ಬಾಗಲಕೋಟೆ ಜಿಲ್ಲೆಯ ಇಲಕಲ್ ನವರಾದ ಕನ್ನಡ ಉಪನ್ಯಾಸಕರಾದ ಶಂಕರಾನಂದ ಹೆಬ್ಬಾಳ ಅವರ ಒಂದು ಕವಿತೆ ಓದುಗರ ಮುಂದಿದೆ ತಪ್ಪದೆ ಓದಿ ಮತ್ತು ಶೇರ್ ಮಾಡಿ…
ಅಕ್ಕರೆ ತೋರುವವರ ಜಗದೊಳಗೆ
ತೊರೆದೆಯೇನು ಸಖ
ಅಕ್ಕರವನು ಕಲಿಸಿದವರ ಮರೆಯುತ
ಮೆರೆತೇಯೇನು ಸಖ
ಸೊಕ್ಕಿನಿಂದ ಎದೆಸೆಟಿಸಿ ಗರ್ವದಲಿ
ಬಾಳುವುದು ಎಷ್ಟು ಸರಿ
ಮುಕ್ಕಣ್ಣನಿಗೂ ಅವಿರತ ಅನೃತವನು
ಎರೆತೇಯೇನು ಸಖ
ಹಕ್ಕಿಯಂತೆ ಸಂಸಾರದ ಸಂಕೋಲೆಯಲಿ
ಸಿಲುಕಿ ಇರಲಾದೀತೇ
ತಕ್ಕಡಿಯಲಿ ತೂಗುತ ಅಹಮಿಕೆಯನು
ತೆರೆದೆಯೇನು ಸಖ
ಚಕ್ಕಡಿಯಲಿ ಉನ್ಮತ್ತನಾಗಿ ಸವಾರಿಯ
ಮಾಡದಿರು ಮಿತ್ರ
ತಿಕ್ಕಲು ಬುದ್ದಿಯಿಂದ ಸವಿಹೃದಯವನು
ಕೊರೆದೆಯೇನು ಸಖ
ಉಕ್ಕಿಬರುವ ರೋಷವನು ಹಿಡಿದಿಡುವ
ಸಮಯಬಂದೀತು ಅಭಿನವ
ದಕ್ಕದಿರುವ ಸಂಪತ್ತಿಗಾಗಿ ಒತ್ತಂಬದಿ
ಕರೆದೆಯೇನು ಸಖ
- ಶಂಕರಾನಂದ ಹೆಬ್ಬಾಳ – ಕನ್ನಡ ಉಪನ್ಯಾಸಕರು, ಇಲಕಲ್ಲ, ಬಾಗಲಕೋಟ ಜಿಲ್ಲೆ.