ಮೆಟ್ರೋ ರೈಲು ತಯಾರಿಸುವ ಕಾರ್ಖಾನೆಯಲ್ಲಿ ನಾಟಕ ತಯಾರಿಕೆಯ ಕಲಿಕೆಬಿ.ಇ.ಎಂ.ಎಲ್‌ ನಲ್ಲಿ ನಾಟಕ ರಚನಾ ಶಿಬಿರ

– ಶಾಲಿನಿ ಪ್ರದೀಪ.

ಬೆಂಗಳೂರಲ್ಲಿ ಒಂದು ಕಾಲಕ್ಕೆ ಕಾರ್ಮಿಕ ರಂಗಭೂಮಿ ಅದ್ದೂರಿಯಲ್ಲಿತ್ತು. ಹೆಚ್‌.ಎಂ.ಟಿ ಕಲಾವಿದರು, ಮೈಕೋ ಕಲಾವಿದರು, ಕವಿಕಾ ಕಲಾವಿದರು, ಬೆಮೆಲ್‌ ಕಲಾವಿದರು, ಎಂ.ಎಸ್‌.ಐ.ಎಲ್‌, ಎಚ್‌.ಎ.ಎಲ್‌ ಕಲಾವಿದರು, ಸಾಬೂನು ಕಾರ್ಖಾನೆಯ ಕಲಾವಿದರು, ಕಿರ್ಲೋಸ್ಕರ ರಂಗ ತಂಡ ಹೀಗೆ ಒಂದೇ ಎರಡೇ. ನೂರಾರು ಸಣ್ಣ-ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಕಲಾವಿದರು ತಂಡ ಕಟ್ಟಿಕೊಂಡು ರಂಗಭೂಮಿಯನ್ನು ಉತ್ತುಂಗದ ಶಿಖರಕ್ಕೆ ಒಯ್ದರು. ಆಯಾ ಕಂಪನಿಗಳೂ ಇಂಥ ತಂಡಗಳಿಗೆ ಸಾಕಷ್ಟು ಉತ್ತೇಜನ ಕೊಟ್ಟರು

ಬಿ.ಜಯಶ್ರೀ, ಸಿ.ಜಿ.ಕೆ., ಆರ್‌. ನಾಗೇಶ್‌, ಡಿ.ಟಿ.ಚೆನ್ನಕೇಶವ ರಂಥವರೂ ಇಂಥ ತಂಡಗಳಿಗೆ ಅಪರೂಪದ ನಾಟಕ ಮಾಡಿಸಿದರು. ನಾಟಕ ಸ್ಪರ್ಧೆಗಳಂತೂ ಹೆಚ್ಚು ಪ್ರಸಿದ್ಧವಾಗಿದ್ದವು. ಅವತ್ತು ನಡೆಯುತ್ತಿದ್ದ ಉಲ್ಲಾಳ ಶೀಲ್ಡಗಾಗಿ ರಂಗತಂಡಗಳು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದವು.

ಆಗ ಹೂಲಿ ಶೇಖರರ ಅನೇಕ ನಾಟಕಗಳನ್ನು ಇಂಥ ತಂಡಗಳು ಅಭಿನಯಿಸಿದವು, ಅವರು ಬರೆದ ಅರಗಿನ ಬೆಟ್ಟ, ಕಲ್ಯಾಣದಲ್ಲಿ ಒಂದು ಕ್ರಾಂತಿ, ಹಾವು ಹರಿದಾಡತಾವ, ಬೆಕುವ, ಹಲಗಲಿ ಬೇಡರ ದಂಗೆ, ರಾಕ್ಷಸ ಮುಂತಾದ ನಾಟಕಗಳನ್ನು ಇಂಥ ತಂಡಗಳು ಸಾಕಷ್ಟು ಪ್ರಯೋಗ ಮಾಡಿದವು. ನಾಟಕ ಸ್ಪರ್ಧೆಗಳಲ್ಲಿ ಈ ನಾಟಕಗಳಿಗೆಅನೇಕ ಪ್ರಶಸ್ತಿಗಳೂ ಬಂದವು. ಕಾರ್ಮಿಕ ರಂಗಭೂಮಿಯಲ್ಲೇ ಈ ನಾಟಕಗಳು ಹೆಚ್ಚು ಸದ್ದು ಮಾಡಿದ್ದವು.

ಆನಂತರ ಅದೇನಾಯಿತೋ ಗೊತ್ತಿಲ್ಲ. ಬೆಂಗಳೂರಿನ ಕಾರ್ಖಾನೆಗಳು ಒಂದೊಂದಾಗಿ ಕಣ್ಣು ಮುಚ್ಚಿದವು. ಅದರೊಂದಿಗೆ ಅನೇಕ ತಂಡಗಳೂ ಮರೆಯಾದವು. ಒಂದು ಕಾಲದ ಬೆಂಗಳೂರಿನ ಸಾಂಸ್ಕೃತಿಕ ವೈಭವವೇ ಮರೆಯಾಯಿತು. ಒಂದಷ್ಟು ಕಲಾವಿದರು ಸಿನಿಮಾ, ದೂರದರ್ಶನದ ಕಡೆಗೆ ಹೋದರು. ಆದರೆ ಅಲ್ಲಿರಲಾರದ ಇಲ್ಲಿಯೂ ಇರಲಾಗದ ಸ್ಥಿತಿಯಲ್ಲಿ ಕಲಾವಿದರು ನಿರಂತರ ಗುಳೇಯಲ್ಲಿ ತೊಡಗಿದರು. ಒಂದಷ್ಟು ಕಲಾ ತಂಡಗಳು ತುಕ್ಕು ಹಿಡಿಯತೊಡಗಿದ ಆಯುಧಗಳಿಗೆ ಸಾಣೆ ಹಿಡಿಯತೊಡಗಿದ್ದಾರೆ. ಹೊಸ ನಾಟಕಕಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ತಮ್ಮ ಕಾರ್ಮಿಕರಲ್ಲೇ ಇರಬಹುದಾದ ಬರವಣಿಗೆಯ ಪ್ರತಿಭೆ ಗುರುತಿಸತೊಡಗಿದ್ದಾರೆ. ಅದಕ್ಕಾಗಿ ಬೆಮೆಲ್‌ ಲಲಿತ ಕಲಾ ಸಂಘ ತನ್ನಲ್ಲೇ ಇರುವ ಮೂವತ್ತು ನಾಟಕಕಾರರನ್ನು ಗುರುತಿಸಿ ಅವರಿಗಾಗಿ ನಾಟಕ ರಚನಾ ಶಿಬಿರವನ್ನು ಏರ್ಪಡಿಸಿತ್ತು. ಈ ಶಿಬಿರವನ್ನು ಹಿರಿಯ ನಾಟಕಕಾರರಾದ ಹೂಲಿ ಶೇಖರ್‌, ಮತ್ತು ರಾಜೇಂದ್ರ ಕಾರಂತ ನಡೆಸಿಕೊಟ್ಟರು.

ಬೆಮೆಲ್‌ ಲಲಿತ ಕಲಾ ಸಂಘದ ಅಧ್ಯಕ್ಷರಾದ ಟಿ.ರಘು, ಮತ್ತು ಅವರ ಸಹೋದ್ಯೋಗಿಗಳು ಇದರ ವ್ಯವಸ್ಥೆ ಮಾಡಿದ್ದರು. ಶಿಬಿರದಲ್ಲಿ ಮೂವತ್ತು ಜನ ಹಿರ-ಕಿರಿಯ ನಾಟಕಕಾರರು ಭಾಗವಹಿಸಿದ್ದರು. ಶಿಬಿರದಲ್ಲಿ ವಸ್ತುವಿನ ಹುಡುಕಾಟ, ನಿರೂಪಣಾ ತಂತ್ರಗಳು, ಮತ್ತು ರಂಗಭಾಷೆಯ ಬಗ್ಗೆ ಹೂಲಿ ಶೇಖರ್‌ ವಿವರವಾಗಿ ತಿಳಿಸಿದರು. ತಾನು ಹೇಗೆ ನಾಟಕ ಬರೆಯುತ್ತೇನೆ ಎಂದು ರಾಜೇಂದ್ರ ಕಾರಂತ ತಿಳಿಸಿ ಬರವಣಿಗೆ ಶೈಲಿಯ ಬಗ್ಗೆ ಮಾತಾಡಿದರು. ಶಿಬಿರದ ಫಲವಾಗಿ ಕೆಲವರು ಆಗಲೇ ನಾಟಕದ ಬರವಣಿಗೆಗೆ ಸುರು ಮಾಡಿದ್ದು ಇಂಥ ಶಿಬಿರಗಳ ಅವಶ್ಯಕತೆಯನ್ನು ಎತ್ತಿ ತೋರಿಸುತ್ತದೆ. ಇದಕ್ಕಾಗಿ ಬೆಮೆಲ್‌ ಲಲಿತ ಕಲಾ ಸಂಘ ಅಭಿನಂದನೀಯ ಕಾರ್ಯ ಮಾಡಿದೆ. ಇಂಥ ಶಿಬಿರಗಳು ಇನ್ನಷ್ಟು ಹೆಚ್ಚಾಗಬೇಕು. ರಂಗಭೂಮಿಗೆ ಹೊಸಬರಿಂದ ಇನ್ನಷ್ಟು ನಾಟಕಗಳು ಬರಬೇಕು.

#ಆಕತನಯಸ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW