‘ಒಂದು ಆದಿಮ ಪ್ರೇಮ’ ಕವನ ಸಂಕಲನ ಪರಿಚಯ

‘ಎಷ್ಟು ಚಂದದ ಸಾವು…ಮಾರಾಯ್ತಿ… ಇದು!!!… ಹೀಗೆ ಪ್ರೀತಿಯಲ್ಲಿ ಬೀಳುವುದು!’… ಜೀವನದ ಅಂತಿಮ ಘಟ್ಟ ಸಾವು.ಇದನ್ನು ಚಂದ ಎನ್ನುತ್ತಾರೆ. ಅಗಾಧವಾದ ಪ್ರೀತಿ ಎಲ್ಲಿದೆಯೋ ಅಲ್ಲಿ ಸಾವಿದೆ ಎಂದರ್ಥ. ಪ್ರೀತಿಸುವುದು ಸಹ ಹಾಗೆ, ಸಾವಿನಷ್ಟೇ ಸಂಭ್ರಮವದು. ಕವಿಯತ್ರಿ ನಂದಿನಿ ಹೆದ್ದುರ್ಗ ಅವರ ಒಂದು ಆದಿಮ ಪ್ರೇಮ ಕವನದಸಂಕಲನದ ಕುರಿತು ದೀಪಿಕಾ ಬಾಬು ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…

ಪುಸ್ತಕ : ಒಂದು ಆದಿಮ ಪ್ರೇಮ
ಲೇಖಕರು : ನಂದಿನಿ ವಿಶ್ವನಾಥ ಹೆದ್ದುರ್ಗ
ಪ್ರಕಾರ : ಕವನ ಸಂಕಲನ
ಪ್ರಕಾಶನ : ವೀರಲೋಕ
ಬೆಲೆ : ೧೨೮.೦೦

“ಮತ್ತೆ-ಮತ್ತೆ ಕಾಡುವ ಅಮಲಿದೆ ಈ ಆದಿಮ ಪ್ರೇಮ ಕಾವ್ಯ ಸಂಕಲನದಲ್ಲಿ”

ಕವಿಯ ಕಾವ್ಯ ಎಂದರೆ ಅದೊಂದು ಬಗೆಯ ಧ್ಯಾನ. ಒಂದು ಸಮಾಧಿಯಲ್ಲಿ ಕೂತು ಸುಮ್ಮನೆ ಧ್ಯಾನಿಸುವುದೇ ಕವಿತೆ. ಎಲ್ಲರೂ ಕವಿಯಾಗಬಹುದೇನೋ ಆದರೆ ಕವಿ ಬರೆದದ್ದೆಲ್ಲ ಕಾವ್ಯವೇನಲ್ಲ, ಕಾವ್ಯವದು ಅಮಲು ನಶೆ ಏರಿಸಿಕೊಂಡು ಧೇನಿಸುವುದಿದೆಯಲ್ಲ, ಅಬ್ಬಾ! ಅದರ ಒಳ ಹೊಕ್ಕು ನೋಡಬೇಕು ನೀವು ಅವಳು ಉಸಿರಿಸುವ ಚಂದ ಭಾಷೆಯನ್ನು ಅಮಲು ಗಣ್ಣಿನ ಬೆಡಗಿಗೆ ಪ್ರೀತಿಯಲ್ಲಿ ಮುಳುಗಿಸಿ ತೇಲಿಸಿರುವ ರೋಮಾಂಚನದಿಂದ ಓಲೈಸಿ, ಸಾವಿನ ಬೀದಿಯಲ್ಲಿ ಮೆರವಣಿಗೆ ಹೊರಟು, ಅಂಗಳದ ದಾಸವಾಳವ ಶಿವನಿಗರ್ಪಿಸಿ, ಪ್ರಿಯಕರನ ನೆನಪಲ್ಲಿ ಚಹಾಗೆ ಹದವಾಗಿ ಸೊಪ್ಪು ಬೆರೆಸಿ ಮತ್ತೆ ಕೂರುತ್ತಾ…ಳೆ ತುಸು ಮೆಲ್ಲ ಪಿಸುಗುಡಲು ಹೀಗೆ ಅವಳೆಷ್ಟು ಚಂದ. ಅವಳೆಂದರೆ ನಾನು ಮತ್ತೇರಿಸಿಕೊಂಡ ಚಂದನನೆಯ ಕಾವ್ಯ.

‌‌‌ಮಧ್ಯಾಹ್ನವದು ಮೌನವಾಗಿದ್ದು ನಿಮ್ಮಿಂದಲೇ, ಅದು ಮೌನವಾಗುವ ಸಮಯವಲ್ಲ ತೂಗಡಿಕೆಯ ಸಮಯವಿರಬಹುದು ಆದರೆ ಇಲ್ಲಿ ಮೌನವಾಗುವ ಕವಯಿತ್ರಿ ಮಾತಾಗಿದ್ದಾರೆ ಅಸಲಿಗೆ ಇಲ್ಲಿ ಯಾವ ಕಾಲವನ್ನು ವರ್ಣಿಸಲಾಗದು ವರ್ಣನೆಗೆ ಎಂಥಹ ಕಾಲವಾದರೂ ಅದನ್ನು ಸೆಳೆಯುವ ಸಾಮರ್ಥ್ಯ ಇರುವುದೇ ರಸಿಕರಲ್ಲಿ ಇಲ್ಲಿ ಕವಿಯೂ ತನ್ನ ರಸಿಕತೆಯನ್ನೂ ಪದಗಳಲ್ಲಿ ಪಸರಿಸಿದ್ದಾರೆ.

ಸಾಮಾನ್ಯವೆನಿಸುವ ಅಸಮಾನ್ಯವಾದ ಭಾಷೆ ಇದೊಂದು ಭಾವತರಂಗ. ಕಾವ್ಯ ಲೋಕದೊಳಗಿನ ಅಲೆದಾಟ ಎಷ್ಟೊಂದು ಹಿತಕರ, ಇಲ್ಲಿನ ಪ್ರತಿ ಕವಿತೆಯ ಬಗ್ಗೆ ಹೇಳುವುದ ಬರೆಯುವುದ ಅಥವಾ ಹೀಗೆ ಇದೇ ಸಮಾಧಿಯಲ್ಲಿ ಕೂತು ಮತ್ತೆ ಮತ್ತೆ ಧ್ಯಾನಿಸಿಕೊಳ್ಳುವುದ…?

“ಒಂದು ಆದಿಮ ಪ್ರೇಮ” ಇಲ್ಲಿನ ಕವಿತೆಗಳು ನಶೆ ಏರಿಸಿವೆ ಎಂದರೆ ನಂಬಲೇಬೇಕು. ಪ್ರೇಮ ಯಾರ ಬದುಕಲ್ಲಿ ಇಲ್ಲ ಹೇಳಿ, ಎಲ್ಲರಲ್ಲೂ ಯಾವುದೋ ಒಂದು ತಿರುವಲ್ಲಿ ಸಿಕ್ಕು ಇಡೀ ಬದುಕನ್ನೇ ಆವರಿಸಿಕೊಂಡು ಬಿಡುತ್ತದೆ. ಎಲ್ಲವನ್ನು ಅಡಗಿಸಿಕೊಳ್ಳುವ ಪರಮಶಕ್ತಿ ಇದೆ ಎಂದರೆ ಅದು ಈ ಪ್ರೇಮಕ್ಕೆ ಮಾತ್ರ.

ನಂದಿನಿ ವಿಶ್ವನಾಥ ಹೆದ್ದುರ್ಗ

ಅರ್ಪಣೆ

“ನಿನ್ನನ್ನು ಮಾತ್ರ ಪ್ರೀತಿಸಲು
ಸಾಧ್ಯವಾಗುವುದು ನಿಸ್ಸಹಾಯಕತೆ!”

ನಮ್ಮಲ್ಲಿರುವ ನಿಸಹಾಯಕತೆಯನ್ನು ಪ್ರೀತಿಸುವುದು ಅಸಾಧ್ಯವ? ನಮ್ಮನ್ನು ಮಾತ್ರ ಪ್ರೀತಿಸುವಿಕೆಯನ್ನು ಒಳಗೊಂಡಿದೆ ಎಂದರೆ ಅದಕ್ಕೊಂದು ಅರ್ಪಣೆ ಪ್ರೀತಿಯೇ ಸರಿ.

