ಸುಬ್ಬಿಯ ವರ್ಲ್ಡ್ ಟೂರ್ – ಸುಮಾ ಉಮೇಶ್

ಲೇಖಕಿ ಸುಮಾ ಉಮೇಶ್ ಅವರ ‘ಸುಬ್ಬಿಯ ವರ್ಲ್ಡ್ ಟೂರ್’ ಕತೆ, ಕೇವಲ ಸುಬ್ಬಿ ಹಾಗು ಸುಬ್ಬನಿಗೆ ಮಾಡಿಸಲಿಲ್ಲ, ಓದುಗರಿಗೂ ಮಾಡಿಸಿದ್ದಾರೆ, ಓದುವಾಗ ಮುಖದಲ್ಲಿ ನಗು ಮೂಡಿಸದೆ ಇರಲಾರದು, ತಪ್ಪದೆ ಮುಂದೆ ಓದಿ ಸುಬ್ಬ ಹಾಗು ಸುಬ್ಬಿ ಕತೆ…

ಸುಬ್ಬಿ : ಎಷ್ಟು ದಿನ ಆಯ್ತು ಎಲ್ಲೂ tour ಅಂತ ಕರೆದುಕೊಂಡು ಹೋಗಲ್ಲ ನೀವು ..ಬರೀ ತೊಳಿ.. ಬಳಿ.. ತಿನ್ನು ..ಬಿದ್ಗೋ ..ಇಷ್ಟೆ ಆಯ್ತು ಜೀವನ..

ಸುಬ್ : ಎರಡು ವರ್ಷದಿಂದ ಈ Corona ಬೇರೆ ಅಡ್ಡ ಬಂತಲ್ಲಾ..ಎಲ್ಲೂ ಹೋಗೋ ಹಾಗಿಲ್ವಲ್ಲೇ.

ಸುಬ್ಬಿ : ಇದೊಂದು ಕುಂಟು ನೆಪ ಕಲ್ತಿದೀರ ಎಲ್ಲ ಗಂಡಸರು.

ಸುಬ್ಬಾ : ಅಯ್ಯೋ… ಅರ್ಥ ಮಾಡಿಕೊಳ್ಳೇ ..ಏನಾದರು ರೋಗ ಬಂದು ಇಬ್ಬರೂ ಗೊಟಕ್ ಅಂದರೆ ಏನು ಗತಿ..

ಸುಬ್ಬಿ: vaccination  ಆಗಿದೆ ಅಲ್ವೇನ್ರಿ. ಎಂಥ ರೋಗನೂ ಬರಲ್ಲ.. ನಡೀರಿ . jolly ಆಗಿ ಒಂದು ವಾರ tour ಹೋಗಿ ಬರೋಣ..ರೀ..ನಾವು honeymoon ಗೂ ಒಂದು ಒಳ್ಳೆ place ಗೆ ಹೋಗಲಿಲ್ಲ..ಈಗಲಾದರೂ Switzerland, rome, Paris, NewYork ಎಲ್ಲ ನೋಡಬೇಕು ಅನ್ನಿಸಿದೆ ರೀ..

ಸುಬ್ಬ: ಅಯ್ಯೋ..ಅವೆಲ್ಲ ಬೇರೆ ಬೇರೆ ಖಂಡದಲ್ಲಿ ಇವೆ ಕಣೆ. ಅಷ್ಟು ಸುತ್ತಾಡಲು ಹಣ ಎಷ್ಟು ಖರ್ಚಾಗುತ್ತೆ ಗೊತ್ತಾ?! ನಿನಗೆ ಅದೆಲ್ಲ ನಂಗೆ ಗೊತ್ತಿಲ್ಲ ರೀ..ಹೋಗಬೇಕು ಅಂದರೆ ಹೋಗಬೇಕು ಅಷ್ಟೇ.

ಸುಬ್ಬ: ಸರಿ..ಅಷ್ಟೇ ತಾನೆ. Ready ಆಗು. ರಾತ್ರಿನೇ ಹೊರಡೋಣ…ಎಲ್ಲಿಗೆ ???????World tour.

ಸುಬ್ಬಿ: oh really???..ಆದ್ರೆ ಒಂದೇ ದಿನದಲ್ಲಿ ವೀಸಾ passport..ಇದೆಲ್ಲ ಹೇಗ್ರೀ?.

ಸುಬ್ಬ: ನನ್ನ ಮುದ್ದಿನ ಹೆಂಡತಿ ನೀನು..ನಿನ್ನ ಆಸೆ ನೆರವೇರಿಸಿದೆ ಇದ್ರೆ ಆಗುತ್ತಾ..ನಾನು ಹೇಗೋ ಅದೆಲ್ಲ manage ಮಾಡುತ್ತೇನೆ. ಸುಬ್ಬಿ ಒಂದು ಘಂಟೆ ಒಳಗೆ ಎರಡು suitcase ಒಂದು cabin bag ready ಮಾಡಿ ಇಟ್ಟಳು.

ಸುಬ್ಬ: ಹಾ..ನೀನು ready ಆಗುತ್ತಿರು..ಸ್ವಲ್ಪ ಕೆಲಸ ಇದೆ ಹೊರಗೆ ಹೋಗಿ ಬರುತ್ತೇನೆ…ರಾತ್ರಿ ಆಯ್ತು..ಇಬ್ಬರ ಊಟ ಆಯ್ತು. ಬೇಗ ಪಾತ್ರೆ ತೊಳೆದು ಬಂದೆ.

ಸುಬ್ಬಿ : ರೀ flight journey ಗೆ ಜೀನ್ಸ್ ಹಾಕಿಕೊಂಡು ಬರಲಾ ..ಒಂಥರಾ comfort ಇರುತ್ತೆ.

ಸುಬ್ಬ: ಅಯ್ಯೋ..ಈ journey ಗೆ nighty ಸಾಕು ಕಣೆ .

ಸುಬ್ಬಿ ಗಂಡನನ್ನು ಕೆಕ್ಕರಿಸಿಕೊಂಡು ನೋಡಿದಳು.

ಸುಬ್ಬ: ಬಾ ಹೇಳುತ್ತೇನೆ. ಎಂದು ಸುಬ್ಬಿಯ ಕೈ ಹಿಡಿದು room ಗೆ ಕರೆದುಕೊಂಡು ಹೋಗಿ “ನೋಡು” ಅಂತಾನೆ.

Double bed ಮೇಲೆ ಹೊಚ್ಚ ಹೊಸ bed spread.. World map design ದು..

ಬಾರೆ ಬಾರೆ…ಯಾವ ದೇಶ ಬೇಕು ಸುತ್ತೋಣ..ಎಲ್ಲ ದೇಶಗಳಲ್ಲೂ ಒಂದೊಂದು ದಿನ ನಮ್ಮ honeymoon ಆಚರಿಸೋಣ.

ಸುಬ್ಬಿಗೆ ಬಂದ ಕೋಪದಲ್ಲಿ ಪಕ್ಕದಲ್ಲಿ ಇದ್ದ vase ಎತ್ತಿ ಸುಬ್ಬನ ಕಡೆ ಬೀಸಿದಳು..ಆಮೇಲೆ ತಾನೇ ಕೂತು ಅವನ ಹಣೆಗೆ bandage ಕಟ್ಟಿದಳು.

ಸ್ವಲ್ಪ ಹೊತ್ತು ಅತ್ತು ಕೋಪ ಕಮ್ಮಿ ಮಾಡಿಕೊಂಡಳು..ಆದ್ರೆ ಒಳಗೆ ಗಂಡನ ಮೇಲೆ ರೋಷ ಉಕ್ಕಿ ಹರಿಯುತ್ತಿತ್ತು..

ಫೋಟೋ ಕೃಪೆ : google

*****

ಮಾರನೇ ದಿನ

ಸುಬ್ಬಾ : ಇವತ್ತು ಏನು ತಿಂಡಿ?? ಬೇಜಾರು ಮಾಡ್ಕೋಬೇಡವೇ ..ನಿನ್ನೆಯ ಬೇಜಾರು ಹೋಗಲು ಇವತ್ತೆಲ್ಲ ಮನೇಲಿ special item’s ಮಾಡಿಕೊಂಡು ತಿನ್ನೋಣ..ಏನಂತೀಯ..

ಸುಬ್ಬಿ ಮುಖದಲ್ಲಿ ನಗು ತಂದು ಕೊಂಡು : ಹೋಗಲಿ ಬಿಡಿ..ಬೇಜಾರು ಏನಿಲ್ಲ..ಏನೇನು ತಿಂಡಿ ಅಡುಗೆ ಮಾಡಲಿ ಹೇಳಿ ..

ಸುಬ್ಬ ಬಹಳ ಉತ್ಸಾಹದಿಂದ: ಬೆಳಿಗ್ಗೆಗೆ ಮಸಾಲೆ ದೋಸೆ ,ಇಡ್ಲಿ ವಡೆ, ಕ್ಯಾರಟ್ ಹಲ್ವ ಮಾಡಿಬಿಡು..

ಸುಬ್ಬಿ: ಅಯ್ಯೋ..ಅಷ್ಟೇ ತಾನೆ..ಬಾಸುಂದಿ ಬೇಡವ

ಸುಬ್ಬ : ಬೇಕು ಬೇಕು ..ಮಧ್ಯಾಹ್ನಕ್ಕೆ..North Indian ತಾಲಿ..ನಿಂಗೆ ಗೊತ್ತಲ್ವ..ಅದರಲ್ಲಿ ಏನೇನು include ಆಗಿರುತ್ತದೆ ಅಂತ..ಅದನ್ನೆಲ್ಲ ಮಾಡು..pulav ಗೆ ಗೋಡಂಬಿ ಜಾಸ್ತಿ ಹಾಕು..

ಸುಬ್ಬಿ: ಹಾಕುತ್ತೇನೆ ರೀ…. ಸರೀಗೆ ಹಾಕ್ತೀನಿ..ಸಂಜೆ ಏನು ಬೇಕು ಅಂತ ಹೇಳಲೇ ಇಲ್ಲ ನೀವು

ಸುಬ್ಬಾ : ಸಂಜೆಗೆ ಪಾವ್ ಬಾಜಿ, ವಡಾ ಪಾವ್, ಮೊಮೊಸ್ ಮಾಡು …ಸಾಕು ಕಣೆ

ಸುಬ್ಬಿ: ಇಷ್ಟೆ ಸಾಕ..ಜೊತೆಯಲ್ಲಿ ಮಿಲ್ಕ್ ಶೇಕ್ ಬೇಡವ?.

ಸುಬ್ಬಾ : .ನಿಂಗೆ ಕಷ್ಟ ಆಗುತ್ತಲ್ಲ ಚಿನ್ನ.

ಸುಬ್ಬಿ: ಅಯ್ಯೋ..ನನ್ನ ರಾಜ..ನಿಮಗಾಗಿ ಇಷ್ಟು ಮಾಡದೆ ಇದ್ರೆ ಹೇಗೆ..ನನಗೇನೂ ಕಷ್ಟ ಆಗಲ್ಲ..ರಾತ್ರಿಗೆ candle light dinner ಕೂಡ ನಾನೇ arrange ಮಾಡುತ್ತೇನೆ..

ಸುಬ್ಬಾ full ಖುಷ್.

ಬೆಳಿಗ್ಗೆ ಹತ್ತು ಘಂಟೆ ಆದರು kitchen ನಲ್ಲಿ ಪಾತ್ರೆ ಸದ್ದು ಇಲ್ಲ..

ಸುಬ್ಬಾ : ಎಲ್ಲೆ ದೋಸೆ..????

ಸುಬ್ಬಿ: ಅವನ ಕೈಗೆ ಮೊಬೈಲ್ ಕೊಡುತ್ತಾ, ತಗೊಳಿ..ಸೌತ್ ಇಂಡಿಯನ್ ಬ್ಲಾಗ್ ನಲ್ಲಿ ಮಸಾಲೆ ದೋಸೆ ಫೋಟೋ ಇವತ್ತು ಬೆಳಿಗ್ಗಿನ್ನೂ ಅಪ್ಲೋಡ್ ಮಾಡಿದ್ದಾರೆ..ನೋಡಿಕೊಳ್ಳಿ..ಖಾನಾ ಖಜಾನ ಬ್ಲಾಗ್ ನಲ್ಲಿ ನಾರ್ತ್ ಇಂಡಿಯನ್ ಥಾಲಿ ಇದೆ..ಮಧ್ಯಾಹ್ನ ನೋಡಿಕೊಳ್ಳಿ..ಪಂಜಾಬಿ ತಡ್ಕ ವೆಬ್ಸೈಟ್ ನಲ್ಲಿ ಎಲ್ಲ ತರದ chats ಇದೆ. ಸಂಜೆ ನೋಡಿ..ಇನ್ನು ರಾತ್ರಿಗೆ transformer ರಿಪೇರಿ ಅಂತ ಕರೆಂಟ್ ತೆಗೆಯುತ್ತಾರಂತೆ ..candle ಹಚ್ಚಲೇ ಬೇಕು. ಚಿತ್ರಾನ್ನ ಮಾಡುತ್ತೇನೆ..ತಿಂದು ನೀವು ತಂದಿರುವ ವರ್ಲ್ಡ್ map design ಇರುವ bed spread ಮೇಲೆ ಒಬ್ಬರೇ ಬಿದ್ಗೊಳಿ.

ಸುಬ್ಬಾ : ಆಆಆಆಆಆಆಆಆಆಆ

ನಿಮಗೆಲ್ಲ ಗೊತ್ತೇ ಇದೆ. ಸುಬ್ಬಿ, always rocks..ಸುಬ್ಬಾ, ಹೀಗೆ shock ಆಗಲೆಬೇಕು …


  • ಸುಮಾ ಉಮೇಶ್

5 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW