‘ಮುಪ್ಪು ಅಪ್ಪು’ಕವನ – ಚನ್ನಕೇಶವ ಜಿ ಲಾಳನಕಟ್ಟೆ



‘ಮಾಗಿದ ಕಾಯಕೆ ಬಾಗಿದ ವಯಸಿಗೆ… ಊಟವ ನೀಡದೆ ಕಾಡ್ಬೇಡ…’ ಮುಪ್ಪು ತಪ್ಪಿದ್ದಲ್ಲ, ತಪ್ಪು ಆಗದಂತೆ ನೋಡಿಕೊಳ್ಳಿ, ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ತಮ್ಮ ಕವನದಲ್ಲಿ ಸುಂದರವಾಗಿ ವರ್ಣಿಸಿದ್ದಾರೆ, ಮುಂದೆ ಓದಿ…

ಮುಪ್ಪಿನ ಜೀವನ ತುಪ್ಪದ ಭೋಜನ
ತಪ್ಪಿಯು ನೋವನು ಕೊಡಬ್ಯಾಡ
ಅಪ್ಪಿದ ಮುಪ್ಪಿಗೆ ಒಪ್ಪಿದ ಅನುಭವ
ಬುತ್ತಿಯ ಊಟವ ಜರಿಬ್ಯಾಡ

ಚರ್ಮವು ಸುಕ್ಕಿದೆ ಧರ್ಮವು ಬೆರೆತಿದೆ
ಚುಚ್ಚುವ ಮಾತನು ಆಡ್ಬ್ಯಾಡ
ಸ್ವಾರ್ಥವ ತೊರೆಯುತ ಸಾರ್ಥಕ ಬದುಕಿನ
ತಿರುಳನು ಪಡೆವುದ ಮರಿಬ್ಯಾಡ

ನೆರೆದಿಹ ಕೂದಲು ತೆರದಿಹ ಹೊತ್ತಗೆ
ಹಮ್ಮಿನ ಪಾಠವ ಹೇಳ್ಬೇಡ
ಮೊರೆಯುತ ಬಂದರೆ ತೊರೆಯುತ ದೂಡುತ
ಹೆದರಿಸಿ ಗದರಿಸಿ ನೋಡ್ಬೇಡ

ಮಾಗಿದ ಕಾಯಕೆ ಬಾಗಿದ ವಯಸಿಗೆ
ಊಟವ ನೀಡದೆ ಕಾಡ್ಬೇಡ
ಇಂದಿನ ಯುವಕರೆ ಮುಂದಿನ ಮುದುಕರು
ಕಾಲವು ಸರಿವುದು ತಡಿಬ್ಯಾಡ.


  • ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading