‘ಯೋಧನ ಪತ್ನಿ’ ಕವನ -ಹೇಮಂತ್ ಪಾರೇರ

‘ಅವನು ಬರುವುದಿಲ್ಲ ಗೊತ್ತು ಅವಳಿಗೆ, ಎದೆ ರೋಮದ ಮೇಲೆ ಕೈ ಇಟ್ಟು ನೇವರಿದ ನೆನಪು’ …ಕವಿ ಹೇಮಂತ್ ಪಾರೇರ ಅವರು ಯೋಧನ ಪತ್ನಿಯ ಭಾವನೆಯನ್ನು ಕುರಿತು ಬರೆದ ಭಾವನಾತ್ಮಕವಾದ ಬರಹವನ್ನು ತಪ್ಪದೆ ಮುಂದೆ ಓದಿ…

ದಾರಿಯ ಅಂಚಿಗೆ ನೋಡುವ ಅವಳು
ದಿನವೂ ಕಣ್ಣೀರು ಹಾಕುವಳು
ವೀರ ಯೋಧನವನು
ಗುಂಡಿಗೆ ಎದೆಯೊಡ್ಡಿ ತಿಂಗಳು
ಕಳೆದು ಸಮಾಜ ಮರೆತಿದೆ
ಹುತಾತ್ಮ ಅವನು ಬರುವುದಿಲ್ಲ
ನಡುಮನೆಯ ಗೋಡೆ ಅವನದು
ಕುಂಕುಮ ಬಳಿದು ಪಟ ನೇತಾಡುತಿದೆ
ಎತ್ತಿಟ್ಟ ಪದಕಗಳು,ಕೊಟ್ಟ ಹಣದ ಕಂತೆಗಳು
ಗಂಡನಾಗುವುದಿಲ್ಲ,ವಿಧವೆ ಅವಳು

ಅವಳ ಹಣೆ ಕುಂಕುಮ ಕಾಣುತ್ತಿಲ್ಲ
ಬರಿ ಹಣೆಗೆ ಅರಿಶಿಣವಿಲ್ಲದೆ ಶೃಂಗಾರವಿಲ್ಲ
ವಿಲನದ ವಿರಹ ಗೀತೆಯ
ಕಾಯುವ ಕಾವಲುಗಾರಳು ಅವಳು
ಸುರಿವ ಮಳೆಗೆ ಕಣ್ಣೀರು ಬೆರೆಸಿ ಸಹಿ ಹಾಕಿಸುವ
ನೋವಿನ ಸಾಕ್ಷಿದಾರಳು ಅವಳು
ಬೀಸುವ ಗಾಳಿಗೆ ಬತ್ತಿದ ಅಸರೆ,ಕೆದರಿದ ಕೂದಲು
ಅವನ ದಾರಿ ಕಾದ ಅವಳು
ಅವನ ಬಸಿರಿನ ವಾರಸುದಾರಳು

ಅವನು ಬರುವುದಿಲ್ಲ ಗೊತ್ತು ಅವಳಿಗೆ
ಎದೆ ರೋಮದ ಮೇಲೆ ಕೈ ಇಟ್ಟು ನೇವರಿದ ನೆನಪು
ಅಲ್ಲೆಲ್ಲಾ ತೂತವಾದ ಗುಂಡಿನ ಗುರುತುಗಳು
ರೋಮ ಕೆಂಪಾದ ರಕ್ತದ ಕಲೆಗಳು
ನೆನಪು ಸಾಯುತಿಲ್ಲ
ಅವಳು ಒಪ್ಪಿಕೊಳ್ಳುತ್ತಿಲ್ಲ
ಕಾಯುತ್ತಿದ್ದಾಳೆ
ಗೊತ್ತು
ಅವನು ಬರುವುದಿಲ್ಲ


  •  ಹೇಮಂತ್ ಪಾರೇರ, ಯಡವನಾಡು – ಕೊಡಗು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading