‘ನವಿಲುಗರಿ’ ಕವನ – ಸವಿತಾ ಮುದ್ಗಲ್

‘ಕಣಕಣದಿ ಕೂಡಿದೆ ನಮ್ಮಿಬ್ಬರ ಪ್ರೇಮವು…ಪ್ರತಿಕ್ಷಣ ಸಾರಿಹೇಳಲು ಮೇಘಗಳ ನರ್ತನವು’… ಸವಿತಾ ಮುದ್ಗಲ್ ಅವರ ಸುಂದರ ಕವನ ಓದುಗರ ಮುಂದೆ, ತಪ್ಪದೆ ಓದಿ…

ನೀನೊಬ್ಬಳು ಕಲ್ಪನೆಯ ಚೆಲುವಿನ ಬೆಡಗಿ
ನನಗಾಗೆ ಹುಟ್ಟಿದಿಯ ಹೊಂಬ್ಬಣ್ಣದ ಹುಡುಗಿ!
ನಿನ್ನ ಒಲುಮೆಯ ಪದಗಳ ಜೋಡಿಸಲು
ನಾ ತಂದಿರುವೆ ನವಿಲುಗರಿಯ ಬರೆಯಲು!

ನೀಹೇಳದ ಮೌನದ ಪದಗಳೇ ಸವಾಲು
ಹೇಳುತ್ತಿವೆ ಮೆಲ್ಲನೆ ಜಾರಲು ಹೃದಯದಲು!
ನಿನ್ನಂದವ ವರ್ಣಿಸಲು ನಾಚುವ ಗರಿಯು
ಪಿಸುಗುಡುತ ಗೀಚುತಿವೆ ಭಾವದ ಝರಿಯು!

ಕಣಕಣದಿ ಕೂಡಿದೆ ನಮ್ಮಿಬ್ಬರ ಪ್ರೇಮವು
ಪ್ರತಿಕ್ಷಣ ಸಾರಿಹೇಳಲು ಮೇಘಗಳ ನರ್ತನವು!
ಕಾಮನಬಿಲ್ಲಿನ ನವಬಣ್ಣದ ಅಮೋಘ ಪ್ರೀತಿಯು
ನಂದಕಿಶೋರನು ನಾಚುವಂತ ಇಳೆಯ ಪ್ರೇಮವು!

ಮುಕ್ಕೋಟಿ ದೇವತೆಯರು ಅಸ್ತು ಎನ್ನಲು
ತಡವೇಕೆ ಕಂಕಣ ಕಟ್ಟಲು ವಾಲುಗ ಊದಿಸಲು!.


  • ಸವಿತಾ ಮುದ್ಗಲ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading