‘ ನಯನ ಲೇ ಹರಿಣಾಕ್ಷಿ’ ಕವನ

ಅವಳ ನಿಲೋತ್ಪಲ ನಯನಗಳು ಅವು ಮಣಿಸಿಬಿಟ್ಟವು ನನ್ನ…ಕವಿ ಇಮ್ತಿಯಾಜ್ ಕೆ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…

ನೀಲೋತ್ಪಲ ನಯನ
ಲೇ ಹರಿಣಾಕ್ಷಿ,

ನನ್ನ ಹೃದಯವನು ಬಂಧಿಸಿದುದೇನೆಂದು
ಆ ವಿಧಿ ಎಂದಾದರೂ ಕೇಳಿದರೆ

ನಾನು ನಕ್ಕು ನುಡಿಯುವೆ :
ಅದು ಅವಳ ನಗು ಅಲ್ಲ….
ಅದು ಅವಳ ಮಾತೂ ಅಲ್ಲ…
ಅದು…

ಅವಳ ನಿಲೋತ್ಪಲ ನಯನಗಳು
ನಾನು ಸೆಣಸುವ ಮುಂಚೆಯೇ
ಅವು ಮಣಿಸಿಬಿಟ್ಟವು ನನ್ನ.

ಕವಿರಸಿಕ
ಲೇ ನಳಿನಾಕ್ಷಿ,

ನಿನ್ನ ಕಣ್ಣುಗಳಲ್ಲಿ ನಾನೊಂದು ಪ್ರಶಾಂತ ಆಕಾಶ ಕಂಡಿದ್ದೇನೆ. ಅಲ್ಲಿ ಕನಸುಗಳು ಚಿಗುರುತ್ತವೆ, ಎಂದೂ ಬಾಡದಿರುವ ಕನಸುಗಳು. ಮೃದುವಾದ, ಅಪ್ಪಟವಾದ ಚಲುವಿನ ನಿನ್ನ ಕಣ್ಣೋಟಗಳು, ಹೃದಯದ ಪ್ರತಿ ಮಿಡಿತವನ್ನು ನಿನ್ನತ್ತಲೇ ಸೆಳೆಯುತ್ತವೆ. ಯಾವ ಬಂಧನವೂ ಇಲ್ಲದೇ ನನ್ನನ್ನು ಹಿಡಿದುಕೊಳ್ಳುತ್ತವೆ. ಯಾವ ಮಾತಿಲ್ಲದೇ ಮುದಗೋಳಿಸುತ್ತವೆ. ಯಾವ ಅನುಭವ ಇಲ್ಲದೇ ಪುಲಕಗೊಳಿಸುತ್ತವೆ.

ಲೇ ಲೋಲಾಕ್ಷಿ,

ನಿನ್ನ ಕಣ್ಣುಗಳಲ್ಲಿ ಎಂದೆಂದೂ ಮುಳುಗಿ ಹೋಗಲು ಹಂಬಲಿಸುವಂತೆ ಮಾಡುವ ಬಿರುಗಾಳಿಯಿದೆ ಕಣೆ. ಆ ಕಣ್ಣುಗಳ ಹೊಳಪು ಕಂಡಾಗಿನಿಂದ ನಾನು ದೂರದ ನಕ್ಷತ್ರಗಳಲ್ಲಿ ಸ್ವರ್ಗಕ್ಕಾಗಿ ಹುಡುಕುವುದನ್ನು ಬಿಟ್ಟಿದ್ದೇನೆ.

ಅದಕ್ಕಾಗಿ

ಲೇ ಮೀನಾಕ್ಷಿ
ನಿನ್ನ ಕಣ್ಣುಗಳಲ್ಲಿ ನೋಟವಾಗಿರಲು
ಅನುಮತಿಸು

ಎಂದೂ ಕೆಳರಿಯದ ಪ್ರೇಮ ಕಥೆಗೆ
ನಿನ್ನ ಕಣ್ಣುಗಳೇ ಕಾರಣವಾಗಲಿ…


  • ಇಮ್ತಿಯಾಜ್ ಕೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading