ಸ್ವಾತಿಯನ್ನು ನಂಬಿಸಿ ಮೋಸ ಮಾಡಿ ಮದುವೆ ಆದ ಕಿರಣ ಅವತ್ತು ನನಗೆ ಕರೆ ಮಾಡಿದ, ಸ್ವಾತಿ ಕಡೆಯ ವಕೀಲೆ ನಾನು, ಅವನು ನನಗೆ ಯಾಕೆ ಕರೆ ಮಾಡಿದ ಎಂದು ಯೋಚಿಸುತ್ತಾ ಫೋನ್ ಎತ್ತಿ ಹಾಲೋ ಹೇಳಿದೆ, ಮುಂದೇನಾಯಿತು ತಪ್ಪದೆ ಓದಿ ವಕೀಲೆ ಹೆಚ್.ಆರ್.ಪವಿತ್ರ ಧರ್ಮಪ್ಪ ಅವರ ‘ಕಪ್ಪು ಕೋಟಿನ ಜೇಬಿನಲ್ಲಿ ಅವಿತ ಕತೆಗಳು’ ಅಂಕಣ….
ಸುಶೀಲರು ನನಗೆ ಕಾಲ್ ಮಾಡಿ ನಾನು ಕಛೇರಿಯಲ್ಲಿರುವ ಸಮಯ ನೋಡಿ ನಡೆದಷ್ಟೂ ವಿಚಾರವನ್ನು, ವಿಚ್ಛೇದನ ಕೋರಿ ಹಾಕಿದ ಅರ್ಜಿ ವಜಾಗೊಂಡ ಬಗ್ಗೆ ತಿಳಿಸಿದರು. ಈಗೇನು ಮಾಡುವುದು ಅವಳಿಗೆ ವಿಚ್ಛೇದನ ಸಿಕ್ಕಿದಿದ್ದರೆ ಒಳ್ಳೆಯ ಸಂಬಂಧ ನೋಡಿ ಮದುವೆ ಮಾಡಲು ಅನುಕೂಲವಾಗುತ್ತದೆ, ಏನಾದರೂ ಮಾಡಿ ಅಂದ್ರು.. ಸುಶೀಲ ನನ್ನ ಬಳಿ ಬರುವ ಮೊದಲು ಅವರ ಭಾವನ ಮಗ ಕರೆಮಾಡಿ ನನ್ನೊಂದಿಗೆ ಮಾತನಾಡಿದ್ರು. ಹಾಗಾಗಿ ಸುಶೀಲ ಬಳಿ ಕೇಸ್ ತೆಗೆದುಕೊಳ್ಳಲು ಒಪ್ಪಿಕೊಂಡೆ.
ವಜಾಗೊಂಡ ಕೇಸ್ಗೆ ಸಂಬಂಧಪಟ್ಟ ದಾಖಲೆಗಳನ್ನು ತೆಗೆದು ನೋಡಿದಾಗ ಮದುವೆ ಆಗಿ ಆರು ತಿಂಗಳೊಳಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪರಿಣಾಮ ಕೇಸ್ ವಜಾಗೊಂಡಿತ್ತು, ಕೇಸ್ಗೆ ಸಂಬಂಧಿಸಿದ ಕೆಲವೊಂದು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಯೂ ಇರಲಿಲ್ಲ.. ಅಗತ್ಯ ದಾಖಲೆಗಳೊಂದಿಗೆ ನ್ಯಾಯಾಲಯ ಒಪ್ಪುವಂತಹ ಬೇರೆಯದೆ ಕಾರಣಗಳನ್ನು ಕೊಟ್ಟು ವಸ್ತು ವಿಷಯವನ್ನು ಸರಿಯಾಗಿ ತಿಳಿಸುವಂತೆ ವಾದಪತ್ರವನ್ನು ಅದೇ ನ್ಯಾಯಾಲಯದಲ್ಲಿ ಅಗತ್ಯವಿರುವ ದಾಖಲೆಗಳೊಂದಿಗೆ ವಿಚ್ಛೇದನಕ್ಕೆ ಹೊಸದಾಗಿ ಅರ್ಜಿಸಲ್ಲಿಸಿದೆ.
