‘ಮೌನಿಯಾಗಿರುವೆ’ ಕವನ – ಜಿ.ಎಸ್.ಶರಣು

ಜಾತಿ ಸಂಕೋಲೆ ಬಿಡಿಸಿಕೊಂಡು, ಸೌಹಾರ್ದತೆ ಸಹಬಾಳ್ವೆಗಾಗಿ, ಮೌನಿಯಾಗಿರುವೆ..ಸುಂದರ ಸಾಲುಗಳು ಯುವ ಕವಿ ಜಿ.ಎಸ್.ಶರಣು ಅವರ ಲೇಖನಿಯಲ್ಲಿ ತಪ್ಪದೆ ಮುಂದೆ ಓದಿ….

ಮೌನಿಯಾಗಿರುವೆ
ಮಾತು ಬಂದರು
ಮಾತನಾಡದ
ಮೌನಿಯಾಗಿರುವೆ

ಜಗತ್ತನ್ನು ಪ್ರೀತಿಸುವ ಭರದಲ್ಲಿ
ದ್ವೇಷವನ್ನ ಸುಡುತ್ತ
ಸ್ನೇಹವನ್ನ ಬಯಸುತ್ತ
ಕ್ರಾಂತಿ ಬಯಸದ
ಶಾಂತಿ ಮನಸ್ಸಿನ
ಮೌನಿಯಾಗಿರುವೆ

ಕೋಮುವಾದಿಗಳಿಂದ ದೂರವಾಗಿ
ಮತವನ್ನು ಕಿತ್ತೆಸೆದು
ಜಾತಿ ಸಂಕೋಲೆ ಬಿಡಿಸಿಕೊಂಡು
ಸೌಹಾರ್ದತೆ ಸಹಬಾಳ್ವೆಗಾಗಿ
ಮೌನಿಯಾಗಿರುವೆ

ಗಡಿ-ಗಡಿಗಳ ನಡುವೆ
ಜಾತಿ-ಜಾತಿಗಳ ಮಧ್ಯ
ಸಂಘರ್ಷಕ್ಕಿಂತ ಪ್ರೀತಿ ದೊಡ್ಡದೆಂದು
ಸಾರಲು ಹೊರಟ
ಮೌನಿಯಾಗಿರುವೆ


  • ಜಿ.ಎಸ್.ಶರಣು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading