೪೫ ರಿಂದ ೫೫ ವರ್ಷಗಳ ವಯಸ್ಸಿನಲ್ಲಿ ಮುಟ್ಟು ನಿಲ್ಲುತ್ತದೆ, ಈ ಸಂದರ್ಭದಲ್ಲಿ ಮಹಿಳೆಯರಲ್ಲಿ ಆಗುವ ಬದಲಾವಣೆಯ ಕುರಿತು ರಾಷ್ಟ್ರೀಯ ಆಯುರ್ವೇದ ಆಹಾರ ವಿಜ್ಞಾನ ಸಂಶೋಧನಾ ಸಂಸ್ಥೆ ಕೆಲವು ಮಾಹಿತಿಗಳನ್ನು ಓದುಗರ ಮುಂದೆ ಹಂಚಿಕೊಂಡಿದೆ, ತಪ್ಪದೆ ಮುಂದೆ ಓದಿ…
ಮುಟ್ಟು ನಿಲ್ಲುವಿಕೆಯು ಹೆಂಗಸರಲ್ಲಿ ವಯಸ್ಸಿಗೆ ತಕ್ಕಂತೆ ಉಂಟಾಗುವ ಸಹಜ ಪ್ರತಿಕ್ರಿಯೆಯಾಗಿದ್ದು ಇದು ಸಂಪೂರ್ಣವಾಗಿ ಅಂಡಾಶಯ ಕ್ರಿಯೆಯು ನಿಲ್ಲವ ಪ್ರಮುಖ ಲಕ್ಷಣವಾಗಿದ್ದು ಸಾಮಾನ್ಯವಾಗಿ ೪೫ ರಿಂದ ೫೫ ವರ್ಷಗಳ ವಯಸ್ಸಿನಲ್ಲಿ ಉಂಟಾಗುತ್ತದೆ. ಈ ಸಮಯದಲ್ಲಿ ಉಂಟಾಗುವ ಶಾರೀರಿಕ ಮಾನಸಿಕ ಬದಲಾವಣೆಗಳು ಕೆಲವು ವಿಶಿಷ್ಟ ಲಕ್ಷಣಗಳನ್ನು ಉಂಟು ಮಾಡುತ್ತವೆ. ಇದನ್ನು ರಜೋ ನಿವೃತ್ತಿ ಜನ್ಯ ವಿಕಾರಗಳೆಂದು ಕರೆಯುತ್ತಾರೆ.
ಫೋಟೋ ಕೃಪೆ : amazon
ರಜೋ ನಿವೃತ್ತಿ ಜನ್ಯ ಪರಿಣಾಮಗಳು :
- ಮುಟ್ಟಿನ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗುವುದು, ಶರೀರವೆಲ್ಲಾ ಬಿಸಿಯಾಗುವುದು.
- ಮೈಥುನ ಕ್ರಿಯೆಯಲ್ಲಿ ನೋವು ಸಹಿತವಾದ ತೊಂದರೆ, ಯೋನಿಯಲ್ಲಿ ನವೆ, ಯೋನಿಯು ಒಣಗಿ ಹೋಗುವುದು, ಮೂತ್ರ ಅಲ್ಪ ಪ್ರಮಾಣದಲ್ಲಿ ಆಗುವುದು.
- ಮನೋದ್ವೇಗ, ನಿದ್ರೆ ಬರದಿರುವಿಕೆ, ಮನೋ ಭಾವನೆಗಳು ಬೇಗ ಬೇಗ ಬದಲಾವಣೆಯಾಗುವುದು, ಖಿನ್ನತೆ, ಮುಂಗೋಪ.
- ಬೆವರು ಜಾಸ್ತಿಯಾಗುವುದು, ಎದೆ ಹೊಡೆದುಕೊಳ್ಳುವುದು, ತಲೆನೋವು
- ಮೂಳೆಗಳಲ್ಲಿ ಮತ್ತು ಸಂಧಿಗಳಲ್ಲಿ ನೋವು, ಮೂಳೆಗಳು ಶಿಥಿಲಗೊಳ್ಳುವಿಕೆ.
- ನಿದ್ರೆಯಲ್ಲಿ ವ್ಯತ್ಯಾಸ.
- ಸ್ತನಗಳಲ್ಲಿ ನೋವುಂಟಾಗುವುದು.
ಬಲ ಲೊಡ್ಡಿ (ಫೋಟೋ ಕೃಪೆ : pharmaveda)
ಆಯುರ್ವೇದ ಚಿಕಿತ್ಸಾ ನಿರ್ವಹಣಾ ಕ್ರಮಗಳು :
ಆಯುರ್ವೇದ ದೃಷ್ಟಿಯಿಂದ ಇದೊಂದು ವಿಶಿಷ್ಟವಾದ ರೋಗ/ ವಿಕಾರ ಅಲ್ಲವಾದುದರಿಂದ ತತ್ಕಾಲ ಲಕ್ಷಣಗಳ ಸಾಂದರ್ಭಿಕ ಚಿಕಿತ್ಸೆ ಮಾಡಲಾಗುತ್ತದೆ.
- ರಸಾಯನ ಔಷಧಿಗಳು ಹಾಗೂ ಜೀವನಕ್ರಮ ಸಮರ್ಥ ನಿರ್ವಹಣೆಯಿಂದ ತೊಂದರೆಗಳನ್ನು ತಡೆಗಟ್ಟಬಹುದು.
- ಸಾಂದರ್ಭಿಕ ಸಲಹೆ ಸೂಚನೆಗಳು ಹಾಗೂ ಮಾರ್ಗದರ್ಶನ.

ಕೆಲವು ಉಪಯುಕ್ತವಾದ ಆಯುರ್ವೇದೀಯ ಔಷಧೀಯ :
- ಅಶೋಕಾರಿಷ್ಟ
- ಉಶೀರಾಸವ
- ಆಮಲಕಿ ರಸಾಯನ
- ಲೋಧ್ರಾಸವ
- ಚಂದನಾದಿ ಲೋಹ
- ಮುಕ್ತಾ ಶುಕ್ತಿ
ಉಪಯುಕ್ತವಾದ ಔಷಧೀಯ ಗಿಡಗಳು/ ಸಸ್ಯಗಳು :
- ಅಶೋಕ (ಸರಕಾ ಇಂಡಿಕ)ಅಶೋಕ
- ಶತಾವರಿ (ಆಸ್ಪರಾಗಸ್ ರೇಸಿಮೋಸಸ್ ) ಹಲವು ಮಕ್ಕಳ ಬೇರು
- ಅಮಲಕಿ (ಫೈಲ್ ಆನತಸ್ ಎಂಬಳಿಕ) ನೆಲ್ಲಿಕಾಯಿ
- ಗುಡೂಚಿ (ತಿನೋಸ್ಪೋರ ಕಾಲ್ಡಿಪೋಲಿಯ) ಅಮೃತಬಳ್ಳಿ
- ಯಶಿವಧು (ಗ್ಲೇಸಿರಿಜಿಯಾ ಗ್ಲಾಬರ) ಅತಿ ಮಧುರ
- ಮಂಡೂಕಪರ್ಣಿ (ಸೆಂಟೆಲಾ ಎಸ್ಯಾಟಿಕ್) ಒಂದೆಲಗ
- ಕುಮಾರಿ (ಅಲೋವೀರ) ಲೋಳೆಸರ
- ಅಶ್ವಗಂಧ (ಮೈತಾನೀಯ ಸೋಮನಿಫೆರ) ಹಿರೇಮದ್ದಿನ ಬೇರು
- ಅಸ್ತಿಶೃಂಕಲ (ಸಿಸ್ಸಸ್ ಕ್ವಾಡ್ರ್ಯಾಂಗ್ಯೂಲಾರಿಸ್ )ಮಂಗರಬಳ್ಳಿ
ಬಲ ಲೊಡ್ಡಿ (ಫೋಟೋ ಕೃಪೆ : flickr)
ಬೇಕು/ ಪಥ್ಯ :
- ಸಮತೋಲನ ಆಹಾರ, ತಾಜಾ ಯೋಗಕಾಲದ ಹಣ್ಣುಗಳ ಉಪಯೋಗ, ತುಪ್ಪ, ಹಾಲು (ಅರಿಶಿನದಿಂದ ಕೂಡಿದ ಹಾಲು)
- ಗೋಧಿ, ಹಳೆ ಅಕ್ಕಿ, ಹೆಸರು ಕಾಳು, ಸೋಯಾ
- ಔಷಧೀಯ ಎಣ್ಣೆಯಿಂದ ಮೈ ಒತ್ತುವುದು / ಅಂಗಮರ್ದನ / ಯೋಗಾಭ್ಯಾಸ ಮತ್ತು ಧ್ಯಾನ, ಉಸಿರಾಟದ ವ್ಯಾಯಾಮ, ವೈಯಕ್ತಿಕ ವಿಷಯಗಳಲ್ಲಿ ಭಾಗವಹಿಸುವುದು ಮತ್ತು ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸುವುದು.
ಬೇಡ/ಅಪಥ್ಯ :
- ಭಾರವಾದ ಮತ್ತು ಅಸಮಂಜಸ ನಿಶೇದಾರ್ಧಕ ತೀಕ್ಷ್ಣ ಆಹಾರ, ಉಪ್ಪು ಮತ್ತು ಹುಳಿಯಾದ ಆಹಾರ ಸಾಸಿವೆ ಎಣ್ಣೆ ಇತ್ಯಾದಿ.
- ಮಧ್ಯಪಾನ, ಧೂಮಪಾನ, ಅತಿಯಾದ ಟೀ, ಕಾಫಿ, ಆಗಾಗ್ಗೆ ತಣ್ಣೀರಿನ ಸ್ನಾನ,
- ವಿಪರೀತವಾದ (ಕೆಲಸ ಮಾಡುವುದು ) ಪ್ರಯಾಸ
- ಮಾಹಿತಿ ಸಂಗ್ರಹ : ರಾಷ್ಟ್ರೀಯ ಆಯುರ್ವೇದ ಆಹಾರ ವಿಜ್ಞಾನ ಸಂಶೋಧನಾ ಸಂಸ್ಥೆ