“ಆ ಸಂಜೆ ಮಳೆ ಬೀಳಬಹುದು”

“ಛಿತ್ರ ಮಾಡಿಕೊಳ್ಳಬಾರದು
ವೃಥಾ ಹೊದ್ದ ವಸ್ತ್ರಗಳನ್ನು
ಸೂಜಿಯನ್ನು ಪೂಜಿಸಬೇಕು”

ಈ ಸಾಲುಗಳಲ್ಲಿ ಕಾಡುವ ತೀವ್ರಭಾವಕ್ಕೆ ಶರಣು, ಬದುಕನ್ನು ನೋಡುವ ಬಗೆಯಲ್ಲಿ….ಜೀವನವನ್ನು ಹೇಗೆಂದರೆ ಹಾಗೆ ಹಾಳು ಗೆಡವಿಕೊಳ್ಳದೇ ನಮ್ಮದೇಯಾದ ಅಸ್ತಿತ್ವಕ್ಕೆ ಸರಿಯಾದ ಜೀವನೋಪಾಯವನ್ನು ಸೃಷ್ಟಿಸಿಕೊಂಡು ಮುನ್ನಡೆಯಬೇಕು ಅದಕ್ಕಾಗಿ ವಹಿಸಿದ ಶ್ರಮದ ಬಗ್ಗೆ ಅರಿವಿರಬೇಕು. ಒಂದು ಅಸ್ತಿತ್ವ ಸಿಕ್ಕ ಮೇಲೆ ಹಿಂದೆ ನಡೆದು ಬಂದ ಹಾದಿಯನ್ನು ಸ್ಮರಿಸಿಕೊಂಡು ಮುನ್ನಡೆಯ ಬೇಕೆಂಬ ಸಾರಾಂಶವೊಂದಿದೆ.

“ನೆನೆಯಿಟ್ಟು
ತೊಳೆದೆ.
ನನ್ನ ಪದ್ಯ
ಸದ್ಯ
ಪ್ರೇಮ ಬಿಡಲಿಲ್ಲ”!!

ಅದೆಂತಹ ಅಗಾಧ ಮಾಂತ್ರಿಕ ಶಕ್ತಿಯಿದೆ ಈ ಸಾಲುಗಳಲ್ಲಿ… ಕಾಡಿದ್ದು ಮಾತ್ರ ಆಗಾಢ. ಪ್ರೇಮದಲ್ಲಿ ನಂಬಿಕೆ ಬಲವಾಗಿದ್ದರೆ ಎಷ್ಟೇ ಆಯಸ್ಸು ಕಳೆದರೂ ವಿರಹ ವೇದನೆಯಲ್ಲೂ ಬಳಲಿದ್ದರೂ ಅದರ ಮಹತ್ವ ಮಾತ್ರ ಅಷ್ಟೇ ಗಾಢ. ಅದೆಂದಿಗೂ ತನ್ನ ಸ್ಥಿರತೆಯನ್ನು ಕಳೆದುಕೊಂಡಿದ್ದಿಲ್ಲ, ಮತ್ತೆ ಪುನಃ ಪರೀಕ್ಷಿಸಲಾದರೂ ಏನಿದೆ? ನೂರಲ್ಲ ಸಾವಿರ ಯುಗಗಳಿಗೂ ಇದರ ಅಸ್ತಿತ್ವ ಮಾತ್ರ ಹಾಗೆ ಇದ್ದೇ ಇರುತ್ತದೆ, ಎಂಬ ಅಸಲು ತನದ ಮಾಂತ್ರಿಕ ಪದಗನ್ನೊಳಗೊಂಡ ಸಾಲುಗಳಿವೆ ಇಲ್ಲಿ.

”ಕಳಚಿಕೊಳ್ಳುತ್ತಲೇ ಹೋಗುತ್ತದೆ
ಹೀಗೆ
ಒಂದೊಂದೆ ಒಂದೊಂದೆ ಬಂಧ
ಬಿಡಿಸಲಾಗದ್ದು ಎನ್ನುವಾಗಲೇ
ಬಿಟ್ಟು ಹೊರಡುತ್ತದೆ”

ವಿದಾಯ 

ಇಲ್ಲಿ ಯಾರನ್ನು ನೆಚ್ಚಿಕೊಂಡು ಬದುಕಲಾಗದು. ಹಾಗೆ ಯಾವುದೋ ತಿರುವಲ್ಲಿ ಸಿಕ್ಕುವ ಬಂಧಗಳನ್ನು ಮೆಚ್ಚಿಕೊಂಡು ತಮ್ಮ ಜೀವನವನ್ನೇ ಅವರಿಗರ್ಪಿಸಿ ಕೊಳ್ಳುವ ಕಾಲ ಘಟ್ಟದಲ್ಲಿ ವಿಧಿಯು ಎಸೆಯುವ ಸಂಚಿಗೆ ಬಂಧಗಳು ಕಳಚಿಕೊಳ್ಳುತ್ತವೆ ಒಂದೊದಾಗಿಯೇ. ಯಾವುದನ್ನೂ ಬಿಟ್ಟಿರಲಾರದಷ್ಟು ಹಚ್ಚಿಕೊಂಡಿರುತ್ತೇವೆ ಅದೇ ಬಂಧಗಳ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದಾಗ ವಿದಾಯದ ನೋವೊಂದು ಹಾಗೆ ಶಾಶ್ವತವಾಗಿ ಉಳಿದು ಬಿಡುತ್ತದೆ. ಮತ್ತಿಲ್ಲಿ ಒಂದು ವಿಷಾಧದ ನೋವಿನ ಸಂಗತಿಯನ್ನು ಹೊಂದಿರುವ ಕವಿತೆಯ ಆಶಯ ಅಡಕವಾಗಿದೆ.

“ನಿಮಗೆ ಗೊತ್ತೇ?
ಉಸಿರು ದಾಟುವವಳ
ಹೃದಯದಲ್ಲಿ ಯಾವತ್ತಿಗೂ
ಒಂದು ತಕ್ಕಡಿ ತೂಗುತ್ತಿರುತ್ತದೆ”

ತಕ್ಕಡಿ 

ಹೆಣ್ಣು ಮನೆಯಿಂದ ಕಾಲ್ಕಿತ್ತು ಆಚೆ ಹೊರಡುವಾಗ ಅವಳೆದೆಯ ತುಮುಲತೆಗಳು ಅವಳನ್ನು ನೂರೆಂಟು ಬಾರಿ ಪ್ರಶ್ನಿಸಿ ಒಂದು ಭದ್ರತೆಯ ಕವಚವನ್ನು ಎದೆಗೆ ತೊಟ್ಟು ಹೊಸಿಲು ದಾಟಲು ಮುಂದಾಗುತ್ತಾಳೆ, ಮನೆಯ ಹೊಸಿಲೆಂದರೆ ಲಕ್ಷ್ಮಣ ರೇಖೆ ಎಂತಲೂ ಹೇಳಬಹುದು. ತನಗೆ ಸಿಕ್ಕಿರುವ ಸ್ವತಂತ್ರತೆಯನ್ನು ಸದುಪಯೋಗ ಪಡಿಸಿಕೊಳ್ಳುವ ಬಗೆಯಲ್ಲಿ ಹತ್ತಾರು ಕಾರ್ಯಗಳ ಗಮನಕ್ಕಿರಿಸಿಕೊಂಡು, ಮನೆತನದ ಕುಲ ಗೌರವದ ಬಗ್ಗೆ ಎಚ್ಚರಿಕೆಯ ಹೆಜ್ಜೆಯ ನಿಡುವ ಹೆಣ್ಣು ಅಂತರಾಳದಲ್ಲಿ ಸದಾ ಹೆಚ್ಚೆತ್ತಿರುತ್ತಾಳೆ. ಹೆಣ್ಣಿನ ಅಂತರಾಳದ ಸೂಕ್ಷ್ಮತೆಯನ್ನು ಸಾರುವ ಸಾಕ್ಷ್ಯತೆಯ ಮಾರ್ಮಿಕ ಕವಿತೆ ಇದಾಗಿದೆ.

“ಒಲವು
ಹಾಗೆ
ವಿಪರೀತ
ದಣಿಸುತ್ತದೆ”

ದಣಿವೆಂದರೆ ಆಯಾಸವಲ್ಲ, ಪ್ರೀತಿಯು ಕಾಡುವುದು ಒಂದು ಹಿತವಾದ ಭಾವದಲ್ಲಿ, ಅದರ ಬಳಲುವಿಕೆಯ ರೋಮಾಂಚನವೇ ನೆನಪುಗಳ ಬಿತ್ತಿಯಲ್ಲಿ ದಣಿಸುವುದು ಇದೊಂದು ಚಂದನೆಯ ಸಜೆ.

“ಒಡಲು ತಿದ್ದುವಾಗಿದ್ದ ಪುರುಸೊತ್ತು
ಬುದ್ದಿ ಕೂಡಿಸುವಾಗಿಲ್ಲ
ಬಿಕನಾಸಿ ಬ್ರಹ್ಮನಿಗೆ
ಸರಸೋತಿ ಸರಸ ಮಿತಿ ಮೀರಿತ್ತು ಕಾಣುತ್ತೆ”

ಎಷ್ಟು ತ್ರಾಸೋ ಶಿವನೇ

ಕೂತು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದಂತೆ ಹಾಗೆ ಒಂದೇ ದಿನಕ್ಕೆ ಮೂರು ಹೊತ್ತು ತಿಂದರೂ ಕಡಿಮೆ, ಚಹಾ ಪಾನಿಯೂ ಎಂಬಂತೆ ಮೇಲಿಂದ ಮೇಲೆ ಏನಾದರೂ ಸರಿ ಹೊಟ್ಟೆಗೆ ಆಹಾರ ನೀಡುತ್ತಲೇ ಇರುತ್ತೇವೆ. ಅದೆಷ್ಟು ದೊಡ್ಡದಿರಬೇಕು ಈ ಒಡಲು. ಆ ಬ್ರಹ್ಮ ಅದೆಷ್ಟು ಪುರುಸೊತ್ತು ಇದ್ದುಕೊಂಡು ಈ ಒಡಲನ್ನು ಮಾಡಿದನೋ, ಏನು ತಿಂದರೂ ಜೀರ್ಣಿಸಿಕೊಂಡು ಬಿಡುತ್ತದೆ, ಆಯ್ಕೆಗಳೆಲ್ಲ ಸ್ವರೂಪದ್ದೇ ಹೌದು ಎಂಬಂತಹ ಪ್ರಶ್ನೆಗಳನ್ನೇ ಮೂಡಿಸುತ್ತದೆ. ಹಾಗೆ ಈ ತಲೆಯಲ್ಲಿ ಬುದ್ದಿ ಒಂದಿಷ್ಟಿಲ್ಲ! ದೇವರಿಗೆ ಪುರುಸೊತ್ತಿಲ್ಲದಿದ್ದಾಗ ಈ ತಲೆಯನ್ನು ಸೃಷ್ಟಿರಬೇಕು. ಜ್ಞಾನದ ತಿಳುವಳಿಕೆಯಾದರೂ ಇಲ್ಲದೇ ಇದ್ದರೇ ವ್ಯಕ್ತಿತ್ವವಾದರೂ ಎಲ್ಲಿಹುದು? ಉಡಾಫೆ ಮಾತುಗಳಲ್ಲಿ ದೇವರನ್ನೇ ಪ್ರಶ್ನಿಸುವಂತಹ ಶಿವ-ಶಿವೆಯರ ಜಗತ್ಜಾಹಿರಾತಿನ ಹಲವಾರು ವಿಚಾರಗಳನ್ನು ಪ್ರಸ್ತಾಪ ಮಾಡುವ ಪುರಾಣ ಗ್ರಂಥದ ನೀತಿಗಂಟನ್ನು ಬಿಚ್ಚಿಡುವ ಈ ಕವಿತೆ ಮನಸ್ಸಿಗೆ ಒಂದು ಪುರಾತನವಾದ ನೆಮ್ಮದಿಯು ದೊರೆತಂದಾಗುತ್ತದೆ.

“ಅಮ್ಮನಾಗುವುದೆಂದರೆ
ಹರೆ ಕಡಿದು
ಬೇರಿಳಿಸಿಕೊಳ್ಳಬೇಕು”

ಅಮ್ಮನಾಗುವುದೆಂದರೆ

ಹುಣ್ಣಿದ ಪ್ರತಿ ಹೆಣ್ಣು ತಾಯಿಯೇ ಹೌದು. ಅವಳ‌ ಮಮತೆ, ತ್ಯಾಗ, ಕರುಣೆ, ಪ್ರೀತಿಗೆ ಸೋಲದವರ್ಯಾರು? ತನ್ನೆಲ್ಲಾ ಕಷ್ಟಗಳನ್ನು ಬದಿಗೊತ್ತಿ ತನ್ನವರ ಸಲವುವ ಅವಳಿಗೆ ದೇವತೆ ಎನ್ನಬಹುದು. ಆದರೆ ಮಕ್ಕಳನ್ನು ಹೆತ್ತ ಮಾತ್ರಕ್ಕೆ ಅವಳು ಒಳ್ಳೆಯ ತಾಯಿಯಾಗಲಾರಳು. ಮಕ್ಕಳಿಗೆ ಸಂಸ್ಕಾರ ಒಳ್ಳೆಯ ನಡತೆ ಕಲಿಸುತ್ತಾ ಅವರನ್ನು ಅವರ ಗುರಿಯೆಡೆಗೆ ತಲುಪಿಸಲು ಮಾರ್ಗದರ್ಶನ ನೀಡುವ ಸಲುವಾಗಿ ತಾ ಕಂಡ ಕನಸುಗಳ ಬಲಿಕೊಟ್ಟು ತನ್ನ ಮಕ್ಕಳಲ್ಲಿಯೇ ಜೀವನ ಕಾಣುವ ತಾಯಿಯರ ತ್ಯಾಗ ಒಂದು ರೀತಿಯ ಮರದಿಂದ ರಂಬೆ ಕಡಿದು ಅದನ್ನು ನೆಲಕ್ಕಿಳಿಸಿ ಅದು ಬೇರು ಬಿಟ್ಟು ಚಿಗುರುವಾಗ ಸಿಗುವ ಆನಂದವೇ ಈ ಅಮ್ಮನಾಗುವ ಉಮ್ಮೇದ. ಅದೆಂತಹ ಅದ್ಬುತವಾದ ಪರಿಯೋ ಇದು ಮರದಿಂದ ಮರ ಹುಟ್ಟುವ ಕ್ರಿಯೆ……ಹೆಣ್ಣು ಮಕ್ಕಳ ಮದುವೆ ಮಾಡಿ ಅವರನ್ನು ಮತ್ತೊಂದು ಮನೆ ಬೆಳಗಿಸಲು ಕಳುಹಿಸಿ ಮತ್ತೆ ಅವರಿಗೆ ಮಕ್ಕಳಾದಾಗ ತವರಿಗಾಗುವ ಅನಂದ….ವರ್ಣನಾತೀತ.

“ಕೆಲವು ವಿವರಗಳೇ ಹಾಗೆ
ಬರೆಯಲಾಗದು
ಮರೆಯಲಾಗದು”

ಉತ್ಪಾತ

ಇಲ್ಲಿ ಎಲ್ಲವನ್ನು ಎಲ್ಲರಲ್ಲಿಯೂ ಹೇಳಿಕೊಳ್ಳಲಾಗದು, ಎಲ್ಲರಲ್ಲಿಯೂ ಆ ನಂಬಿಕೆ ಮೂಡದು. ಅದೇಷ್ಟೋ ನಮ್ಮ ಅನುಭವಕ್ಕೆ ಬರುವ ವಿಷಯಗಳ ಬಗ್ಗೆ ಹೇಳಲಾಗದೆ, ಬರೆಯಲಾಗದೆ, ಮರೆಯಲಾಗದೆ ಮತ್ತೆ-ಮತ್ತೆ ನೆನಪಿಸಿಕೊಂಡು ಅನುಭವಕ್ಕೆ ತಂದುಕೊಂಡು ನಮ್ಮೊಳಗೆ ನಾವೇ ಅನುಭೂತಿಗೆ ಶರಣಾಗುವುದೇ ಇಲ್ಲಿನ ವಿಶೇಷ.

“ಎಷ್ಟು ಚಂದದ ಸಾವು
ಮಾರಾಯ್ತಿ
ಇದು!!!
ಹೀಗೆ
ಪ್ರೀತಿಯಲ್ಲಿ ಬೀಳುವುದು!”

ಎಷ್ಟು ಚಂದದ ಸಾವು

ಜೀವನದ ಅಂತಿಮ ಘಟ್ಟ ಸಾವು. ಇದನ್ನು ಚಂದ ಎನ್ನುತ್ತಾರೆ ಎಂದರೆ ಅವರು ಬದುಕನ್ನು ಸಂಭ್ರಮಿಸಿರುತ್ತಾರೆ. ಅಗಾಧವಾದ ಪ್ರೀತಿ ಎಲ್ಲಿದೆಯೋ ಅಲ್ಲಿ ಸಾವಿದೆ ಎಂದರ್ಥ. ಪ್ರೀತಿಸುವುದು ಸಹ ಹಾಗೆ, ಸಾವಿನಷ್ಟೇ ಸಂಭ್ರಮವದು. ಒಂದು ಅಂತಿಮ ದಡ ಮುಟ್ಟುವ ರೀತಿ ಎಲ್ಲವೂ ಇಲ್ಲಿಗೆ ಕೊನೆ ಎಂಬಂತೆಯೇ. ಗಾಢ ಎಂಬಂತಹ ಆಕರ್ಷಣೆ ಸಾವು ಮತ್ತು ಪ್ರೀತಿ. ಕ್ಷಣಗಳ ಹೂಡಿಕೆ ಮಾಡಿ ಕೊನೆಗಾಲಕ್ಕೆ ತಲುಪಿದಾಗ ಕಣ್ಣಂಚಲ್ಲಿ ತೃಪ್ತಕರವಾದ ಒಂದು ನೆಮ್ಮದಿಯ ನಿಟ್ಟುಸಿರು ಬಿಡುವ ಗಳಿಗೆಯದು ಸಡಗರ…..ಬಲು ಚಂದ ಈ ಸಾವು….ಅಂತೆಯೇ ಈ ಪ್ರೀತಿಯಲ್ಲಿ ಬಿದ್ದು ತನ್ನಿಷ್ಟದವರ ಸೇರುವ ಒಲುಮೆಯ ಸುಗಮ ಹಾದಿ….

ಅಬ್ಬಾ….!!!!!!!

ಎಷ್ಟೆಲ್ಲಾ ಕವಿತೆಗಳು ಉಸಿರಾಡುತ್ತಿವೆ ಇಲ್ಲಿ. ಜೀವನದ ಯಾವುದೋ ತಿರುವಲ್ಲಿ ಪಾತ್ರವಾಗಿ, ಛಾಯೆಯಾಗಿ, ನಾನಾಗಿ, ನೀನಾಗಿ, ದೇವರಾಗಿ, ಆಗಸವಾಗಿ, ಹೂವಾಗಿ, ನೀರಾಗಿ, ಮಣ್ಣಾಗಿ, ಕಂಪಾಗಿ, ತಂಪಾಗಿ…………ಜೀವನದ ಕಣಕಣದಲ್ಲೂ ಉಸಿರಿಸುವಂತಹ ದೇದಿಪ್ಯಮಾನವಾದ ಕಂಗಳ ಅಂಚಲ್ಲಿ ರಂಗೆರಿಸಿಕೊಂಡು ಗಾಢವಾಗಿ ಕಾಡುವ ಕವಿತೆಗಳ ಖಾಜನೆ ಇಲ್ಲಿದೆ. ಇಂತಹ ಕಾವ್ಯ ಕುಸುರಿಯನ್ನು ನಮಗೆ ನೀಡಿರುವ ಕವಯಿತ್ರಿ ನಂದಿನಿ ಹೆದ್ದುರ್ಗ ಮೇಡಂ ಹಾಗೂ ವೀರಲೋಕ ಪ್ರಕಾಶಕರಿಗೂ ಪ್ರೀತಿಯ ಅಭಿನಂದನೆಗಳು.

ಮತ್ತೇ… ಮತ್ತೂ ಕಾಡುವ
ಅಮಲಿದೆ… ಈ
ಒಂದು ಆದಿಮ ಪ್ರೇಮ

ಕವಿತೆಗಳಲ್ಲಿ..

”ಅಮ್ಮನಾಗುವುದೆಂದರೆ
ಹರೆ ಕಡಿದು
ಬೇರಿಳಿಸಿಕೊಳ್ಳಬೇಕು”

ಅಮ್ಮನಾಗುವುದೆಂದರೆ

ಹುಣ್ಣಿದ ಪ್ರತಿ ಹೆಣ್ಣು ತಾಯಿಯೇ ಹೌದು. ಅವಳ‌ ಮಮತೆ, ತ್ಯಾಗ, ಕರುಣೆ, ಪ್ರೀತಿಗೆ ಸೋಲದವರ್ಯಾರು? ತನ್ನೆಲ್ಲಾ ಕಷ್ಟಗಳನ್ನು ಬದಿಗೊತ್ತಿ ತನ್ನವರ ಸಲವುವ ಅವಳಿಗೆ ದೇವತೆ ಎನ್ನಬಹುದು. ಆದರೆ ಮಕ್ಕಳನ್ನು ಹೆತ್ತ ಮಾತ್ರಕ್ಕೆ ಅವಳು ಒಳ್ಳೆಯ ತಾಯಿಯಾಗಲಾರಳು. ಮಕ್ಕಳಿಗೆ ಸಂಸ್ಕಾರ ಒಳ್ಳೆಯ ನಡತೆ ಕಲಿಸುತ್ತಾ ಅವರನ್ನು ಅವರ ಗುರಿಯೆಡೆಗೆ ತಲುಪಿಸಲು ಮಾರ್ಗದರ್ಶನ ನೀಡುವ ಸಲುವಾಗಿ ತಾ ಕಂಡ ಕನಸುಗಳ ಬಲಿಕೊಟ್ಟು ತನ್ನ ಮಕ್ಕಳಲ್ಲಿಯೇ ಜೀವನ ಕಾಣುವ ತಾಯಿಯರ ತ್ಯಾಗ ಒಂದು ರೀತಿಯ ಮರದಿಂದ ರಂಬೆ ಕಡಿದು ಅದನ್ನು ನೆಲಕ್ಕಿಳಿಸಿ ಅದು ಬೇರು ಬಿಟ್ಟು ಚಿಗುರುವಾಗ ಸಿಗುವ ಆನಂದವೇ ಈ ಅಮ್ಮನಾಗುವ ಉಮ್ಮೇದ. ಅದೆಂತಹ ಅದ್ಬುತವಾದ ಪರಿಯೋ ಇದು ಮರದಿಂದ ಮರ ಹುಟ್ಟುವ ಕ್ರಿಯೆ……ಹೆಣ್ಣು ಮಕ್ಕಳ ಮದುವೆ ಮಾಡಿ ಅವರನ್ನು ಮತ್ತೊಂದು ಮನೆ ಬೆಳಗಿಸಲು ಕಳುಹಿಸಿ ಮತ್ತೆ ಅವರಿಗೆ ಮಕ್ಕಳಾದಾಗ ತವರಿಗಾಗುವ ಅನಂದ….ವರ್ಣನಾತೀತ.

“ಕೆಲವು ವಿವರಗಳೇ ಹಾಗೆ
ಬರೆಯಲಾಗದು
ಮರೆಯಲಾಗದು”
ಉತ್ಪಾತ”

ಇಲ್ಲಿ ಎಲ್ಲವನ್ನು ಎಲ್ಲರಲ್ಲಿಯೂ ಹೇಳಿಕೊಳ್ಳಲಾಗದು, ಎಲ್ಲರಲ್ಲಿಯೂ ಆ ನಂಬಿಕೆ ಮೂಡದು. ಅದೇಷ್ಟೋ ನಮ್ಮ ಅನುಭವಕ್ಕೆ ಬರುವ ವಿಷಯಗಳ ಬಗ್ಗೆ ಹೇಳಲಾಗದೆ, ಬರೆಯಲಾಗದೆ, ಮರೆಯಲಾಗದೆ ಮತ್ತೆ-ಮತ್ತೆ ನೆನಪಿಸಿಕೊಂಡು ಅನುಭವಕ್ಕೆ ತಂದುಕೊಂಡು ನಮ್ಮೊಳಗೆ ನಾವೇ ಅನುಭೂತಿಗೆ ಶರಣಾಗುವುದೇ ಇಲ್ಲಿನ ವಿಶೇಷ.

ಮತ್ತೇ…….ಮತ್ತೂ ಕಾಡುವ
ಅಮಲಿದೆ………ಈ
ಒಂದು ಆದಿಮ ಪ್ರೇಮ*

ಕವಿತೆಗಳಲ್ಲಿ……


  • ದೀಪಿಕಾ ಬಾಬು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading