ತಿಂದು ತಿರುಗುವುದು ಬಿಟ್ಟು, ದುಡಿಮೆ ಮಾಡು ಮನಸು ಕೊಟ್ಟು…ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ನೆಟ್ಟಗಾಗದು ನಾಯಿ ಬಾಲ
ಹೆಜ್ಜೆಯಿಟ್ಟಲ್ಲಿ ಮೋಸದ ಜಾಲ
ಕದ್ದು ಬಚ್ಚಿಟ್ಟ ಹಣವೆಲ್ಲ ಕಾಲ ಕಾಲ.
ಮಾಡಿ ಮೈ ತುಂಬ ಸಾಲ
ಕೊರಳಿಗೆ ಬಿದ್ದರು ಸಾಲದ ಶೂಲ
ಸುಳ್ಳಿನ ಸೌಧ ಕಟ್ಟುವರು ಸತ್ಯದ ಮ್ಯಾಲ.
ಇಲ್ಲಿಲ್ಲ ಮರು ಹುಟ್ಟು
ನುಡಿಯಬೇಡ ಮನಸು ಕೆಟ್ಟು
ಅರಿತರೆ ಒಳಿತು ಬದುಕಿನ ಗುಟ್ಟು.
ದುಡಿದು ತಿನ್ನುವುದು ಬಿಟ್ಟು
ಸಾರಾಯಿ ಕುಡಿವರು ದುಡ್ಡು ಕೊಟ್ಟು
ಮೋಸ ವಂಚನೆಗಳ ಮೇಲೆ ನಂಬಿಕೆಯಿಟ್ಟು.
ತಿಂದು ತಿರುಗುವುದು ಬಿಟ್ಟು
ದುಡಿಮೆ ಮಾಡು ಮನಸು ಕೊಟ್ಟು
ಸುಖ ನಿದ್ದೆ ಮಾಡುವುದು ಕಲಿ ಚಿಂತೆಬಿಟ್ಟು.
ಮಾತಲ್ಲಿ ಸಿಹಿ ಬೆಲ್ಲದಚ್ಚು
ಭಾವದೊಳಗೆ ದ್ವೇಷದ ಕಿಚ್ಚು
ಜಾತಿಗಳ ನಡುವೆ ಹಗೆತನದ ಹುಚ್ಚು.
ಬಂದು ಹೋದವು ಅನೇಕ ವಾದ
ಹೋಗಲಿಲ್ಲ ಮೇಲು ಕೀಳೆಂಬ ಭೇದ
ಮೊಳಗಲಿಲ್ಲ ಸಮಾನತೆಯ ಶಂಖನಾದ.
- ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ – ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ ಯಾದಗಿರಿ ಜಿಲ್ಲೆ.ಜಿಲ್ಲಾಧ್ಯಕ್ಷರು ಸಿರಿಗನ್ನಡ ವೇದಿಕೆ ಯಾದಗಿರಿ ಜಿಲ್ಲಾ ಘಟಕ.
