ನನ್ನ ಬದುಕಿನ ಪುಟಗಳಲ್ಲಿ ನೀನೊಂದು ಪ್ರತ್ಯೇಕ ಪುಟವಾಗಿ ನಿಂತಿರುವೆ….ಕವಿ ನಿಜಗುಣಿ ಎಸ್ ಕೆಂಗನಾಳ ಅವರ ಲೇಖನಿಯಲ್ಲಿ ಅರಳಿದ ಪ್ರೇಮ ಗೀತೆ, ತಪ್ಪದೆ ಮುಂದೆ ಓದಿ…
ನಿನಗಾಗಿ ಒಂದು
ಸುಂದರವಾದ ಕವಿತೆ ಬರೆದೆ.
ಆ ಕವಿತೆಯಲ್ಲಿ ನೀನು
ನನ್ನ ಕನಸಿನ ಬದುಕಿಗೆ
ರಾಣಿಯಂತೆ ಕಂಡಿರುವೆ.
ಓ ನನ್ನ ಪ್ರೇಮವೇ.
ನನ್ನ ಬದುಕಿನ ಪುಟಗಳಲ್ಲಿ
ನೀನೊಂದು ಪ್ರತ್ಯೇಕ
ಪುಟವಾಗಿ ನಿಂತಿರುವೆ
ಆ ಪುಟದ ಕೊನೆಯ
ಸಾಲಿನಲ್ಲಿ ನಾನೊಂದು
ನೀ ಬಯಿಸಿದ ಪ್ರೇಮದ
ಹಕ್ಕಿಯಾಗಿ ನಿಂತಿರುವೆ
ಓ ಪ್ರೇಮವೇ.
ಪ್ರತಿಯೊಂದು ಸಾಲುಗಳು
ನಿನ್ನ ಪ್ರೀತಿಯ ಆಳವಾದ
ಮಾತುಗಳಿಂದ ಕುಡಿದ
ಮುತ್ತು ರತ್ನಗಳಿಂದ ಕುಡಿರುವ
ರಸಿಕತೆಯ ಸಾಲುಗಳು
ನೀ ಕೇಳು ಓ ಪ್ರೇಮವೇ.
ಈ ನನ್ನ ಮನಸೆಂಬ
ಅರಮನೆಯಲ್ಲಿ ನೀನೇ
ನನ್ನ ನಾಯಕಿಯಾಗಿ
ಈ ಕವಿತೆಯ ಪುಟಗಳಿಗೆ
ದೊರೆಸಾನಿಯಾಗಿ ನಿಂತಿರಲು
ನಾ ಮಣ್ಣಲ್ಲಿ ಮಣ್ಣಾಗಿ
ಹೋಗಿರುವೆ ನೀ ಕೇಳು
ಓ ಪ್ರೇಮವೇ.
- ನಿಜಗುಣಿ ಎಸ್ ಕೆಂಗನಾಳ – ಸಾಹಿತಿಗಳು, ರಂಗಭೂಮಿ ಕಲಾವಿದರು, ಕಲಬುರಗಿ.