ಕವಿ ವೀರೇಶ.ಬ. ಕುರಿ ಸೋಂಪೂರ ಅವರ ಪುಸ್ತಕ ಪರಿಚಯ

ಕವಿ ವೀರೇಶ ಬ ಕುರಿ ಸೋಂಪುರ ಅವರ ಕವನ ಸಂಕಲನದ ಕುರಿತು ಮೀನಾ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಓದಿ…

ಕವನ ಸಂಕಲನ : ನೆಲದ ಮೇಲಣ ನಕ್ಷತ್ರಗಳು
ಲೇಖಕರು : ಶ್ರೀ ವೀರೇಶ.ಬ. ಕುರಿ ಸೋಂಪೂರ
ಪ್ರಕಾಶನ : ಗಾನವಿ
ಮೊಬೈಲ್. 8088209106

ಶ್ರೀ ವೀರೇಶ ಬ ಕುರಿ ಅವರು ಶಿಕ್ಷಕರಾಗಿದ್ದು, ಕಾವ್ಯ ರಚನೆಯಲ್ಲಿ ಪರಿಣಿತರಾಗಿದ್ದಾರೆ. ಶ್ರೀ ವೀರೇಶ ಬ.ಕುರಿ ಅವರು ಮಕ್ಕಳ ಸಾಹಿತ್ಯಕ್ಕೆ ತೋರುವ ಆಸಕ್ತಿ ಮೆಚ್ಚುವಂತದ್ದು. ಇವರ “ನೆಲದ ಮೇಲಣ ನಕ್ಷತ್ರಗಳು” ಕವನ ಸಂಕಲನದ ಪ್ರತಿ ಒಂದು ಕವನಗಳು ಇಂದಿನ ಮಕ್ಕಳ ಜೀವಕ್ಕೆ ದಾರಿ ದೀಪವಾಗಿವೆ. ವ್ಯಕ್ತಿ ಚಿತ್ರಣ ಮತ್ತು ವೈವಿದ್ಯಮಯ ಕೌಶಲ್ಯತೆಯಿಂದ ತುಂಬಿದ್ದು, ನಮ್ಮ ನಾಡಿನ ಹೆಮ್ಮೆಯ ಗಣ್ಯರ ಬಗ್ಗೆ ಅರಿಯಬಹುದಾಗಿದೆ. ಇವರು ರಚಿಸಿರುವ
‘ಸರಳತೆಯ ಸಿರಿ ‘ ಎಂಬ ಕವಿತೆಯು ನನಗೆ ಬಹಳ ಆಪ್ತವಾಯಿತು.

ಸರಳತೆಯ ಸಿರಿ ಶ್ರೀ ಸಿದ್ದೇಶ್ವರ ಗುರುವರ
ಜ್ಞಾನ ಯೋಗಾಶ್ರಮದ ಕರುಣಾಳು ಶ್ರೀವರ.

ಆಸೆಗಳನು ಜಯಿಸಿದ ನವ ಯುಗದ ಬುದ್ಧ
ಕಿಸೆಯಿರದ ಅಂಗಿಯ ನಸು ನಗುವ ಸಂತ.

ಕಲಿಗಾಲದ ಕಡು ಸೋಜಿಗ ಆ ತ್ಯಾಗ ಜೀವನ
ಮರಳಿ ಬನ್ನಿರಿ ಮತ್ತೇ ಬೆಳಗಲು ಈ ಭುವನ.

ಇಂತಹ 43 ಕವನಗಳನ್ನು ಹೊಂದಿರುವ “ನೆಲದ ಮೇಲಣ ನಕ್ಷತ್ರಗಳು ” ನಮ್ಮ ಮಾನಸಿಕ ಚಿಂತನೆಗಳನ್ನು ಶುದ್ಧಗೊಳಿಸುತ್ತವೆ.

‘ನೆಲದ ಮೇಲಣ ನಕ್ಷತ್ರಗಳು’ ಕವಿ ವೀರೇಶ.ಬ. ಕುರಿ ಸೋಂಪೂರ

ಇವರು ರಚಿಸಿರುವ ಮತ್ತೊಂದು ಕೃತಿ “ಪುಟಕ್ಕಂಟಿದ ಪತಂಗ “. ಕಾವ್ಯ ಪ್ರಕಾರಗಳಲ್ಲಿ ಒಂದಾದ ” ತನಗ ” ಪ್ರಕಾರದಲ್ಲಿ ಮೂಡಿರುವ ಈ ಕೃತಿಯು ಇವರ
ನಿಪುಣತೆಯನ್ನು ಗಟ್ಟಿಗೊಳಿಸಿದೆ. ಸೂಕ್ಷ್ಮತೆ ಮತ್ತು ನೈಜ್ಯತೆಯನ್ನು ಬಿಂಬಿಸುವ ಇವರ ಬರಹಗಳು,ಇವರಿಗಿರುವ ಸಾಹಿತ್ಯದ ಗಂಭೀರತೆಯನ್ನು ತಿಳಿಯಬಹುದಾಗಿದೆ.

ಇವರು ರಚಿಸಿರುವ ತನಗಗಳು ಸಮಾಜಕ್ಕೆ ಸಂದೇಶವೇ ಆಗಿವೆ ಎಂದರೆ ತಪ್ಪಾಗಲಾರದು.

ಎಲ್ಲಿಂದಲೇ ಬರಲಿ
ಒಳಿತ ಸ್ವೀಕರಿಸು
ಧುರಭಿಮಾನ ಬಿಟ್ಟು
ಲೇಸ ಪುರಸ್ಕರಿಸು.

ಕೆರೆಗಳ ಕೊಂದರು
ದುರಾಸೆಯ ನರರು!
ಪರಿಣಾಮ ಗಂಭೀರ
ನೋಡಿರಿ ಬೆಂಗಳೂರು!

ತಾಯಿಭಾಷೆ ಕನ್ನಡ
ನಮಗದು ಉಸಿರು
ಬಾಯೊಳು ಕನ್ನಡವು
ಸದಾ ಹಚ್ಚಹಸಿರು.

ಶಾಸ್ತ್ರೀಜಿಯಂತವರು
ಎಷ್ಟು ಜನ ಈಗಿಲ್ಲಿ?!
ಸ್ವಹಿತಾಸಕ್ತಿಗಾಗಿ
ದೊಡ್ಡ ದೊಡ್ಡ ಕೂಗಿಲ್ಲಿ!!

ಇಂತಹ ಅದ್ಭುತ ತನಗಗಳು ಸ್ಫೂರ್ತಿದಾಯಕವಾಗಿವೆ.

ಶ್ರೀ ವೀರೇಶ ಬ ಕುರಿ ಸೋಂಪುರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಸರ್ ನಿಮ್ಮಿಂದ ಮತ್ತಷ್ಟು ಇಂತಹ ಉತ್ತಮ ಕೃತಿಗಳು ಎಲ್ಲರಿಗೂ ಓದಲು ದೊರಕಲಿ.


  • ಮೀನಾ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW