ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪುರಸ್ಕಾರ ಪುರಸ್ಕೃತ ಟಿ .ಪಿ. ಉಮೇಶ್ ಅವರು ಬರೆದ ಒಂದು ಕವನ ಓದುಗರ ಮುಂದೆ, ತಪ್ಪದೆ ಓದಿ…
ಆನಂದ ಹರ್ಷೋಲ್ಲಾಸ ನನ್ನ ಮನೆ ಬಳಿ ನಿಂತಾಗ;
ಅದೇಕೋ ಉನ್ಮಾದ ಸಂಕಟ ಕಂಪನ
ನನ್ನ ಹೆಸರು ಕೂಗಿದಾಗ !
*
ಮನೆಯೊಳಗೆ ಬರಲೊಲ್ಲೆ;
ಕೂಗುವುದ ಬಿಡಲೊಲ್ಲೆ !
ಧೈರ್ಯವೆಂದರೇ ನಿನ್ನದು !
ಪ್ರೀತಿಯೆಂದರೇ ನಿನ್ನದು !
*
ಹೋದ ಮೇಲೆ
ಕರಗಿದ ಗೆಜ್ಜೆ ಧನಿಗಳಿಗೆ
ಮರುಗಿದೆ;
ಪಾದದ ಗುರುತುಗಳಿಗೆ
ಹುಡುಕಿದೆ !
*
ಇದ್ದಾಗ…
ಭಯದಿಂದೇಕೋ ದಿಗಿಲು; ಕಣ್ಗತ್ತಲೇ !
ಹೋದಾಗ…
ಬೇಸರದ ಸಿಡಿಲು; ಕಂಬನಿಯ ಉಯಿಲು !
*
ಧನಿಗಾಗಿ…
ಕಾತರಿಸುವ ಕನವರಿಕೆ;
ಮಾತಿಗಾಗಿ…
ಹಂಬಲಿಸುವ ಜಾಗರಣೆ;
ನೋಟಕಾಗಿ;
ಚಡಪಡಿಸುವ ಆಲಾಪನೆ;
- ಟಿ ಪಿ ಉಮೇಶ್ – ಶಿಕ್ಷಕರು, ಕವಿಗಳು, ಚಿತ್ರದುರ್ಗ ಜಿಲ್ಲೆ