ಪ್ರಪಂಚ ಸಮಾಚಾರ ಪಕ್ಕಕ್ಕಿಡಿ ಚಿಂತೆಯ ಪರದೆ ಸರಿಸಿ ಮರೆತುಬಿಡಿ…ನಗಲು ಯಾವಟಾನಿಕು ಬಂದಿಲ್ಲ ನೋಡಿ, ಎಲ್ಲಾ ಮರೆತು ಮಗುವಾಗಿ ನಕ್ಕು ಬಿಡಿ…ಕವಿ ಹೇಮಂತ್ ಪಾರೇರಾ ಅವರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ನಗಬೇಕು ನಾವು ನಕ್ಕು ಬಿಡಬೇಕು
ನಗದವರಿಗೆ ನಗು ತರಿಸಬೇಕು
ಮಗುವಾಗಿ ನಗುವ ಕಲಿಯಬೇಕು
ನೋವ ನುಂಗಿ ನಗುವ ಹಂಚಬೇಕು
ಪ್ರಪಂಚ ಸಮಾಚಾರ ಪಕ್ಕಕ್ಕಿಡಿ
ಚಿಂತೆಯ ಪರದೆ ಸರಿಸಿ ಮರೆತುಬಿಡಿ
ನಗಲು ಯಾವಟಾನಿಕು ಬಂದಿಲ್ಲ ನೋಡಿ
ಎಲ್ಲಾ ಮರೆತು ಮಗುವಾಗಿ ನಕ್ಕು ಬಿಡಿ
ಕಾಣುವ ಜಗವು ನಮ್ಮ ಕಣ್ಣೊಳಗೆ
ಬಂದಿಯಾಗಿದೆ ಮನ, ತೀರದ ಆಸೆಗಳಿಗೆ
ಕಾಡುವ ಚಿಂತೆ ಹುಟ್ಟುವುದು ನಮ್ಮೊಳಗೆ
ಬಿಟ್ಟುಬಿಡಿ, ಆರಾಮಾಗಿ ಒಮ್ಮೆನಕ್ಕುಬಿಡಿ
ಬಣ್ಣಗಳ ಮಿಶ್ರಣ, ಕಂಡಂತೆ ಲೋಕದಲಿ
ಬೆರಗು ಮಗುವಿನಂತೆ ಕಂಡದ್ದು ಹೊಸದಿರಲಿ
ಹಸಿವಿನ ಮಾತೆಲ್ಲಿ, ಹಸಿದ್ದಾಗ ಯೋಚನೆ ಬರಲಿ
ಇದ್ದುಬಿಡಿ ಮಗುವಾಗಿ, ಮನಬಿಚ್ಚಿ ನಕ್ಕುಬಿಡಿ
- ಹೇಮಂತ್ ಪಾರೇರಾ – ಯಡವನಾಡು, ಕೊಡಗು
