‘ನಾನು ನಿಮ್ಮವನು’ ಕವನ – ಸುನಿಲ್ ಎಸ್

ನಾನು ಕೈ ಚಾಚಿ ನಿಂತಿದ್ದೇನೆ, ನಮ್ಮವರನ್ನು ಯಾರಾದರೂ ಅಪ್ಪಿಕೊಳ್ಳುತ್ತಾರೆಂಬ ! ಕವಿ ಸುನಿಲ್ ಎಸ್ ಅವರ ಲೇಖನಿಯಲ್ಲಿ ಮೂಡಿ ಬಂದ ಸುಂದರ ಕವನ ‘ನಾನು ನಿಮ್ಮವನು’, ತಪ್ಪದೆ ಓದಿ…

ನಾನು ಕಾಯುತ್ತೇನೆ
ಶತಶತಮಾನ ಕಳೆಯಲಿ
ಸುಡು ಬಿಸಿಲು ವರ್ಷಧಾರೆ ಸುರಿಯಲಿ !
ನಿಮ್ಮ ನಗುವಿಗಾಗಿ !!

ನಾನು ಎದುರು ನೋಡುತ್ತೇನೆ
ನೀವು ಬೆವರು ಹನಿ ಸುರಿಸಿ!
ಭರವಸೆ ಕನಸು ಕಟ್ಟಿಕೊಂಡ ಖುಷಿಯ ನಗುವಿಗಾಗಿ!!

ನಾನು ಕೈ ಚಾಚಿ ನಿಂತಿದ್ದೇನೆ
ನಮ್ಮವರನ್ನು ಯಾರಾದರೂ ಅಪ್ಪಿಕೊಳ್ಳುತ್ತಾರೆಂಬ !
ದಗದಗಿಸುವ ಅಸ್ಪೃಶ್ಯತೆಯ ಜ್ವಾಲೆಯಲಿ ನೊಂದು ಬೆಂದು ನಲುಗಿದ ನನ್ನ ಜನರಿಗಾಗಿ !!

ನಾನು ನಗುತ್ತೇನೆ ಆಗೊಮ್ಮೆ ಇಗೊಮ್ಮೆ ನನ್ನ ಜನರ ಕನಸ
ನನಸಾದಾಗ ! ನಾನು ವಿಷಾದಿಸುತ್ತೇನೆ ಮನುಷ್ಯರಿದ್ದು ಮನುಷ್ಯತ್ವಯಿಲ್ಲದವರನ್ನು
ಕಂಡಾಗ !!!


  • ಸುನಿಲ್ ಎಸ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW