ಎನ್. ಪ್ರಭಾ ಅವರ ‘ಪದ ಹುಡುಕುವ ಆಟ’ ಕೃತಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಮಕ್ಕಳಲ್ಲಿ ಸಮಾನತೆ ಮತ್ತು ಸೋದರತೆಯ ಬೀಜಗಳನ್ನು ಬಿತ್ತಿ ಬೆಳೆಯುವ ಮತ್ತು ಪದಹುಡುಕು ಕೃತಿಗಳನ್ನು ರಚಿಸಿದ್ದಾರೆ. ಇಲ್ಲಿ ಕೊಟ್ಟಿರುವ ಎರಡು ಪುಟಗಳಲ್ಲಿ ಮೊದಲನೆಯದು: ಕುಶಲ ಕರ್ಮಿಗಳನ್ನು ಒಟ್ಟಿಗೆ ತರಲಾಗಿದೆ. ಅದರಲ್ಲಿ ಚಮ್ಮಾರ, ಕಮ್ಮಾರ, ರೈತರು ಬಡಗಿಗಳು ಇರುವಂತೆ ವೈದ್ಯರು, ವಕೀಲರು, ಸಂಗೀತಗಾರರು ಇದ್ದಾರೆ. ಕೆಳಗೆ ಇವರನ್ನು ಪಟ್ಟಿ ಮಾಡಿ, ಮೇಲೆ ಕೊಟ್ಟ ಚೌಕಟ್ಟುಗಳಲ್ಲಿ, ಅಕ್ಷರಗಳನ್ನು ಕೊಟ್ಟು ,ಅವರನ್ನು ಪತ್ತೆ ಹಚ್ಚಿ ಕಂಡುಕೊಳ್ಳಲು, ಅನುವು ಮಾಡಿಕೊಡಲಾಗಿದೆ. ಇದರಿಂದ ಮೂರು ಮುಖ್ಯವಾದ ಸಂಗತಿಗಳನ್ನು ಕಲಿಯುವ ಅವಕಾಶವನ್ನು ಒದಗಿಸುತ್ತದೆ.

ಎನ್. ಪ್ರಭಾ
ಅವು:
೧: ಈ ಎಲ್ಲ ಕುಶಲಕರ್ಮಿಗಳು ಸಮಾನರು ಎಂಬುದನ್ನು.
೨: ಪ್ರತಿಯೊಬ್ಬರು ಇನ್ನೊಬ್ಬರನ್ನು ಅವಲಂಬಿಸಿದ್ದಾರೆ ಎಂಬುದನ್ನು.
೩: ಆದ್ದರಿಂದ ಇವರೆಲ್ಲ ಸೋದರರು ಎಂಬುದೂ ಕೂಡ ಇದರಿಂದ ಸಾಬೀತಾಗಿದೆ.
ಎರಡನೇ ಪುಟದಲ್ಲಿ ಸಂಶೋಧಕರನ್ನು ಕೊಡಲಾಗಿದೆ. ಕೆಳಗೆ ಸಂಶೋಧಕರ ಹೆಸರುಗಳು ಇದ್ದರೆ ,ಮೇಲೆ ಕೊಟ್ಟ ಚೌಕಟ್ಟುಗಳಲ್ಲಿ ,ಅವುಗಳಲ್ಲಿನ ಅಕ್ಷರಗಳ ಸಹಾಯದಿಂದ, ಅವರನ್ನು ಪತ್ತೆ ಹಚ್ಚಿ ಕಂಡು ಕೊಳ್ಳಲು ಅನುವು ಮಾಡಿಕೊಡುತ್ತದೆ.
ಇದರಿಂದ ಮೂರು ಮುಖ್ಯವಾದ ಪಾಠಗಳನ್ನು ಕಲಿಯಬಹುದು.

ಅವು:
೧: ಸಂಶೋಧಕರ ಹೆಸರುಗಳು.
೨: ಪಾಶ್ಚಾತ್ಯ ದೇಶಗಳಲ್ಲಿನ ಸಂಶೋಧಕರ ಜೊತೆ ಜೊತೆಗೆ ಭಾರತೀಯ ಸಂಶೋಧಕರ ಹೆಸರುಗಳು ಇವೆ. ಉದಾ: ಐನ್ ಸ್ಟೈನ್, ನ್ಯೂಟನ್, ಗೆಲಿಲಿಯೋ ರೊಂದಿಗೆ ರಾಮನ್, ರಾಮಾನುಜನ್, ಖೊರೋನೋ ಕೂಡ ಇದ್ದಾರೆ.
೩: ಇವರೆಲ್ಲರೂ ಸಮಾನರು ಎಂಬುದನ್ನು ಕೂಡ ಇದು ಕಲಿಸಿ ಕೊಡುತ್ತದೆ.
ಅಧ್ಯಾಪಕರು ಇವನ್ನು ಬಳಸಿಕೊಂಡು ,ಮಕ್ಕಳಲ್ಲಿ ಮೇಲೆ ಉಲ್ಲೇಖಿಸಿದ ಮೌಲ್ಯಗಳನ್ನು ಬಿತ್ತಿದರೆ,ಅವು ಮುಂದಿನ ದಿನಗಳಲ್ಲಿ ತಾವಾಗಿಯೇ ಹೆಮ್ಮರವಾಗಿ ಬೆಳೆದು ನಿಲ್ಲುತ್ತವೆ. ಸ್ವಾತಂತ್ರ್ಯಕ್ಕೆ , ಸಮಾನತೆ ಮತ್ತು ಸಹೋದರತೆಗಳೆ ಆಧಾರ ಸ್ತಂಭಗಳು. ನಮ್ಮಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿ ಉಳಿಯಲು ಮತ್ತು ಬೆಳೆಯಲು ಈ ಮೌಲ್ಯಗಳು, ಎಷ್ಟು ಮುಖ್ಯ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ ಅಲ್ಲವೇ? ಆದ್ದರಿಂದ ಮಕ್ಕಳಿಗೆ ಮಾತ್ರವಲ್ಲ ಪ್ರಜಾಪ್ರಭುತ್ವಕ್ಕೆ ಕಟಿಬದ್ದವಾದ ಎಲ್ಲರಿಗೂ ಇವು ಮುಖ್ಯವೇ ಸರಿ. ಇಂತಹ ಅಮೂಲ್ಯವಾದ ಪುಸ್ತಕಗಳನ್ನು ಸಂಯೋಜನೆ ಮಾಡಿ, ಪ್ರಕಟಿಸಿದ ನಮ್ಮ ಸಹಪಾಠಿ ಅಂಕಿತದ ಪ್ರಭಾಗೆ ಅಭಿನಂದನೆಗಳು. ಆದ್ದರಿಂದ ಈ ಪುಸ್ತಕಗಳನ್ನು ಎಲ್ಲಾ ಕನ್ನಡಿಗರೂ ಕೊಂಡು ಓದುವ, ಮತ್ತು ತಮ್ಮ ಮಕ್ಕಳಿಗೆ ಓದಿಸುವ ಮೂಲಕ ,ಮೇಲಿನ ಮೌಲ್ಯಗಳನ್ನು ಅಳವಡಿಸಿಕೊಂಡರೆ ಪ್ರಜಾಪ್ರಭುತ್ವಕ್ಕೆ ಕ್ಷೇಮ.
- ರಘುನಾಥ್ ಕೃಷ್ಣಮಾಚಾರ್
