳ್ಳಿ

ಜೀವನದಲ್ಲಿ ಮದುವೆ ಒಂದು ಬಹುಮುಖ್ಯ ಘಟ್ಟ. ಮದುವೆಗಳು ಸ್ವರ್ಗದಲ್ಲಾಗುವುದಿಲ್ಲ, ಛತ್ರಗಳಲ್ಲಾಗುತ್ತವೆ!! ಲೇಖಕ ನಟರಾಜು ಮೈದನಹಳ್ಳಿ ಅವರು ಬರೆದ ಚಿಂತನ ಲೇಖನ. ಮುಂದೆ ಓದಿ…

ನಾವು ಬಯಸುವ ಗುಣಗಳಿರುವ ಒಳ್ಳೆಯ ವ್ಯಕ್ತಿತ್ವದ ಸಂಗಾತಿ ಸಿಗುವುದು ಅವರವರ ಅದೃಷ್ಟ ಅವಲಂಬಿಸಿದೆ. ಆದರೆ ಒಂದು ವಿಷಯ ನಮಗೆ ಗೊತ್ತಿರಬೇಕು. ಯಾರೂ ಪರಿಪೂರ್ಣರಲ್ಲ.

ಮದುವೆಯಾದ ಮೇಲೆ ನಾವು ಅನುಭವಿಸುವ ಮೊದಲ ವರ್ಷದ ಜೀವನ ನಮ್ಮ ಬದುಕಿನಲ್ಲೇ ಅತ್ಯಂತ ಸುಮಧುರ ಕಾಲ.ಮತ್ತೆ ಅಂಥಹ ಕಾಲ ಸಿಗುವುದಿಲ್ಲ.. ನಮ್ಮ ತಾರುಣ್ಯ, ಪುಟಿಯುವ ಉತ್ಸಾಹ,ಆಕರ್ಷಣೆ, ಕಾಮನೆಗಳು, ಸ್ಪರ್ಶದ ರೋಮಾಂಚನಗಳು, ಪರಸ್ಪರ ಅಂಟಿಕೊಂಡೇ ಜೊತೆಯಲ್ಲಿ ಮಾಡುವ ಸುತ್ತಾಟ , ಸಿನಿಮಾ, ಹೋಟೆಲ್, ಪ್ರವಾಸಗಳು, ಮುಂದಿನ ನಮ್ಮ ಜೀವನ ಹೇಗೆ ರೂಪಿಸಿಕೊಳ್ಳಬೇಕು ಹಾಗೂ ಏನೇನು ಸಾಧಿಸಬೇಕು ಎಂಬ ಸುಂದರ ಕನಸುಗಳ ಬಗ್ಗೆ ದಂಪತಿಗಳ ನಡುವಿನ ಚರ್ಚೆ ಎಲ್ಲವೂ ಮಧುರ. ಮದುವೆಯಾದ ಹೊಸದರಲ್ಲಿ ಯಾರು ಏನೇ ಮಾಡಿದರೂ ಇಷ್ಟ , ಜಗಳ, ಮನಸ್ತಾಪ ಇಲ್ಲವೇ ಇಲ್ಲ. ನಾವೇ ಆದರ್ಶ ದಂಪತಿಗಳು ಅನ್ನುವ ಭ್ರಮೆ. ಇಡೀ ಪ್ರಪಂಚವೇ ಸುಂದರವಾಗಿ ಕಾಣುತ್ತದೆ. ವಾವ್ !! that is the golden period of every one. ಆ ಮಧುರ ಕ್ಷಣಗಳನ್ನು ಯಾವುದೋ ಕಾರಣದಿಂದ ಸರಿಯಾಗಿ ಅನುಭವಿಸದಿದ್ದರೆ ಅವನೇ ಪಾಪಿ.

ಫೋಟೋ ಕೃಪೆ :google

ಆದರೆ ವರುಷಗಳು ಉರುಳಿದಂತೆಲ್ಲಾ ದೈಹಿಕ ಆಕರ್ಷಣೆ ಕಡಿಮೆಯಾಗಿ , ಭ್ರಮಾ ಲೋಕದಿಂದ ವಾಸ್ತವ ಪ್ರಪಂಚಕ್ಕೆ ಬಂದು ಸಾಂಸಾರಿಕ ಜಂಜಾಟ ಪ್ರಾರಂಭವಾಗುತ್ತದೆ. ಸಣ್ಣಪುಟ್ಟ ಸಿಡಿಮಿಡಿ, ಹಂಗಿಸುವಿಕೆ, ಮುನಿಸು ಎಲ್ಲವೂ ಪ್ರಾರಂಭವಾಗುತ್ತವೆ. ಮಕ್ಕಳಾದ ಮೇಲೆ ಕತೆ ಮುಗೀತು. ಅವರ ಲಾಲನೆ ಪಾಲನೆಯಲ್ಲಿ ಫುಲ್ ಬ್ಯುಸಿ. ಇಬ್ಬರಿಗೂ ಮಕ್ಕಳ ಭವಿಷ್ಯದ ಬಗ್ಗೆಯೇ ಚಿಂತೆ.

ಮದುವೆಯಾಗಿ ಐದು ವರ್ಷವಾದರೂ ದಂಪತಿಗಳು ಅನ್ಯೋನ್ಯವಾಗೇ ಇದ್ದಾರೆ ಅಂದರೆ ಅವರು ಜೀವನ ಪೂರ್ತಿ ಅನ್ಯೋನ್ಯವಾಗೇ ಇರ್ತಾರೆ ಅಂಥ ಅರ್ಥ. ದಾಂಪತ್ಯ ಜೀವನದ ರಥ ಉರುಳಿದಂತೆಲ್ಲಾ ಒಬ್ಬರಿಗೊಬ್ಬರು ಇನ್ನಷ್ಟು ಅರ್ಥವಾಗತ್ತಾರೆ. ಪರಸ್ಪರರ ಸಾಮರ್ಥ್ಯ ,ವೀಕ್ ನೆಸ್ ಇಬ್ಬರಿಗೂ ಅರ್ಥವಾಗುತ್ತಾ ಹೋಗುತ್ತದೆ. ಪ್ರಬುದ್ದ ಪ್ರೀತಿ ಮಾಗುತ್ತಾ ಹೋಗುತ್ತದೆ. ದಂಪತಿಗಳ ನಡುವಿನ ಬಂಧ ಅನುಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.

ಫೋಟೋ ಕೃಪೆ :google

ಮಕ್ಕಳು ದೊಡ್ಡವರಾಗಿ , ಓದು ಮುಗಿಸಿ, ಕೆಲಸಕ್ಕೆ ಸೇರಿ, ಮದುವೆಯಾಗಿ – ರೆಕ್ಕೆ ಬಲಿತ ಮೇಲೆ ಪಕ್ಷಿ ಗೂಡಿನಿಂದ ಹೊರ ಹೋಗುವಂತೆ ಬೇರೆ ಊರಿಗೆ ಅಥವಾ ಬೇರೆ ಮನೆಗೆ ವಾಸ ಮಾಡಲು ಹೊರಟಾಗ ಮನೆಯಲ್ಲಿ ಒಂಟಿಯಾಗಿ ಉಳಿಯುವುದು ಇದೇ ದಂಪತಿಗಳೇ.

ಜೀವನದ ಸಂಧ್ಯಾ ಕಾಲದಲ್ಲಿ ಜೊತೆಯಾಗಿದ್ದು ಒಬ್ಬರಿಗೊಬ್ಬರು ಆಸರೆಯಾಗಿದ್ದು, ನಿನಗೆ ನಾನಿದ್ದೇನೆ ಎಂದು ಪರಸ್ಪರ ಸಾಥ್ ಕೊಡುವವರು ಇದೇ ದಂಪತಿಗಳೇ..ಆದುದರಿಂದ ಗಂಡ ಹೆಂಡತಿ ಸಂಬಂಧ ಬಹಳ ಪವಿತ್ರ.ಗಂಡ ಹೆಂಡತಿ ಪರಸ್ಪರರಲ್ಲಿ ಯಾವುದೇ ದೌರ್ಬಲ್ಯ ಇದ್ದರೂ ಸಹಿಸುತ್ತಾರೇನೋ. ಆದರೆ ಇನ್ನೊಂದು ಸಂಬಂಧಕ್ಕೆ ಕೈ ಚಾಚಿದರೆ ಸಹಿಸಿಕೊಳ್ಳಲಾರರು. ಒಬ್ಬರಿಗೊಬ್ಬರು ಮೋಸ, ವಂಚನೆ ಮಾಡಿಕೊಳ್ಳಬಾರದು. ಇಬ್ಬರ ನಡುವೆ ನಂಬಿಕೆ, ಪ್ರೀತಿ ಸದಾ ಹಸಿರಾಗಿರಬೇಕು.


  • ನಟರಾಜು ಮೈದನಹಳ್ಳಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW