ನಕ್ಷತ್ರ ಕವನ – ಕೊಟ್ರೇಶ್ ಅರಸೀಕೆರೆ

‘ಒಂದಿಷ್ಟು ಕಾರಣ ಹೇಳಿ ವಿದಾಯ ಹೇಳು’… ಕವಿ ಕೊಟ್ರೇಶ್ ತಂಬ್ರಳ್ಳಿ ಅಮರಗೋಳ ಮಠ ಅವರು ಬರೆದ ಸುಂದರ ಕವಿತೆ ಓದುಗರ ಮುಂದಿದೆ. ತಪ್ಪದೆ ಓದಿ…

ಹೇಗೆ ಇರುತ್ತಿದ್ದೆವು ನಾವು
ಜೊತೆಯಾಗಿ
ನೀನು ವಿದಾಯ ಹೇಳಿದ
ಮೇಲೆ ಹೇಳಬೇಕೆನಿಸುತ್ತಿದೆ

ಕೈ ಕೈ ಹಿಡಿದು ನಕ್ಷತ್ರಗಳ
ಎಣಿಸುತ್ತಿದ್ದೆವು
ನಾಳೆ ಅರಳಬಹುದಾದ
ಹೂ ಗಳ ಬಗ್ಗೆ ಕುತೂಹಲಗೊಳ್ಳುತ್ತಿದ್ದೆವು
ಬಿದ್ದ ಮಳೆ ಹನಿಗಳ ಮೇಲೆ
ಒಂದಿಷ್ಟು ಕವಿತೆ

ಮತ್ತೇನು ಮಾಡುತ್ತಿದ್ದೆವು ನಾವು
ಜೊತೆಯಾಗಿ ನಡೆದು
ಜಗದ ಸಂಶಯಕ್ಕೆ ಕಿವಿಗೊಡದೆ
ಆನಂದಿಸುತ್ತಿದ್ದೆವು

ಯಾವ ಹೆಸರಿತ್ತು ಇದಕ್ಕೆ
ಯಾವ ಸಂಬಂಧ ಇದು

ಹೊಳೆಯುವ ನಿನ್ನ ನಕ್ಷತ್ರದಂತಹ
ಕಣ್ಣುಗಳ ಮೇಲೆ ಆಣೆ
ಮತ್ತೆ ಹೇಗೆ ನಡೆದೇನು ಈಗ ನಿನ್ನ
ಸಹವಾಸವಿಲ್ಲದೆ

ಒಂದಿಷ್ಟು ಕಾರಣ ಹೇಳಿ ವಿದಾಯ
ಹೇಳು
ನೆಪವಾದರೂ ಬೇಕಲ್ಲವೇ ನಾಳೆ
ಕಥೆಯಾಗಲು


  • ಕೊಟ್ರೇಶ್ ಅರಸೀಕೆರೆ (ಕವಿಗಳು, ಲೇಖಕರು )

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading