ಹಿರಿಯ ರಂಗಕರ್ಮಿ ಕಿರಣ್ ಭಟ್ ಅವರು ಬರೆದ ಈ ಲೇಖನ ಎಲ್ಲರ ನಿದ್ದೆಗೆಡಿಸುವುದಷ್ಟೇಲ್ಲ ಮಕ್ಕಳಿರುವ ಮನೆಗೆ ಜಾಗೃತಿ ಮೂಡಿಸುತ್ತದೆ…ಹಾಗಾಗಿ ತಪ್ಪದೆ ಓದಿ, ಜಾಗೃತರಾಗಿರಿ…
ಮೊನ್ನೆ ಒಂದು ಅನಾಹುತವಾಯ್ತು. ನನಗೆ ಗೊತ್ತಿರುವವರ ಎರಡು ವರ್ಷದ ಪುಟ್ಟ ಮಗುವೊಂದು mosquito liquid ನ ಬಾಟಲಿನ ಜೊತೆ ಆಟವಾಡ್ತಿತ್ತು. ಆಡ್ತಾ ಆಡ್ತಾ ಆ ಬಾಟಲಿನ ಮುಚ್ಚಳ ಕಿತ್ತು ಬಂದ್ಬಿಡ್ತು. ಏನೂ ಅರಿಯದ ಆ ಮಗು ಬಾಟಲಿನಲ್ಲಿನ ದ್ರವವನ್ನು ಕುಡಿಯಲು ಯತ್ನಿಸ್ತಿದ್ದಂತೆ ಓಡಿ ಬಂದ ಹಿರಿಯರು ಬಾಟಲಿಯನ್ನ ಕಿತ್ತುಕೊಳ್ಳೋದ್ರೊಳಗೇ ಬಹುಷ: ಒಂದೆರಡು ಹನಿ ಮಗುವಿನ ಬಾಯೊಳಕ್ಕೆ ಹೋಗಿಬಿಟ್ಟಿದೆ. ಕೂಡಲೇ ಚಿಕಿತ್ಸೆ ಕೊಡಿಸಿದರೂ ಮಗುವನ್ನು ಉಳಿಸಿಕೊಳ್ಳಲಾಗಲಿಲ್ಲ.
ಈ ಕೆಮಿಕಲ್ ಗೆ ಆವಿಯಾಗುವ ಗುಣ ಇರೋದ್ರಿಂದ ದೇಹವನ್ನೆಲ್ಲ ತ್ವರಿತವಾಗಿ ವ್ಯಾಪಿಸಿಬಿಡುತ್ತದಂತೆ. ಹಾಗಾಗಿ ಇದು most dangerous. ಇಂಥವನ್ನು ಮಕ್ಕಳಿಂದ ದೂರ ಇಡಿ ಎಂದು ಬರೆದಿರುತ್ತಾರಾದರೂ ನಾವು ಗಮನಿಸಿರುವದಿಲ್ಲ.
ಹಬ್ಬದ ದಿನಗಳು ಶುರುವಾಗ್ತಿವೆ ಮಕ್ಕಳ ಓಡಾಟವೂ ಹೆಚ್ಚು. ಇಂಥವುಗಳ ಬಳಕೆಯೂ ಹೆಚ್ಚು. ಉಪಯೋಗಿಸುವಾಗ ಎಚ್ಚರಿಕೆಯಿಂದಿರೋಣ. ಮಕ್ಕಳ ಕೈಗೆ ಇಂಥವು ಸಿಗದಂತೆ ತುಂಬ ಜಾಗ್ರತೆ ವಹಿಸೋಣ.
- ಕಿರಣ ಭಟ್ (ರಂಗಕರ್ಮಿ, ರಂಗ ಸಂಘಟಕರು, ಕಲಾವಿದರು, ನಿರ್ದೇಶಕರು, ಬರಹಗಾರರು) ಹೊನ್ನಾವರ.