ಕೋರ್ಟ್ನಿಂದ ನೋಟಿಸ್ ಜಾರಿ ಅದ ದಿನಕ್ಕೆ ಕಿರಣ್ ತಪ್ಪದೆ ನ್ಯಾಯಾಲಯಕ್ಕೆ ಬಂದಿದ್ದ. ಎಲ್ಲವನ್ನೂ ಮರೆಯಲು ಪ್ರಯತ್ನಿಸುತ್ತಿದ್ದ ಸ್ವಾತಿ ಅದಗಾಲೇ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದ ಕಾರಣ ಆಕೆಯ ಹಾಜರಿ ಅಂದು ನ್ಯಾಯಾಲಯಕ್ಕೆ ಅಷ್ಟು ಮುಖ್ಯವಾಗದ ಕಾರಣ ಬರುವುದು ಬೇಡವೆಂದು ತಿಳಿಸಿದ್ದರಿಂದ ಆಕೆ ಬಂದಿರಲಿಲ್ಲ. ಕೇಸನ್ನು ಕರೆದಾಗ ನ್ಯಾಯಾಲಯದ ಒಳಕ್ಕೆ ಬಂದ ಕಿರಣ್ ನ್ಯಾಯಾಧೀಶರ ಮುಂದೆ ನೇರವಾಗಿ ಮಾತನಾಡೋಕೆ ಶುರುಮಾಡಿದ. ಅವನ ಮಾತನ್ನು ಆಲಿಸಿದ ನ್ಯಾಯಾಧೀಶರು ನೀವು ಯಾರಾದರೂ ವಕೀಲರೊಂದಿಗೆ ನಿಮ್ಮ ವಾದ ಮಂಡಿಸಿ ಇಲ್ಲ ನಿಮಗೆ ವಕೀಲರನ್ನು ನೇಮಿಸಿಕೊಳ್ಳಲು ಕಷ್ಟವಾದರೆ ನಾಯ್ಯಲಯವೇ ವಕೀಲರನ್ನು ನೀಡುತ್ತದೆ ಅಂದಾಗ ಮೊದಲೇ ಆರಳು ಹುರಿದಂತೆ ಮಾತಾಡುವ ಮೋಡಿಗಾರ ಕಿರಣ್ ಇಲ್ಲ ಸರ್ ನಾನೇ ನನ್ನ ಕೇಸನ್ನು ನಡೆಸುವೆ ಎಂದು ..ನೋಡಿ ಇದು ನಾನು ಅವಳು ಮದುವೆ ಆಗಿದ್ದಕೆ ಸಾಕ್ಷಿ, ಸಾಕಷ್ಟು ಫೋಟೋ, ವಿಡಿಯೋಗಳು ಇದೆ ಅವಳು ನನಗೆ ಬೇಕು ವಿಚ್ಛೇದನ ಕೊಡುವುದಿಲ್ಲ ಎಂದು ತಾಲೂಕು ಕಛೇರಿಯಲ್ಲಿ ಕ್ಲರ್ಕ್ ಮುಂದೆ ಅರ್ಜಿ ನೀಡುವಂತೆ.. ತೋರಿಸುತ್ತಿದ್ದ ಕಿರಣ್ಗೆ ನ್ಯಾಯಾಧೀಶರು, ನೋಡಪ್ಪಾ…
ನ್ಯಾಯಾಲಯಕ್ಕೆ ಅದರದೆ ಘನತೆ ಗೌರವ ಪದ್ಧತಿ ಮತ್ತು ನಿಯಮಗಳಿವೆ ಅದರ ಪ್ರಕಾರವೆ ನೀನು ಹೇಳಬೇಕಾದ್ದುದ್ದನ್ನು ಹೇಳುವುದಾದರೆ ನಿನ್ನ ಕೇಸನ್ನು ನೀನೇ ವಾದಮಾಡಬಹುದು. ಇಲ್ಲ ನಿನಗೆ ಒಪ್ಪಿತವಿರುವ ವಕೀಲರೊಂದಿಗೆ ಮುಂದಿನ ದಿನಾಂಕಕ್ಕೆ ಹಾಜರಾಗು ಎಂದು ಆತನಿಗೆ ಸೂಚ್ಯವಾಗಿ ಹೇಳಿ ಕೇಸ್ಸನ್ನು ಮುಂದೂಡಲಾಯ್ತು. ಆದರೆ ಆತ ಕೋರ್ಟಿನ ಆವರಣದಲ್ಲಿ ಕಾಯುತ್ತಾ ಕುಳಿತಿದ್ದವ ನಾನು ನ್ಯಾಯಾಲಯದಿಂದ ಹೊರಬಂದಿದ್ದನ್ನು ಗಮನಿಸಿ.. ನನ್ನ ಬಳಿ ಬಂದವನೇ..ಮೇಡಂ ಸ್ವಲ್ಪ ಮಾತಾಡ್ಬೇಕು ಸ್ವಾತಿ ಕೇಸನ್ನು ನೀವೇ ಅಲ್ಲವೇ ನಡೆಸುತ್ತಿರೋದು.. ಅಂದಾಗ..”ಹೌದು” ಎಂಬ ಮಾತಿಗೆ ನನ್ನ ಹೆಂಡತಿ ನನಗೆ ಬೇಕು ಕಳುಹಿಸಿ ಕೊಡಿ ,ಆಕೆಯನು ತುಂಬಾ ಪ್ರೀತಿಸುತ್ತಿನಿ ಎಂಬ ಮಾತಿಗೆ ಹೆಂಡತಿ ಬೇಕು ಅಂತಾ ಅನ್ನುವ ನೀನು ಆಕೆಯನ್ನು ಮದುವೆಯಾಗಿ ಸರಿಯಾಗಿ ಒಂದು ತಿಂಗಳು ಬಾಳಿಸಲು ಸಾಧ್ಯವಾಗಿಲ್ಲ…ಅಷ್ಟೊಂದು ಚಿತ್ರಹಿಂಸೆ ನೀಡಿ ಆ ಹುಡುಗಿಯ ಬದುಕನ್ನು ಛಿದ್ರಗೊಳಿಸಿರುವ ನೀನು ಈಗ ಅಷ್ಟು ಪ್ರೀತಿಸುತ್ತಿದ್ದೆ..ಹಾಗೆ ಹೀಗೆ ಅಂದ್ರೆ ನಂಬುವವರು ಯಾರು… ನಿನಗೆ ಸರಿಯಾಗಿ ಅವಳೊಂದಿಗೆ ಬಾಳುವ ಯೋಗ್ಯತೆ ಇಲ್ಲ.. ಅಟ್ಲೀಸ್ಟ್..ಮ್ಯೂಚುವಲ್ ವಿಚ್ಛೇದನಕ್ಕೆ ಆದರೂ ಒಪ್ಪಿಕೋ..ಇಬ್ಬರು ಬದಕನ್ನು ಹೊಸದಾಗಿ ಮತ್ತೆ ಕಟ್ಟಿಕೊಳಲು ಅನುಕೂಲ ಆಗುತ್ತೆ ಅನ್ನುವ ಮಾತಿಗೆ ಇಲ್ಲ ಮೇಡಂ ಆಕೆಯನ್ನು ನೀವು ನನ್ನೊಂದಿಗೆ ಕಳಿಸದೆ ಇದ್ದರೆ ನಾನು ಅವಳು ಶೃಂಗಾರ ಸಮಯದಲ್ಲಿದ್ದ ಪೋಟೋಸ್, ವಿಡಿಯೋಗಳನ್ನು ಎಲ್ಲರಿಗೂ ತೋರಿಸುವೆ ಅವಳ ಮರ್ಯಾದೆಯನ್ನು ತೆಗೆಯುವೆ ಎಂದಾಗ ಅವನ ಕಪಾಳಕ್ಕೆ ನಾಲ್ಕು ಬಾರಿಸಬೇಕು ಅನಿಸಿತು..
ನನ್ನ ಕೋಪವನ್ನು ಕಡಿಮೆ ಮಾಡಿಕೊಂಡು, ನೋಡು ಆಕೆ ನ್ಯಾಯಾಲಯಕ್ಕೆ ಬಂದಿರೋದೇ ನಿನ್ನ ಹೆಂಡತಿಯಾಗಿದ್ದಕೆ ಆ ಬಂಧನದಿಂದ ಮುಕ್ತಿಬೇಕು ಎಂದು ಬಯಸಿ, ಒಂದು ದಿನವಾಗಲಿ, ತಿಂಗಳಾಗಲಿ ಆಕೆ ನಿನ್ನೊಂದಿಗೆ ಸಪ್ತಪದಿ ತುಳಿದು ಸಂಸಾರ ಮಾಡಿದ್ದಾಳೇ ಅಂದಮೇಲೆ ತನ್ನ ಗಂಡನ ಇಚ್ಚಾನುಸಾರ ಹೆಂಡತಿ ಆಗಿ ನಿನ್ನೊಂದಿಗೆ ಶೃಂಗಾರದ ಸಮಯವನ್ನು ಕಳೆದಿದ್ದಾಳೆ ಆ ಸಮಯದಲ್ಲಿ ನೀನು ವಿವಿಧ ಭಂಗಿಗಳ ಪೋಟೋಸ್ ತೆಗೆದಿದ್ದು ಅಲ್ಲದೆ ವಿಡಿಯೋ ಮಾಡಿದ್ದೆ ದೊಡ್ಡ ಅಪರಾಧ. ಈಗ ಆಕೆಯ ಮಾನಹಾನಿ ಮಾಡ್ಬೇಕು ಅಂತ ಆ ಪೋಟೋ,ವಿಡಿಯೋಗಳನ್ನು ಶೇರ್ ಮಾಡಿದ್ರೆ ಅದಕ್ಕೂ ಪೋಲಿಸ್ ಕಂಪ್ಲೇಂಟ್ ಮಾಡುವುದಲ್ಲದೆ ಮಾನನಷ್ಟ ಮೊಕದ್ದಮೆಯನ್ನು ಹಾಕ್ತಿವಿ, ಅವಳ ಮರ್ಯಾದೆ ಏನು ಹೋಗುವುದಿಲ್ಲ ಹೆಂಡತಿಯಾಗಿ ಗಂಡನೊಂದಿಗೆ ಹೇಗೆ ಬೇಕೊ ಹಾಗೆ ರೊಮ್ಯಾಂಟಿಕ್ ಆಗಿರುವುದೆನೂ ತಪ್ಪಲ್ಲ ಎಂದು ಸ್ವಲ್ಪ ಜೋರು ಮಾಡಿದ ಮೇಲೆ ತಣ್ಣಗಾದ ಕಿರಣನನ್ನು ಉದ್ದೇಶಿಸಿ ನೀನು ಇದಲ್ಲದೇ ಈಗಾಗಲೇ ಕೇಸಿನ ವಾದ ಪತ್ರದಲ್ಲಿ ತಿಳಿಸಿರುವ ಪರಿಹಾರ ಮೊತ್ತ, ಅವಳ ಅಕೌಂಟ್ನಲ್ಲಿದ್ದ ಹಣ, ಅಡಮಾನ ಮಾಡಿರುವ ಒಡವೆಗಳನ್ನು ಬಿಡಿಸಿ ತಂದುಕೊಡಬೇಕು ಎಂದೇ ಅಷ್ಟೆ !! ಅವನ ವರಸೆಯೇ ಬದಲಾಯ್ತು !! ಇಲ್ಲ ಮೇಡಂ ನಾನು ಸುಮ್ಮನೆ ಹೆಂಡತಿ ಬೇಕು ಅಂದಿದ್ದು ಆಕೆ ಪೇಷಂಟ್ ,ನಿತ್ಯ ಮಾತ್ರೆ ನುಂಗುತ್ತಾಳೇ.
ಇವಳ ಜೊತೆಗೆ ಏಗುವ ಬದಲು ನಾನು ಕೆಲಸ ಮಾಡುವ ಕಂಪನಿಯ ಬಾಸ್ ಮಗಳಿವಳು ಎಂದು ತನ್ನ ಮೊಬೈಲ್ನಲ್ಲಿ ಯಾವುದೋ ಪಾರ್ಟಿಯಲ್ಲಿ ಜೊತೆಯಲ್ಲಿ ನಿಂತಿದ್ದ ಒಂದು ಹುಡುಗಿಯ ಪೋಟೋ ತೋರಿಸುತ್ತಾ ಇವಳು ನನ್ನನ್ನು ಪ್ರೀತಿಸುತ್ತಿದ್ದಾಳೆ ಡಿಸೆಂಬರ್ನಲ್ಲಿ ಮದುವೆ ಆಗ್ತಿವಿ.. ಆದಷ್ಟು ಬೇಗಾ ಡೈವೋರ್ಸ್ ಆದ್ರೆ ಒಳ್ಳೆಯದು ಅನ್ಬೇಕಾ!! ಸಾಲದಕ್ಕೆ ಅವಳಿಂದ ಪಡೆದ ಹಣದಲ್ಲಿ ಒಂದು ಲಕ್ಷದ ಮೂವತ್ತು ಸಾವಿರ ನಾನು ಖರ್ಚು ಮಾಡಿರುವೆ ಅದು ಮತ್ತು ಒಡವೆಗಳನ್ನು ಹಿಂದಿರುಗಿಸುವೆ. ಎಂದವನೊಂದಿಗೆ ನಯವಾಗಿ ತಂದಿದ್ದ ಪೋಟೋಸ್ ,ಒಂದು ಸಿಡಿಯನ್ನು ಕೇಳಿ ಅವನಿಂದ ಪಡೆದು ಅದನ್ನು ನಾಶಪಡಿಸಿದೆ.
ಅವನ ಮೊಬೈಲ್ನಲ್ಲಿ ಉಳಿದಿರುವುದನ್ನು ಏನು ಮಾಡಲು ಸಾಧ್ಯವಿಲ್ಲ, ಅಲ್ಲದೆ ಆಕೆ ಮಾಡಬಾರದ ತಪ್ಪೇನು ಮಾಡಿಲ್ಲಾ!! ಒಬ್ಬ ಹೆಂಡತಿಯಾಗಿ ಆಕೆ ಹಾಗೆ ನಡೆದುಕೊಂಡಿದ್ದು ತಪ್ಪಿರಲಿಲ್ಲ ಹೆದರುವ ಅಗತ್ಯವೂ ಇಲ್ಲ ಎಂದು ಸುಶೀಲಾ ಮತ್ತು ಸ್ವಾತಿಗೆ ಸಮಾಧಾನಿಸಿದೆ.
ಕಿರಣನಿಗೆ ನಾ ಮೊದಲೆ ಹೇಳಿದಂತೆ ಎಲ್ಲಾ ರೀತಿಯ ಅಭ್ಯಾಸಗಳು ಇದ್ದುದರಿಂದ ಅಂದು ರಾತ್ರಿ ಕುಡಿಯಲು ಬಾರಿನಲ್ಲಿ ಕುಳಿತಿರುವಾಗ ಸ್ವಾತಿಯ ಅತ್ತೆಯ ಮಗನೋಡಿ ಕಿರಣ್ ಜೊತೆಗೆ ಜಗಳ ಕಾಯ್ಥಿದ್ದಾನೆ ,ಸ್ವಾತಿಯನ್ನು ನಂಬಿಸಿ ಮೋಸಮಾಡಿದ್ದು, ಆಸ್ತಿಗಾಯೇ ಸಂಚು ಮಾಡಿದ್ದು ನೀನು ಎಂದು ಗಲಾಟೆ ತೆಗೆದು ಇಬ್ಬರು ಕುಡಿತಮತ್ತಿನಲ್ಲಿ ಸರಿಯಾಗಿ ಹೊಡೆದಾಡುತ್ತಿರುವಾಗ ಸ್ವಾತಿ ಅತ್ತೆಯ ಮಗ ಸ್ನೇಹಿತರು ಕಿರಣ್ ಮೇಲೆ ಹಲ್ಲೆ ಮಾಡಿದ್ದಾರೆ.. ಹೆಚ್ಚು ಕಡಿಮೆ ಯಾರ ಕೈಗೋ ..ಸಿಗದೆ ಓಡಾಡುತ್ತಿದ್ದ ಕಿರಣ್ ಸರಿಯಾಗಿ ಒದೆತಿಂದಿದ್ದ!!
ಅಂದು ಬೆಳಂಬೆಳಗ್ಗೆ ನಾನು ಮನೆ ಕೆಲಸದಲ್ಲಿ ವ್ಯಸ್ಥಳಾಗಿದ್ದೆ, ನನಗೊಂದು ಗೊತ್ತಿಲ್ಲದ ನಂಬರನಿಂದ ಕರೆಬಂತು “ಮೇಡಂ” ನಾನು ಕಿರಣ್ ನೆನ್ನೆ ನಿಮ್ಮ ಬಳಿ ಕೋರ್ಟನಲ್ಲಿ ಮಾತಾಡಿದ್ದೆನಲ್ಲಾ..ಹಾ ಹೇಳಪ್ಪಾ ! ಏನು ವಿಷಯ ? ನಾನು ಸ್ವಾತಿಗೆ ವಿಚ್ಛೇದನಕ್ಕೆ ಒಪ್ಪಿಗೆ ಕೊಡೋಲ್ಲ,! ನೆನ್ನೆ ರಾತ್ರಿ ಆಕೆಯ ಮಗನಿಂದ ಹಲ್ಲೆಮಾಡಿಸಿದ್ದಾಳೆ,ಮುಖ ಮೂತಿಯಲ್ಲಾ ಉದಿಕೊಳ್ಳುವಂತೆ ಹೊಡೆದಿದ್ದಾರೆ ಮೇಡಂ, ನಾನು ಒಂದು ವರ್ಷದಿಂದ ಊರಿಗೆ ಬಂದಿರಲಿಲ್ಲ ಇಂದು ಕೋರ್ಟ್ಗೆ ಬಂದಿದ್ದು ಸಹ ಯಾರಿಗೂ ತಿಳಿದಿರಲಿಲ್ಲ ಅವಳೇ ಹೇಳಿ ಕೊಟ್ಟಿರೋದು ! ಅಲ್ಲದೆ ನನ್ನನ್ನು ಇನ್ನೊಮ್ಮೆ ಈ ಊರಿನಲ್ಲಿ ಕಂಡರೆ ಕೊಲೆಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಹಾಗಾಗಿ ಈ ಕಡೆಗೆ ನಾನು ಬರುವುದಿಲ್ಲ ಮತ್ತೆ ನಾನು ವಿಚ್ಛೇದನವನ್ನು ಕೊಡೋಲ್ಲ ಅವಳನ್ನು ಬೇರೆಯವರು ಮದುವೆ ಆಗೋಕ್ಕೆ ಬಿಡೋಲ್ಲಾ ಅವಳ ಬದುಕನ್ನು ನರಕ ಮಾಡುವೆ ಎಂದಾಗ ಸಹಜವಾಗಿಯೇ ನನ್ನ ಕೋಪ ನೆತ್ತಿಗೆರಿದ್ದು ಸರಿಯಾಗಿ ತರಾಟೆಗೆ ತೆಗೆದುಕೊಂಡೆ. ನಂತರ ಆತನಿಗೆ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವೆ ಅಂತಹದ್ದು ಏನು ಆಗುವುದಿಲ್ಲ , ಇಬ್ಬರೂ ಮದ್ಯದ ನಶೆಯಲ್ಲಿದ್ದುದರಿಂದ ಹಾಗೆ ಆಗಿದೆ. ಇದರ ಬಗ್ಗೆ ಸ್ವಾತಿಯ ಚಿಕ್ಕಮ್ಮನಲ್ಲಿ ವಿಚಾರಿಸುವೆ ಮುಂದಿನ ಹಿಯರಿಂಗ್ ಇರುವ ದಿನಕ್ಕೆ ವಕೀಲರ ಜೊತೆಗೆ ಇಲ್ಲ ನೀನೇ ಖುದ್ದು ಕೋರ್ಟ್ಗೆ ಬಾ ಎಂದು ಸ್ವಲ್ಪ ಧೈರ್ಯ ತುಂಬಿ ಕರೆ ಕಡಿತಗೊಳಿಸಿ ಸುಶೀಲಾವರನ್ನು. ಕೇಳಿದಾಗ ಸುಶೀಲಾಗೆ ಆಗಲಿ ಸ್ವಾತಿಗೆ ಈ ವಿಚಾರವೆ ತಿಳಿದಿರಲಿಲ್ಲ, ನನ್ನ ಸ್ನೇಹಿತರಾದ ನನ್ನ ಬಳಿ ಕೇಸನ್ನು ಕಳುಹಿಸಿದ್ದ ವಕೀಲರಿಗೆ ಕಾಲ್ಮಾಡಿ ಕೇಳಿದೆ ನಿಮ್ಮ ಸಂಬಂಧಿಕರ ಹುಡುಗರಿಗೆ ಬುದ್ಧಿ ಹೇಳಿ..ಒಬ್ಬ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡೋದು ತಪ್ಪಲ್ವಾ…ಏನಿದು, ಹೀಗೆ ಮಾಡುವುದರಿಂದ ಆವಳಗೆ ಸಿಗಬೇಕಾದ ವಿಚ್ಛೇದನಕ್ಕೆ ತಡೆಯಾಗುವುದಿಲ್ವಾ ? ನ್ಯಾಯಾಲಯದಲ್ಲಿ ಕೇಸಿರುವಾಗ ಅದಕ್ಕೆ ಸಂಬಂಧಿಸಿದ ವ್ಯಕ್ತಿ ಮೇಲೆ ಯಾಕೆ ಹಲ್ಲೆ ಮಾಡ್ಬೇಕು.. ಆ ಮನುಷ್ಯನನ್ನು ಮ್ಯೂಚುವಲ್ಗೆ ಒಪ್ಪಿಸಿದ್ದೆ!! ಈಗ
ನಕ್ರ ತೆಗೆದಿದ್ದಾನೇ.. ಕೇಸು ವಿಚಾರಣೆ ದಿಕ್ಕಿನಲ್ಲಿ ಸಾಗಿದರೆ.. ಕನಿಷ್ಟ ಎರಡು ಮೂರು ವರ್ಷ ಆದರೂ ಆದಿತು ಮುಗಿಯಲು. ಅಲ್ಲಿಯವರೆಗೆ ಆಕೆಯ ಜೀವನ ? ಎಂಬಿತ್ಯಾದಿ ಪ್ರಶ್ನೆಗೆ ಇಲ್ಲಾ, ಮೇಡಂ ಇನ್ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುವೆ ಎಲ್ಲರೂ ಸೇರಿ ಅವಳ ಜೀವನವನ್ನು ನರಕ ಮಾಡಿಬಿಡುತ್ತಾರೆ ಆಕೆ ನತದೃಷ್ಟ ಹೆಣ್ಣು ಪಾಪ ! ಆವಿವೇಕತನದಿಂದ ತೆಗೆದುಕೊಂಡ ಒಂದು ನಿರ್ಧಾರದಿಂದ ಇಂದು ಇಷ್ಟೆಲ್ಲಾ ತೊಂದರೆ ಅನುಭವಿಸುವಂತೆ ಆಯ್ತು.
ಇರ್ಲಿ ಮುಂದೆ ಹೀಗೆ ಆಗದಂತೆ ಜಾಗ್ರತೆ ವಹಿಸಿ, ಇಲ್ಲ ಇದು ಮರುಕಳಿಸಿದರೆ ನಾನು ಈ ಕೇಸಿನಿಂದ ಹಿಂದೆ ಸರಿಯುವೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದೆ.
ಮುಂದುವರಿಯುವುದು…..
ಕಪ್ಪು ಕೋಟಿನ ಜೇಬಿನಲ್ಲಿ ಅವಿತ ಕತೆಗಳು…ಹಿಂದಿನ ಸಂಚಿಕೆಗಳು :
- ನಿರ್ಮಲಾ ಮತ್ತು ರಾಜೇಶ್ ಡೈವೋರ್ಸ್ ಕತೆ – (ಭಾಗ೧)
- ನಿರ್ಮಲಾ ಮತ್ತು ರಾಜೇಶ್ ಡೈವೋರ್ಸ್ ಕತೆ – (ಭಾಗ ೨)
- ಮತ್ತೆ ಬೆಸೆದ ಬೆಸುಗೆ ಕತೆ
- ಪತಂಗವೇ ಬೇಡ ನಿನಗೆ ಬೆಂಕಿಯ ಸಂಗ – (ಭಾಗ೧)
- ಪತಂಗವೇ ಬೇಡ ನಿನಗೆ ಬೆಂಕಿಯ ಸಂಗ – (ಭಾಗ೨)
- ಹೆಚ್.ಆರ್.ಪವಿತ್ರ ಧರ್ಮಪ್ಪ – ವಕೀಲರು