ಆಶಾ.ಎನ್.ಎಂ. ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಮನಸೆಲ್ಲ ಮುದುಡಿದೆ
ಭಾವಜ್ವಾಲೆಗೆ ಸಿಲುಕಿ
ಕನಸೆಲ್ಲ ಕದಡಿದೆ
ಬಿರುಗಾಳಿಯು ಬೀಸಿ
ಮರೆಯಲಾಗದ ನಿನ್ನ ನೆನಪೇ
ಬಿಡದೆ ಮಾರ್ದನಿಸಿ
ಭಾವತರಂಗಕೆ
ಬೇಸರವ ಹೊದಿಸಿ
ನಿನ್ನ ನೆನಪೇ ಭೋರ್ಗರೆದು
ಜಲಪಾತವು ಧುಮ್ಮಿಕ್ಕಿ
ಮನವೀಣೆಯು ಕಂಪಿಸಿದೆ
ನಿನ್ನ ನೆನಪನೇ ಮೀಟಿ
ಭಾವದಲೆಯಲಿ ಅಲೆದು
ಸಪ್ತ ಸಾಗರ ದಾಟಿ
ಮೋಡದಾ ದೋಣಿಯಲಿ
ಕ್ಷಿತಿಜವನೆ ಬೆದಕಿ
ಮೌನರಾಗದಲಿ
ನೀರವತೆಯೆ ಮಿಡುಕಿ
ಬಳಲಿದೆ ಈ ಮನ
ನಿನ್ನನೇ ಹುಡುಕಿ..!
- ಆಶಾ.ಎನ್.ಎಂ.
