ಕ.ವಿ.ನಿ. ನಿ.ಈ ಜುಲೈಗೆ 53 ವರ್ಷ ತುಂಬಿ, 54ನೇ ವರ್ಷಕ್ಕೆ ಕಾಲಿಟ್ಟಿದ್ದು, ಕ.ವಿ.ನಿ.ನಿ ಸಂಸ್ಥೆ ತಮ್ಮ ತಮ್ಮ ಕಚೇರಿಯಲ್ಲಿ ಸಂಸ್ಥೆಯ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಸಂಭ್ರಮ ಪಟ್ಟಿತು, ಮೈಸೂರು ಶಾಖೆಯ ಕ.ವಿ.ನಿ.ನಿ ಯ ಪುಟ್ಟ ವರದಿಯನ್ನು ನಿವೃತ್ತ ಕ.ವಿ.ನಿ. ನಿ. ಉದ್ಯೋಗಿ ದೇವರಾಜ ಚಾರ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕ.ವಿ. ನಿ.ನಿ.ಅಂದರೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಅಂತ. ಕರ್ನಾಟಕ (ಆಗಿನ ಮೈಸೂರು) ಸರ್ಕಾರ 1970 ರ ಜುಲೈನಲ್ಲಿ ಸಂಸ್ಥೆಯನ್ನು ಹುಟ್ಟುಹಾಕಿತು. ಈ ಸಂಸ್ಥೆಯ ಕಾರ್ಯಕ್ಷೇತ್ರ ಕರ್ನಾಟಕದಲ್ಲಿನ ಸಂಪನ್ಮೂಲ ಅಂದರೆ ಜಲ, ವಾಯು, ಸೂರ್ಯನ ಕಿರಣ ಮತ್ತು ನವೀಕರಿಸಬಹುದಾದ ಶಕ್ತಿಯನ್ನು ಉಪಯೋಗಿಸಿಕೊಂಡು ವಿದ್ಯುತ್ ಉತ್ಪಾದನೆ ಮಾಡುವುದು.
ಕರ್ನಾಟಕದ ಉದ್ದಗಲಕ್ಕೂ ಅನ್ವೇಷಿಸಿ, ಕ್ರೂಢೀಕರಿಸಿ, ಸಾಧ್ಯತ ವರದಿಯನ್ನು ತಯಾರಿಸಿ, ಸರ್ಕಾರದ ಸಮ್ಮತಿ ತೆಗೆದುಕೊಂಡು, ಯೋಜನೆಗಳನ್ನು ನಿರ್ಮಿಸಿ ವಿದ್ಯುತ್ ತಯಾರಿಸುವುದು. ತಯಾರಾದ ವಿದ್ಯುತ್ತನ್ನು ಕೆಪಿಟಿಸಿಎಲ್ / ಎಸ್ಕಾಂ ಗಳಿಗೆ ದರ ನಿಗದಿಪಡಿಸಿ ಮಾರಾಟ ಮಾಡುವುದು. ಆದರೆ ಎಸ್ಕಾಂಗಳು ಕಾಲಕಾಲಕ್ಕೆ ಹಣ ಪಾವತಿಸದೆ, ನಿಗ ಮವನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಇರಲಿ. ಇದು ಬೇರೆ ವಿಚಾರ.
ಕ.ವಿ.ನಿ. ನಿ.ಈ ಜುಲೈಗೆ 53 ವರ್ಷ ತುಂಬಿ, 54ನೇ ವರ್ಷಕ್ಕೆ ಕಾಲಿಟ್ಟಿದೆ. ಕ.ವಿ.ನಿ.ನಿ ಸಂಸ್ಥೆ ತಮ್ಮ ತಮ್ಮ ಕಚೇರಿಯಲ್ಲಿ ಸಂಸ್ಥೆಯ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಸಂಭ್ರಮಿಸುವುದು ಸರಿ. ಉದ್ಯೋಗಿಗಳು ನಿವೃತ್ತರಾದರೇನಂತೆ ಸಂಸ್ಥೆಯ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಲ್ಲವೇ? ಸಂಸ್ಥೆ ಅವರಿಗೆ ಪಿಂಚಣಿ ಕೊಟ್ಟು ಸಾಕಿಸಲುಹಿತ್ತಿರುವುದು ಸಂತೋಷದ ವಿಚಾರ.ಈ ಅನ್ನದಾತ ಸಂಸ್ಥೆಯ ಹುಟ್ಟುಹಬ್ಬವನ್ನು ನಿವೃತ್ತರು ಸಹ ಆಚರಿಸುವುದು ಸಂತೋಷದ ವಿಚಾರ ವಲ್ಲವೇ?.
ಕ.ವಿ.ನಿ.ನಿ.ಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು ಮೈಸೂರು, ಬೆಂಗಳೂರು, ಧಾರವಾಡ ಮುಂತಾದ ಕಡೆ ನೆಲೆಸಿರುತ್ತಾರೆ.
ಮೈಸೂರಿನಲ್ಲಿ ಮತ್ತು ಮೈಸೂರಿನ ಸುತ್ತಮುತ್ತ ವಾಸವಾಗಿರುವವರು ಒಂದು ಸಂಘ ಮಾಡಿ ಕೊಂಡಿರುವುದು ಸರಿ ಅಷ್ಟೇ. ಅದೇ ಕ.ವಿ.ನಿ. ನಿ.ನಿವೃತ್ತ ಕ್ಷೇಮಾಭಿವೃದ್ಧಿ ನೌಕರರ ಸಂಘ. ಮೈಸೂರು. ನಮ್ಮ ಮೈಸೂರಿನ ಸಂಘವು ಸಹ 30ನೇ ಜುಲೈ 2023 ರಂದು ಸಂಭ್ರಮದಿಂದ ಆಚರಿಸಿಕೊಂಡಿತು. ಸಂಘದ ಕಾರ್ಯಕರ್ತರು ಯಾವುದೇ ಪಲಾಪೇಕ್ಷೆ ಇಲ್ಲದೆ ಕಾರ್ಯಕ್ರಮವನ್ನು ಅನುಕೂಲಕರವಾದ ಸಭಾಂಗಣದಲ್ಲಿ ಆಯೋಜಿಸಿ,ಸದಸ್ಯರನ್ನೆಲ್ಲ ಆಹ್ವಾನಿಸಿತ್ತು.
ಈ ಸಂಭ್ರಮದಲ್ಲಿ 75 ವರ್ಷ ತುಂಬಿದ ಸದಸ್ಯರನ್ನು ವಿಶೇಷವಾಗಿ ಆಹ್ವಾನಿಸಿ ಅವರನ್ನು ಸನ್ಮಾನಿಸಲು ಆಯೋಜಿಸಿತ್ತು. ಸರಿಯಾಗಿ 11:00 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಯಿತು. ವೇದಿಕೆಗೆ ನಿವೃತ್ತ ಹಿರಿಯ ಅಧಿಕಾರಿಗಳನ್ನು ಆಹ್ವಾನಿಸಿ, ಅವರಿಂದ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಾರ್ಥನೆಯ ನಂತರ ನಮ್ಮನ್ನಗಲಿದ ಸದಸ್ಯರಿಗೆ ಶಾಂತಿ ಕೋರಲಾಯಿತು.
ತದನಂತರ 75 ವರ್ಷ ತುಂಬಿದ ಹಿರಿಯ ಸದಸ್ಯರನ್ನು ಹಾರ, ಶಾಲು, ಸ್ಮರಣಿಕೆ ಕೊಟ್ಟು ಗೌರವಿಸಲಾಯಿತು. ಅವರ ಮುಖದಲ್ಲಿ ಮಂದಹಾಸ ಮೂಡುವಂತೆ ಸಂಘವು ಮಾಡಿತು. ವೇದಿಕೆಯಲ್ಲಿದ್ದ ಹಿರಿಯರು ಸಂಸ್ಥೆಯ ಆಗೂ ಹೋಗು, ಸನ್ಮಾನಿತ ಸದಸ್ಯರ ಕಾರ್ಯ ವೈಖರಿಯನ್ನು ವಿವರಿಸಿ, ಸದಸ್ಯರಿಗೆ ಶುಭ ಹಾರೈಸಿದರು.
ಸದಸ್ಯರೂ ಸಹ ಕೆಲವು ಸೂಚನೆ ಸಲಹೆ ಕೊಟ್ಟರು. ಸಲಹೆ ಯನ್ನು ಉಲ್ಲೇಖಿಸುವುದಾದರೆ, ಒಂದನೆಯದು :ಆರು ತಿಂಗಳಿಗೆ ಒಮ್ಮೆ ಎಲ್ಲಾ ಸದಸ್ಯರು ಒಂದು ಕಡೆ ಸೇರಿ ವಿಚಾರ ವಿನಿಮಯ ಮಾಡಿಕೊಂಡರೆ ಉತ್ತಮ ಎಂದರು. ಎರಡನೆಯದು :ಎಲ್ಲಾ ಸೇರಿ ವಿಹಾರ ಹೋಗುವುದು.
ಮೂರನೆಯದು: ಪ್ರತಿ ಸದಸ್ಯರಿಂದ ವಾರ್ಷಿಕ ಸದಸ್ಯತ್ವ ಶುಲ್ಕವನ್ನು ತೆಗೆದುಕೊಳ್ಳುವುದು.
ನಾಲ್ಕನೆಯದು: ಸಾಧ್ಯವಾದರೆ ಸದಸ್ಯರ ಕೈಯಲ್ಲಿ ಒಂದು ಸಿಹಿ ಪೊಟ್ಟಣ ಇಡುವುದು ಇತ್ಯಾದಿ…..
ಇದಕ್ಕೆ ಕಾರ್ಯಕಾರಿ ಸಮಿತಿಯ ಸದಸ್ಯರ ಉತ್ತರ ಹೀಗಿತ್ತು: ನಾವು ಯಾವುದೇ ರೀತಿಯಲ್ಲಿ ಇಂತಿಷ್ಟೇ ಹಣ ಕೊಡಬೇಕೆಂದು ಸದಸ್ಯರನ್ನು ಕೇಳುವುದಿಲ್ಲ. ಅವರವರ ಇಚ್ಛೆಯಂತೆ ದೇಣಿಗೆ ರೂಪದಲ್ಲಿ ಕೊಡಬಹುದು ಅಂದರು. ಇದನ್ನು ಮೆಚ್ಚ ತಕ್ಕದ್ದೇ. ಎಲ್ಲಾ ನಿರ್ಧಾರಗಳನ್ನು ಕಾರ್ಯಕಾರಿ ಸಮಿತಿಗೆ ಬಿಡುವುದು ಸರಿಯಾದ ಮಾರ್ಗ.
ಒಂದು ಮೂವತ್ತಕ್ಕೆ ಕಾರ್ಯಕ್ರಮ ಮುಗಿಯಿತು.ಎಲ್ಲರೂ ಊಟಕ್ಕೆ ಹೊರಟರು. ಬಾಳೆ ಎಲೆಯ ಊಟ. ರಾಜ ಊಟ ಅಂತ ಹೇಳಬಹುದು. ಕಾರ್ಯಕ್ರಮ ಅನಿಸಲೇ ಇಲ್ಲ. ಯಾವುದೋ ಒಂದು ಶುಭ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದೇವೆ ಅಂತ. ಅನ್ನಿಸುತ್ತಿತ್ತು.
- ದೇವರಾಜ ಚಾರ್- ಮೈಸೂರು